ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಫೆ.10, 11 ರಂದು ವಿಶ್ವ ಕೊಂಕಣಿ ಸಮಾರೋಹ ಸಮಾರಂಭ ,ಪುರಸ್ಕಾರ ಪ್ರದಾನ ಸಮಾರಂಭ

ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ.10 ಮತ್ತು ಫೆ.11 ರ ಎರಡು ದಿವಸಗಳು ನಡೆಯುವ ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮದಡಿಯಲ್ಲಿ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭ ಹಾಗೂ ವಿಶ್ವ ಕೊಂಕಣಿ ನಾಟಕೋತ್ಸವ ಕಾರ್ಯಕ್ರಮಗಳು ಜರುಗಲಿರುವುದು. ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮವನ್ನು MRPL ಹಣ ಲೆಕ್ಕಪರಿಶೋಧಕರಾದ ಯು ಸುರೇಂದ್ರ ನಾಯಕ್ ಉದ್ಘಾಟಿಸಲಿದ್ದಾರೆ.
05:06 PM Feb 09, 2024 IST | Ashitha S

ಮಂಗಳೂರು:  ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ.10 ಮತ್ತು ಫೆ.11 ರ ಎರಡು ದಿವಸಗಳು ನಡೆಯುವ ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮದಡಿಯಲ್ಲಿ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭ ಹಾಗೂ ವಿಶ್ವ ಕೊಂಕಣಿ ನಾಟಕೋತ್ಸವ ಕಾರ್ಯಕ್ರಮಗಳು ಜರುಗಲಿರುವುದು. ವಿಶ್ವ ಕೊಂಕಣಿ ಸಮಾರೋಹ ಕಾರ್ಯಕ್ರಮವನ್ನು MRPL ಹಣ ಲೆಕ್ಕಪರಿಶೋಧಕರಾದ ಯು ಸುರೇಂದ್ರ ನಾಯಕ್ ಉದ್ಘಾಟಿಸಲಿದ್ದಾರೆ.

Advertisement

ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಅಂಗವಾಗಿ ಫೆಬ್ರವರಿ 10 ಮತ್ತು 11 ಕ್ಕೆ ಎರಡು ದಿವಸಗಳು ವಿವಿಧ ವಿಚಾರಗೋಷ್ಟಿ ಕಾರ್ಯಕ್ರಮಗಳು ಕೂಡಾ ಜರುಗಲಿವೆ. ಫೆ.10 ರಂದು ಗಂ. 10.00 ಕ್ಕೆ ನಡೆಯಲಿರುವ “ಕೊಂಕಣಿ ಥಿಯೇಟರ್ ಪ್ರೆಸೆಂಟ್ ಆಂಡ್ ಫ್ಯೂಚರ್” ಗೋಷ್ಟಿಯ ಅಧ್ಯಕ್ಷತೆಯನ್ನು ಜಾನ್ ಎಮ್ ಪೆರ್ಮನ್ನೂರು
ವಹಿಸಲಿರುವರು.

Advertisement

11.30 ಗಂಟೆಗೆ ನಡೆಯಲಿರುವ "ಎ. ಅಯ್ ಎಪ್ಲಿಕೇಶನ್ ಫಾರ ದ ಡೆವಲಪ್ ಮೆಂಟ್ ಆಫ್ ಕೊಂಕಣಿ"ಗೋಷ್ಟಿಯಲ್ಲಿ ಗೌರೀಶ ಪ್ರಭು ಅಧ್ಯಕ್ಷತೆ ವಹಿಸಲಿರುವರು. ಹಾಗೂ 2.00 ಗಂಟೆಗೆ ನಡೆಯಲಿರುವ ಸ್ಟೇಟಸ್ ಆಂಡ್ ಮುವ್ ಮೆಂಟ್ ಆಫ್ ಕೊಂಕಣಿ ಅವ್ಟ್ ಸೈಡ್ ಗೋವಾ ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ. ಕಸ್ತೂರಿ ಮೋಹನ ಪೈ ವಹಿಸಲಿರುವರು. 3.00 ಗಂಟೆಗೆ ನಡೆಯಲಿರುವ “ಲಿಟರೆರಿ ಪ್ರೆಸೆಂಟೇಶನ್ ಬೈ ವುಮೆನ್ ರೈಟರ್ಸ್” ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ. ಕಿರಣ್ ಬುಡ್ಕುಳೆ ಗೋವಾ ವಹಿಸಲಿರುವರು. ಫೆ.11ರಂದು 1.45 ಗಂಟೆಗೆ ನಡೆಯಲಿರುವ “ಕೊಂಕಣಿ ಎಜುಕೇಶನ್ ಇನ್ ಸ್ಕೂಲ್ಸ್” ವಿಚಾರ ಗೋಷ್ಟಿಯ ಅಧ್ಯಕ್ಷತೆಯನ್ನು ಡಾ ಕಸ್ತೂರಿ ಮೋಹನ ಪೈ ವಹಿಸಲಿರುವರು. ಮತ್ತು 2.45 ಗಂಟೆಗೆ ನಡೆಯಲಿರುವ “ಕೊಂಕಣಿ ಪೋಯೆಟ್ರಿ” ವಿಚಾರಗೋಷ್ಟಿಯ ಅಧ್ಯಕ್ಷತೆಯನ್ನು ಗೋಕುಲದಾಸ್ ಪ್ರಭು ವಹಿಸಲಿರುವರು.

