For the best experience, open
https://m.newskannada.com
on your mobile browser.
Advertisement

ಛತ್ತೀಸ್‌ಗಢ ಸಚಿವ ಸಂಪುಟ ವಿಸ್ತರಣೆ; ಒಂಬತ್ತು ಸಚಿವರ ಸೇರ್ಪಡೆ

ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಶುಕ್ರವಾರ ಒಂಬತ್ತು ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ.
02:06 PM Dec 22, 2023 IST | Ashitha S
ಛತ್ತೀಸ್‌ಗಢ ಸಚಿವ ಸಂಪುಟ ವಿಸ್ತರಣೆ  ಒಂಬತ್ತು ಸಚಿವರ ಸೇರ್ಪಡೆ

ದೆಹಲಿ: ಛತ್ತೀಸ್‌ಗಢ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ ಅವರು ಶುಕ್ರವಾರ ಒಂಬತ್ತು ಹೊಸ ಸಚಿವರನ್ನು ಸೇರ್ಪಡೆಗೊಳಿಸುವ ಮೂಲಕ ತಮ್ಮ ರಾಜ್ಯ ಸಚಿವ ಸಂಪುಟವನ್ನು ವಿಸ್ತರಿಸಿದ್ದಾರೆ.

Advertisement

ಬಿಜೆಪಿ ಶಾಸಕರಾದ ಬ್ರಿಜ್ಮೋಹನ್ ಅಗರವಾಲ್, ರಾಮ್ವಿಚಾರ್ ನೇತಮ್, ದಯಾಳ್‌ದಾಸ್ ಬಾಘೇಲ್, ಕೇದಾರ್ ಕಶ್ಯಪ್, ಲಖನ್ಲಾಲ್ ದೇವಾಂಗನ್, ಶ್ಯಾಮ್ ಬಿಹಾರಿ ಜೈಸ್ವಾಲ್, ಒಪಿ ಚೌಧರಿ, ಟ್ಯಾಂಕ್ ರಾಮ್ ವರ್ಮಾ ಮತ್ತು ಲಕ್ಷ್ಮಿ ರಾಜವಾಡೆ ಅವರಿಗೆ ರಾಜ್ಯಪಾಲ ಬಿಸ್ವಭೂಷಣ ಹರಿಚಂದನ್ ಪ್ರಮಾಣ ವಚನ ಬೋಧಿಸಿದರು.

ನೂತನ ಸಚಿವರ ಸೇರ್ಪಡೆಯಿಂದಾಗಿ ಸಾಯಿ ನೇತೃತ್ವದ ಸಂಪುಟದಲ್ಲಿ ಸಚಿವರ ಸಂಖ್ಯೆ 12 ಆಗಿದೆ. ಡಿಸೆಂಬರ್ 13 ರಂದು ಮುಖ್ಯಮಂತ್ರಿ ಸಾಯಿ ಮತ್ತು ಉಪ ಮುಖ್ಯಮಂತ್ರಿಗಳಾದ ಅರುಣ್ ಸಾವೊ ಮತ್ತು ವಿಜಯ್ ಶರ್ಮಾ ಪ್ರಮಾಣ ವಚನ ಸ್ವೀಕರಿಸಿದ್ದರು.

Advertisement

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿದ್ದು, ಐದು ವರ್ಷಗಳ ನಂತರ ಬಿಜೆಪಿ 90 ಸ್ಥಾನಗಳಲ್ಲಿ 54 ಸ್ಥಾನಗಳನ್ನು ಗಳಿಸುವ ಮೂಲಕ ಅಧಿಕಾರಕ್ಕೇರಿದೆ.

Advertisement
Tags :
Advertisement