For the best experience, open
https://m.newskannada.com
on your mobile browser.
Advertisement

ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ

ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಹೊಗೆ, ಶಾಖದ ಪರಿಣಾಮವು ಬಹು ದೂರದವರೆಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.
09:20 AM Apr 18, 2024 IST | Ashika S
ಇಂಡೋನೇಷ್ಯಾದ ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟ

ಇಂಡೋನೇಷ್ಯಾ:  ರುವಾಂಗ್ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಗೊಂಡಿದೆ. ಹೊಗೆ, ಶಾಖದ ಪರಿಣಾಮವು ಬಹು ದೂರದವರೆಗೆ ಆಗುತ್ತಿರುವ ಹಿನ್ನೆಲೆಯಲ್ಲಿ ಸಾವಿರಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿದೆ.

Advertisement

ರಾಯಧಾನಿ ಮನಾಡೋದ ಸುಮಾರು 100 ಕಿ.ಮೀ ದೂರದ ಪರ್ವತದಲ್ಲಿ ಜ್ವಾಲಾಮುಖಿ ಸ್ಫೋಟಿಸಿದೆ. ಈ ಜ್ವಾಲಾಮುಖಿ ಒಂದೇ ದಿನದಲ್ಲಿ ಐದು ಬಾರಿ ಜೋರಾಗಿ ಚಿಮ್ಮಿದೆ. ಲಾವಾ ಹಾಗೂ ಬಿಸಿ ಬೂಧಿ ಆಕಾಶದೆತ್ತರಕ್ಕೆ ವ್ಯಾಪಿಸಿದೆ.

ಪರ್ವತಕ್ಕೆ ಸಮುದ್ರ ಹೊಂದಿಕೊಂಡಿರುವ ಕಾರಣ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಆಡಳಿತ ಎಚ್ಚರಿಕೆ ನೀಡಿದೆ.

Advertisement

ಸಮುದ್ರದ ಉತ್ತರ ಬದಿಯಲ್ಲಿ ತಗುಲಂಡಂಗ್‌ ದ್ವೀಪದಲ್ಲಿರುವ 11,000 ಜನರನ್ನು ಸ್ಥಳಾಂತರ ಮಾಡುವಂತೆ ಜನರಿಗೆ ಪರ್ವತದಿಂದ 6 ಕಿ.ಮೀ.ದೂರದಲ್ಲಿರುವಂತೆ ತಿಳಿಸಲಾಗಿದೆ.

Advertisement
Tags :
Advertisement