ವಿಶ್ವ ಕೊಂಕಣಿ ಕೇಂದ್ರದಲ್ಲಿ ಫೆ.11 ರಂದು ನಡೆಯುವ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಹಾಲಿ ಉಪ ಕುಲಪತಿ ಪ್ರೊ. ಜಯರಾಜ್ಅಮಿನ್ ಉಪಸ್ಥಿತರಿದ್ದು ಪುರಸ್ಕಾರ ಪ್ರದಾನ ಮಾಡಲಿದ್ದಾರೆ. ವರ್ಷದ ಅತ್ಯುತ್ತಮ ಕೊಂಕಣಿ ಸಾಹಿತ್ಯ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಸಾಹಿತ್ಯ ಪುರಸ್ಕಾರ- 2023 ಗೋವಾದ ಕೊಂಕಣಿ ಲೇಖಕ ಪ್ರಕಾಶ್ ಪರಿಯಂಕಾರ ರಚಿಸಿದ "ಪೂರಣ್” ಪುಸ್ತಕಕ್ಕಾಗಿ ಇವರಿಗೆ ಪ್ರದಾನ ಮಾಡಲಾಗುವುದು.

ವರ್ಷದ ಅತ್ಯುತ್ತಮ ಕೊಂಕಣಿ ಕವಿತಾ ಕೃತಿಗೆ ನೀಡಲಾಗುವ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಕವಿತಾ ಕೃತಿ ಪುರಸ್ಕಾರ -2023 ಕೇರಳದ ಕೊಂಕಣಿ ಕವಿ, ಲೇಖಕ ಆರ್ ಎಸ್ ಭಾಸ್ಕರ್ ರಚಿಸಿದ ಕೊಂಕಣಿ ಕವಿತಾ ಸಂಕಲನ ʼಚೈತ್ರಕವಿತಾʼ ಪುಸ್ತಕಕ್ಕಾಗಿ ಇವರಿಗೆ ಪ್ರದಾನ ಮಾಡಲಾಗುವುದು. ಕೊಂಕಣಿ ಭಾಷೆ, ಸಾಹಿತ್ಯ, ಸಂಸ್ಕೃತಿಯ ಬೆಳವಣಿಗೆಗೆ ವಿಶೇಷ ಕೊಡುಗೆ ನೀಡಿದ ಹಿರಿಯರನ್ನು ಗೌರವಿಸಲು ಸ್ಥಾಪಿಸಲಾದ ಶ್ರೀಮತಿ ವಿಮಲಾ ವಿ. ಪೈ ವಿಶ್ವ ಕೊಂಕಣಿ ಜೀವನ ಸಿದ್ಧಿ ಸಮ್ಮಾನ 2023 ಗೋವಾದ ಹಿರಿಯ ಕೊಂಕಣಿ ಕಲಾವಿದ ರಮಾನಂದ ರಾಯ್ಕರ ಇವರಿಗೆ ಕೊಂಕಣಿ ಭಾಷೆ, ಸಂಗೀತ ಸಾಹಿತ್ಯಕ್ಕೆ ನೀಡಿದ ಅಪಾರ ಕೊಡುಗೆಯನ್ನು ಪರಿಗಣಿಸಿ ಇವರಿಗೆ ಪ್ರದಾನ ಮಾಡಲಾಗುವುದು.

ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2023 ಮಹಿಳಾ ವಿಭಾಗದಲ್ಲಿ ಮೆಟಮೋರ್ಫೆಸ್ ಸೇವಾ ಸಂಸ್ಥೆಯ ಬೆಂಗಳೂರಿನ ಶಕುಂತಲಾ ಎ. ಭಂಢಾರಕಾರ ಇವರಿಗೆ ಪ್ರದಾನ ಮಾಡಲಾಗುವುದು.ಬಸ್ತಿ ವಾಮನ ಶೆಣೈ ವಿಶ್ವ ಕೊಂಕಣಿ ಸೇವಾ ಪುರಸ್ಕಾರ -2023 ಪುರುಷರ ವಿಭಾಗದಲ್ಲಿ ಮಂಜೇಶ್ವರದ ಸ್ನೇಹಾಲಯ ಚ್ಯಾರಿಟೇಬಲ್ ಟ್ರಸ್ಟ್ ನ ಜೋಸೆಫ್ ಕ್ರಾಸ್ತಾ ಇವರಿಗೆ ಪ್ರದಾನ ಮಾಡಲಾಗುವುದು. ಡಾ . ಪಿ. ದಯಾನಂದ ಪೈ ವಿಶ್ವ ಕೊಂಕಣಿ ಅನುವಾದ ಪುರಸ್ಕಾರ 2023 ಗೋವಾದ ಲೇಖಕ ರಮೇಶ ಲಾಡ್ ಇವರಿಗೆ ಪ್ರದಾನ ಮಾಡಲಾಗುವುದು.

