For the best experience, open
https://m.newskannada.com
on your mobile browser.
Advertisement

ಮೂಲ್ಕಿ ತಾಲೂಕು ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ

ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಮೂಲ್ಕಿ ತಾಲೂಕು ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮೂಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಮುಂಡ ಬೀಚ್ ನಲ್ಲಿ 21/04/2024 ರಂದು ಹಮ್ಮಿಕೊಳ್ಳಲಾಯಿತು.
03:46 PM Apr 22, 2024 IST | Nisarga K
ಮೂಲ್ಕಿ ತಾಲೂಕು ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ
ಮೂಲ್ಕಿ ತಾಲೂಕು ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮ

ಮಂಗಳೂರು: ಭಾರತ ಚುನಾವಣಾ ಆಯೋಗ, ಜಿಲ್ಲಾಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ಮೂಲ್ಕಿ ತಾಲೂಕು ಪಂಚಾಯತ್ ವತಿಯಿಂದ ಮತದಾನ ಜಾಗೃತಿ ಕಾರ್ಯಕ್ರಮವನ್ನು ಮೂಲ್ಕಿ ತಾಲೂಕಿನ ಹಳೆಯಂಗಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಸಿಹಿತ್ಲು ಮುಂಡ ಬೀಚ್ ನಲ್ಲಿ 21/04/2024 ರಂದು ಹಮ್ಮಿಕೊಳ್ಳಲಾಯಿತು.

Advertisement

ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಡಾ. ಆನಂದ ಕೆ. ಅವರು ಗಿಡಕ್ಕೆ ನೀರನ್ನು ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಪಟ್ಟಣದಲ್ಲಿರುವ ಜನರು ಅತೀ ಕಡಿಮೆ ಮತದಾನ ಮಾಡುವುದು ಕಂಡು ಬರುತ್ತಿದೆ. ಕೆಲಸದ ಜಂಜಾಟದಲ್ಲಿರುವ ಪಟ್ಟಣದ ಜನರಲ್ಲಿ ನಮ್ಮ ಹಕ್ಕನ್ನು ಚಲಾಯಿಸುವಂತೆ ಪ್ರೇರೆಪಿಸಲು ನಾವು ಸ್ವೀಪ್ ಚಟುವಟಿಕೆಗಳನ್ನು ಜಿಲ್ಲೆಯಾದ್ಯಂತ ಮಾಡುತ್ತಿದ್ದೇವೆ. ಮತದಾನದ ದಿನ ಹತ್ತಿರದಲ್ಲೇ ಇರುವುದರಿಂದ ವೋಟರ್ ಹೆಲ್ಪ್ ಲೈನ್ ಆಪ್ ಅನ್ನು ಬಳಸಿ ನಿಮ್ಮ ಮತಗಟ್ಟೆ ಯಾವುದು ಎಂದು ತಿಳಿದು ಏಪ್ರಿಲ್ 26 ರಂದು ತಪ್ಪದೇ ಮತದಾನ ಮಾಡಿ ಎಂದು ತಿಳಿಸಿದರು.

Advertisement

ಮುಲ್ಕಿ ಕಾರ್ಯನಿರ್ವಾಹಕ ಅಧಿಕಾರಿಯವರಾದ ಗುರುದತ್ ಎಂ.ಎನ್. ಮಾತನಾಡಿ, ದೇಶದಾಂದ್ಯತ ಸ್ವೀಪ್ ಕಾರ್ಯಕ್ರಮದಿಂದ ಜನರಿಗೆ ಮತದಾನದ ಅರಿವು ಮೂಡಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಮತದಾನವನ್ನು ಹಬ್ಬದ ರೀತಿಯಲ್ಲಿ ಆಚರಿಸಿ. ಮತದಾನದ ದಿನ ಸರಕಾರಿ ರಜೆ ಇರುವುದರಿಂದ ಪ್ರವಾಸಗಳಿಗೆ ತೆರಳದೆ, ತಮ್ಮ ಊರುಗಳಿಗೆ ಹೊಗಿ ಮತದಾನ ಮಾಡಿ.ಇಲ್ಲಿ ಬಂದಿರುವ ಸಾರ್ವಜನಿಕರು ಮತದಾನದ ಮಾಹಿತಿ ಪಡೆದು ತಪ್ಪದೇ ಮತದಾನ ಮಾಡಿ ಎಂದರು.

ಸಭಾ ಕಾರ್ಯಕ್ರಮದ ಬಳಿಕ ಪ್ರಕಾಶ್ ಆಚಾರ್ಯ, ಶ್ವೇತಾ ಆಚಾರ್ಯ ಅವರಿಂದ ಸಂಗೀತ ರಸಸಂಜೆ ಹಾಗೂ ವಿದ್ಯಾರ್ಥಿಗಳಿಂದ ಮತದಾನ ಜಾಗೃತಿ ನೃತ್ಯ ಒಂದೆಡೆಯಾದರೆ ಮೆಹೆಂದಿ ಕಾರ್ಯಕ್ರಮ, ಸೆಲ್ಫಿ ಪಾಯಿಂಟ್, ಸಹಿ ಅಭಿಯಾನ, ಮರಳು ಕಲಾಕೃತಿ, ವಿದ್ಯುತ್ ದ್ವೀಪದಿಂದ ಸ್ವೀಪ್ ಅಕ್ಷರ, ಗಾಳಿಪಟ ಉತ್ಸವವು ಸಾರ್ವಜನಿಕರಿಗೆ ಮತದಾನದ ಹಬ್ಬವು ಕಡಲ ಕಿನಾರೆಯಲ್ಲಿ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮ ನೀಡಿದ ತಂಡಗಳಿಗೆ ಹಾಗೂ ಮರಳು ಕಲಾಕೃತಿ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ಕೊನೆಯಲ್ಲಿ ಪಂಜಿನ ಮೆರವಣಿಗೆಯು ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೂಡುಬಿದಿರೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಎಸ್.ವೆಂಕಟಾಚಲಪಪತಿ, ಮೂಲ್ಕಿ ತಾಲೂಕಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಪಂಚಾಯತ್ ಕಾರ್ಯದರ್ಶಿಗಳು, ದ್ವಿತೀಯ ದರ್ಜೆ ಲೆಕ್ಕಸಹಾಯಕರು, ತಾಲೂಕು ಪಂಚಾಯತ್ ಸಿಬ್ಬಂದಿಗಳು, ಗ್ರಾಮ ಪಂಚಾಯತ್ ಸಿಬ್ಬಂದಿಗಳು, ಕಾಲೇಜು ಶಿಕ್ಷಕರು, ಸಂಜೀವಿನಿ ಒಕ್ಕೂಟದ ಮಹಿಳೆಯರು, ಸಾರ್ವಜನಿಕರು ಉಪಸ್ಥಿತರಿದ್ದರು.

Advertisement
Tags :
Advertisement