ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿವೃತ್ತಿ ಬಗ್ಗೆ ವಿರಾಟ್ ಕೊಹ್ಲಿ ಬಿಚ್ಚುಮಾತು: ಫ್ಯಾನ್ಸ್​ ಶಾಕ್!

ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು. ಬಳಿಕ ಚೇತರಿಸಿಕೊಂಡು ಸತತ 5 ಗೆಲುವಿನೊಂದಿಗೆ ಇಂದಿಗೂ ತಮ್ಮ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.
12:35 PM May 16, 2024 IST | Ashitha S

ನವದೆಹಲಿ: ಉತ್ತಮ ನಿರೀಕ್ಷೆಯೊಂದಿಗೆ ಐಪಿಎಲ್-2024 ಅಭಿಯಾನ ಆರಂಭಿಸಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು (ಆರ್‌ಸಿಬಿ) ತನ್ನ ಮೊದಲ ಪಂದ್ಯದಲ್ಲೇ ಸೋಲಿನಿಂದ ಲೀಗ್ ಪ್ರಾರಂಭಿಸಿತು. ಬಳಿಕ ಚೇತರಿಸಿಕೊಂಡು ಸತತ 5 ಗೆಲುವಿನೊಂದಿಗೆ ಇಂದಿಗೂ ತಮ್ಮ ಪ್ಲೇಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

Advertisement

ಸದ್ಯ ಈ ಮಧ್ಯೆ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡದ ನೆಚ್ಚಿನ ಆಟಗಾರ, ಮಾಜಿ ಕ್ಯಾಪ್ಟನ್ ವಿರಾಟ್​ ಕೊಹ್ಲಿ ಇದೀಗ ತಮ್ಮ ಕ್ರಿಕೆಟ್ ನಿವೃತ್ತಿಯ ಬಗ್ಗೆ ಮುಕ್ತವಾಗಿ ಮಾತನಾಡಿರುವ ವಿಷಯ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಸಂದರ್ಶನವೊಂದರಲ್ಲಿ ಸಕ್ಸಸ್​​ ಹಿಂದೆ ಯಾಕಿಷ್ಟು ಹಸಿವಿನಿಂದ ಓಡುತ್ತಿದ್ದೀರಿ ವಿರಾಟ್​? ಇದರ ಹಿಂದಿರುವ ಬಲವಾದ ಕಾರಣವೇನು ಎಂಬ ಪ್ರಶ್ನೆ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಕೊಹ್ಲಿ, 'ಇದು ತುಂಬ ಸರಳ. ಒಬ್ಬ ಕ್ರೀಡಾಪಟುವಾದ ಮೇಲೆ ಇಂದಲ್ಲ ನಾಳೆ, ನಮ್ಮ ವೃತ್ತಿಜೀವನದ ಅಂತಿಮ ದಿನಾಂಕವನ್ನು ನೋಡಲೇಬೇಕಿದೆ. ಆದ್ದರಿಂದಲೇ ನಾನು ಈ ರೀತಿ ಹೆಚ್ಚು ಶ್ರಮವಹಿಸಿ, ಮಿತಿಮೀರಿ ಕೆಲಸ ಮಾಡುತ್ತಿದ್ದೇನೆ. ಅಂದು ಇದನ್ನು ನಾನು ಮಾಡಲೇ ಇಲ್ಲ ಏಕೆ? ಎಂದು ನನ್ನ ಕರಿಯರ್ ಮುಗಿದ ಮೇಲೆ ಚಿಂತಿಸುತ್ತ ಕೂರಬಾರದು. ಅಂತಹ ಪರಿಸ್ಥಿತಿ ನನಗೆ ಬರಬಾರದು ಎಂದರೆ, ಇಂದು ಅದ್ಭುತ ಆಟ ಆಡಲೇಬೇಕಿದೆ' ಎಂದರು.

Advertisement

'ನನ್ನ ವೃತ್ತಿ ಜೀವನಕ್ಕೆ ವಿದಾಯ ಹೇಳಿದ ಬಳಿಕ ನನಗೆ ಯಾವುದೇ ವಿಷಾದ ಇರಬಾರದು. ಖಂಡಿತವಾಗಿ ಆ ರೀತಿ ನಾನು ಮಾಡಿಕೊಳ್ಳುವುದಿಲ್ಲ ಎಂದು ನನಗೆ ಖಾತ್ರಿಯಿದೆ. ಒಮ್ಮೆ ನಾನು ಇದನ್ನೆಲ್ಲಾ ಮುಗಿಸಿ, ಹೊರನಡೆದರೆ, ಖಂಸಿತ ಮತ್ತೆ ನೀವು ನನ್ನ ನೋಡೋದಿಲ್ಲ. ನಾನು ಆಡುವ ಕೊನೆವರೆಗೂ ನನ್ನಲ್ಲಿರುವ ಬೆಸ್ಟ್​ ಅನ್ನು ನೀಡಲು ಬಯಸುತ್ತೇನೆ. ಅದೊಂದೇ ನನ್ನನ್ನು ಮುಂದಕ್ಕೆ ಕೊಂಡೊಯ್ಯಲು ಸಾಧ್ಯ' ಎಂದು ಹೇಳಿದ್ದಾರೆ.

Advertisement
Tags :
GOVERNMENTindiaIPLRCBViratKohliವಿರಾಟ್
Advertisement
Next Article