ಡಾ. ಪಿ ದಯಾನಂದ ಪೈ ವಿಶ್ವ ಕೊಂಕಣಿ ರಂಗಶ್ರೇಷ್ಟ ಪುರಸ್ಕಾರ 2023 ಶ್ರೀನಿವಾಸ ರಾವ್ (ಕಾಸರಗೋಡು ಚಿನ್ನಾ) ಇವರಿಗೆ ಪ್ರದಾನ ಮಾಡಲಾಗುವುದು. ಪುರಸ್ಕಾರವು ತಲಾ ಒಂದು ಲಕ್ಷ ರೂಪಾಯಿಗಳ ಸಮ್ಮಾನಧನ ಮತ್ತು ಫಲಕಗಳನ್ನು ಹೊಂದಿದೆ. ಈ 7 ಪ್ರಶಸ್ತಿಗಳನ್ನು 2024 ಫೆಬ್ರುವರಿ 11ರಂದು ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರಗಲಿರುವ ವಾರ್ಷಿಕ ವಿಶ್ವ ಕೊಂಕಣಿ ಪ್ರದಾನ ಸಮಾರಂಭದಲ್ಲಿ ಪ್ರದಾನಿಸಲಾಗುವುದು.

ಹೀಗೆ ಎರಡು ದಿವಸಗಳು ವಿಶ್ವ ಕೊಂಕಣಿ ಕೇಂದ್ರದಲ್ಲಿ ಜರುಗುವ ವಿಶ್ವ ಕೊಂಕಣಿ ಸಮಾರೋಹ ಹಾಗೂ ವಿಶ್ವ ಕೊಂಕಣಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಕರ್ನಾಟಕ, ಮುಂಬಯಿ, ಗೋವಾ, ಕೇರಳ ರಾಜ್ಯಗಳಿಂದ ಸಾಹಿತ್ಯಾಸಕ್ತರು ಭಾಗವಹಿಸಲಿರುವರು. ವಿಶ್ವ ಕೊಂಕಣಿ ಸಾಹಿತ್ಯ ಸಮಾರೋಹದ ಸಮಾರಂಭದ ಅಂಗವಾಗಿ ಫೆಬ್ರವರಿ 10 ಮತ್ತು 11 ಕ್ಕೆ ಸಂಜೆ 5.00 ರಿಂದ 8.00 ತನಕ ಹೆಸರಾಂತ ನಾಲ್ಕು ಕೊಂಕಣಿ ನಾಟಕಗಳು ಮಂಗಳೂರಿನ ಟಿ. ವಿ. ರಮಣ ಪೈ ಸಭಾಗೃಹದಲ್ಲಿ ಪದರ್ಶನವಾಗಲಿದೆ

ಫೆ.10 ರಂದು ಕೊಚ್ಚಿನ್ ಕಲಾಕ್ಷೇತ್ರ, ಗೋಶ್ರೀಪುರ ತಂಡದಿಂದ “ಜಗಲೇವೈಲೊ ಹನುಮಂತು” ಕೊಂಕಣಿ ನಾಟಕ ಮತ್ತು ಗೋವಾದ ಫೋರ್ಥ್ ವಾಲ್ ಥಿಯೇಟರ್ ತಂಡದಿಂದ “ದ ಸ್ಕೆಲಿಟನ್ ವುಮನ” ಕೊಂಕಣಿ ನಾಟಕ ಪ್ರದರ್ಶನಗೊಳ್ಳುವುದು.  ಹಾಗೂ ಫೆ.11 ರಂದು ಕೊಂಕಣಿ ತ್ರಿವೇಣಿ ಕಲಾ ಸಂಗಮ, ಮುಂಬಯಿ (ರಿ) ನಾಟಕ ತಂಡದಿಂದ “ಆವಸು ಆನಂದಾಚೊ ಪಾವಸು” ನಾಟಕ ಪ್ರದರ್ಶನಗೊಳ್ಳುವುದು. ಮತ್ತು ರಂಗಚಿನ್ನಾರಿ ಕಾಸರಗೋಡು ಕಲಾತಂಡದಿಂದ “ಎಕಲೊ ಆನೆಕಲೊ” ಕೊಂಕಣಿ ನಾಟಕ ಪ್ರದರ್ಶನಗೊಳ್ಳುವುದು.

Advertisement
Tags :
indiaLatestNewsNewsKannadaಕೊಂಕಣಿಪುರಸ್ಕಾರ ಪ್ರದಾನಮಂಗಳೂರು
Advertisement
Next Article