ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪ್ಯೂಮಾ ಜೊತೆ ವಿರಾಟ್ ಕೊಹ್ಲಿ ನಂಟು ಕಟ್: ಇನ್ನುಮುಂದೆ ಅಜಿಲಿಟಾಸ್ ಗೆ ಬ್ರ್ಯಾಂಡ್ ಅಂಬಾಸಡರ್

ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪ್ಯೂಮಾ ಜೊತೆ ಎಂಟು ವರ್ಷದಿಂದ ಇದ್ದ ಒಪ್ಪಂದದಿಂದ ಹಿಂದಕ್ಕೆ ಸರಿದು, ಅಜಿಲಿಟಾಸ್ ಸ್ಪೋರ್ಟ್ಸ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಡರ್ ಆಗಲಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ.
07:39 PM Feb 07, 2024 IST | Ashika S

ನವದೆಹಲಿ: ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು ಪ್ಯೂಮಾ ಜೊತೆ ಎಂಟು ವರ್ಷದಿಂದ ಇದ್ದ ಒಪ್ಪಂದದಿಂದ ಹಿಂದಕ್ಕೆ ಸರಿದು, ಅಜಿಲಿಟಾಸ್ ಸ್ಪೋರ್ಟ್ಸ್ ಸಂಸ್ಥೆಗೆ ಬ್ರ್ಯಾಂಡ್ ಅಂಬಾಸಡರ್ ಆಗಲಿದ್ದಾರೆ ಎನ್ನುವ ಸುದ್ದಿ ವರದಿಯಾಗಿದೆ.

Advertisement

ಜಗದ್ವಿಖ್ಯಾತ ಸ್ಪೋರ್ಟ್ಸ್ ವೇರ್ ಬ್ರ್ಯಾಂಡ್ ಆದ ಪ್ಯೂಮಾ ಜೊತೆ ವಿರಾಟ್​ ಕೊಹ್ಲಿ ನಂಟು 2017ರಲ್ಲಿ ಆರಂಭವಾಗಿತ್ತು. ಎಂಟು ವರ್ಷ ಕಾಲ ಅವರು ಬ್ರ್ಯಾಂಡ್ ಅಂಬಾಸಡರ್ ಆಗಲು 110 ಕೋಟಿ ರೂ ಮೊತ್ತದ ಡೀಲ್ ಆಗಿತ್ತು. ಈಗ ಒಪ್ಪಂದದ ಅವಧಿ ಬಹುತೇಕ ಮುಗಿದಿದೆ.

2023ರ ಮೇ ತಿಂಗಳಲ್ಲಿ ಅಭಿಷೇಕ್ ಗಂಗೂಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್ ಕಂಪನಿಯನ್ನು ಸ್ಥಾಪನೆ ಮಾಡಿದ್ದಾರೆ. ಒಂದು ವರ್ಷದ ಒಳಗಾಗಿ ಸಾಕಷ್ಟು ಪ್ರಗತಿ ಕಂಡಿದೆ ಇವರ ಕಂಪನಿ.

Advertisement

ವಿರಾಟ್ ಕೊಹ್ಲಿ ಅವರು ಎಜಿಲಿಟಾಸ್ ಸ್ಪೋರ್ಟ್ಸ್​ಗೆ ಬ್ರ್ಯಾಂಡ್ ಅಂಬಾಸಡರ್ ಆಗಿರುವುದು ಮಾತ್ರವಲ್ಲ, ಕಂಪನಿಯಲ್ಲಿ ಪಾಲುದಾರರೂ ಹೌದು. ಇದೇ ಕಾರಣಕ್ಕೆ ಅವರು ಪ್ಯೂಮಾ ಜೊತೆಗಿನ ಡೀಲ್ ಅನ್ನು ಕೈಬಿಟ್ಟು ಎಜಿಲಿಟಾಸ್​ಗೆ ಬಂದಿರಬಹುದು.

ಇತ್ತೀಚೆಗಷ್ಟೇ ನೆಕ್ಸಸ್ ವೆಂಚರ್ ಎಂಬ ಕಂಪನಿಯಿಂದ ಎಜಿಲಿಟಾಸ್ ಸ್ಪೋರ್ಟ್ಸ್​ಗೆ 100 ಕೋಟಿ ರೂ ಫಂಡಿಂಗ್ ಕೂಡ ಪಡೆದಿದೆ.

ಎಜಿಲಿಟಾಸ್ ಸ್ಪೋರ್ಟ್ಸ್  ಅಡಿಡಾಸ್, ರೀಬೋಕ್ ಮೊದಲಾದ ಬ್ರ್ಯಾಂಡ್​​ಗಳಿಗೆ ಶೂಗಳನ್ನು ತಯಾರಿಸಿಕೊಡುವ ಮೋಚಿಕೋ ಶೂಸ್ ಪ್ರೈ ಲಿ ಎಂಬ ಕಂಪನಿಯನ್ನು ಸೆಪ್ಟೆಂಬರ್​ನಲ್ಲಿ ಖರೀದಿ ಮಾಡಲಾಗಿತ್ತು. ಈಗ ಇನ್ನಷ್ಟು ಫಂಡಿಂಗ್ ಸಿಕ್ಕಿರುವುದರಿಂದ ಇನ್ನಷ್ಟು ಕಂಪನಿಗಳನ್ನು ಖರೀದಿಸಬಹುದು.

Advertisement
Tags :
LatetsNewsNewsKannadaಅಜಿಲಿಟಾಸ್ಕ್ರಿಕೆಟಿಗಪ್ಯೂಮಾಬ್ರ್ಯಾಂಡ್ ಅಂಬಾಸಡರ್ವಿರಾಟ್ ಕೊಹ್ಲಿಸ್ಪೋರ್ಟ್ಸ್
Advertisement
Next Article