ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿಟ್ಲ: ವೃದ್ಧ ಮಹಿಳೆಗೆ ಚಾಕು ತೋರಿಸಿ ಚಿನ್ನ ಕದಿಯಲು ಯತ್ನ

ಚಿನ್ನದ ಬೆಲೆ ಗಗನಕ್ಕೇರುತಿದ್ದಂತೆ ಕಳ್ಳತನ ಪ್ರಕರಣಗಳ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಇಂತಹದ್ದೇ ಒಂದು ಘಟನೆ ಕುಳ ಗ್ರಾಮದ ನೀರಪಳಿಕೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ವ್ಯಕ್ತಿಯೋರ್ವ ಯತ್ನಿಸಿದ್ದಾನೆ.
12:26 PM Nov 26, 2023 IST | Gayathri SG

ವಿಟ್ಲ: ಚಿನ್ನದ ಬೆಲೆ ಗಗನಕ್ಕೇರುತಿದ್ದಂತೆ ಕಳ್ಳತನ ಪ್ರಕರಣಗಳ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಇಂತಹದ್ದೇ ಒಂದು ಘಟನೆ ಕುಳ ಗ್ರಾಮದ ನೀರಪಳಿಕೆಯಲ್ಲಿ ಶನಿವಾರ ಬೆಳಗ್ಗೆ ನಡೆದಿದೆ. ಮಹಿಳೆಯೊಬ್ಬರಿಗೆ ಚಾಕು ತೋರಿಸಿ ಬೆದರಿಸಿ ಚಿನ್ನ ಲಪಟಾಯಿಸಲು ವ್ಯಕ್ತಿಯೋರ್ವ ಯತ್ನಿಸಿದ್ದಾನೆ.

Advertisement

ಮನೆಯಲ್ಲಿ ವೃದ್ಧ ಮಹಿಳೆ ಮಾತ್ರ ಇರುವ ಸಂದರ್ಭ ಮನೆಯ ಮುಖ್ಯ ದ್ವಾರದ ಮೂಲಕ ವ್ಯಕ್ತಿಯೋರ್ವ ಮುಖಕ್ಕೆ ಮಾಸ್ಕ್ ಹಾಕಿ ಒಳ ಪ್ರವೇಶಿಸಿ ಒಳಗಿನಿಂದ ಚಿಲಕ ಹಾಕಿ ಮಹಿಳೆಗೆ ಚಾಕು ತೋರಿಸಿ, ಕಿವಿಯಲ್ಲಿರುವ ಚಿನ್ನ ಕೊಡುವಂತೆ ಕೇಳಿದ್ದಾನೆ. ಬೆದರಿದ ಮಹಿಳೆ ಹಿಂದಿನ ಬಾಗಿಲು ಮೂಲಕ ಹತ್ತಿರದ ಮನೆಯವರನ್ನು ಕೂಗಿ ಕರೆದಾಗ ಆತ ಹಿಂಬದಿಯ ತೋಟದ ದಾರಿಯಾಗಿ ಪರಾರಿಯಾದ್ದಾನೆ.

ನಂತರ 112ಕ್ಕೆ ಕರೆಮಾಡಿ ಮಾಹಿತಿ ನೀಡಿದಾಗ ತುರ್ತು ಕಾರ್ಯಪಡೆಯ ಪೊಲೀಸ್‌ ತಂಡ ಸ್ಥಳಕ್ಕೆ ಆಗಮಿಸಿದರು. ಬಳಿಕ ವಿಟ್ಲ ಠಾಣೆಗೆ ಮಾಹಿತಿ ನೀಡಲಾಯಿತು.

Advertisement

Advertisement
Tags :
LatestNewsNewsKannadaವಿಟ್ಲ
Advertisement
Next Article