For the best experience, open
https://m.newskannada.com
on your mobile browser.
Advertisement

ಯಕ್ಷಗಾನ ವೇಷ ತೊಟ್ಟು ಜನರಿಗೆ ಮತದಾನ ಜಾಗೃತಿ: ಅಧಿಕಾರಿಗಳ ವಿನೂತನ ಪ್ರಯತ್ನ

ಚುನಾವಣೆ ಹಿನ್ನಲೆ ಎಂದಿಗಿಂತ ಈ ಬಾರಿ ಚುನಾವಣೆಯಲ್ಲಿ ನಾನಾ ರೀತಿಯ ಕಸರತ್ತುಗಳು ನೋಡಲು ಸಿಗುತ್ತಿವೆ ಒಂದಡೆ ಅಭ್ಯರ್ಥಿಗಳ ಕಸರತ್ತು ಇನ್ನೋಂದೆಡೆ ನಾಯಕರದ್ದು ಆದರೆ ಇಲ್ಲಿ ಅಧಿಕಾರಿಗಳು ಕೂಡ ವಿನೂತನ ರೀತಿಯಲ್ಲಿ ಜನರಿಗೆ ಮತದಾನ ಕುರಿತು ಜಾಗೃತಿ ಮೂಡಿಸುಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಚುನಾವಣ ಆಯೋಗ ಅಧಿಕಾರಿಗಳಿಗೆ ಪಾರಿತೋಷಕ ನೀಡಿತ್ತದೆ.
04:31 PM Apr 10, 2024 IST | Nisarga K
ಯಕ್ಷಗಾನ ವೇಷ ತೊಟ್ಟು ಜನರಿಗೆ ಮತದಾನ ಜಾಗೃತಿ  ಅಧಿಕಾರಿಗಳ ವಿನೂತನ ಪ್ರಯತ್ನ
ಯಕ್ಷಗಾನ ವೇಷ ತೊಟ್ಟು ಜನರಿಗೆ ಮತದಾನ ಜಾಗೃತಿ: ಅಧಿಕಾರಿಗಳ ವಿನೂತನ ಪ್ರಯತ್ನ

ಉಡುಪಿ: ಚುನಾವಣೆ ಹಿನ್ನಲೆ ಎಂದಿಗಿಂತ ಈ ಬಾರಿ ಚುನಾವಣೆಯಲ್ಲಿ ನಾನಾ ರೀತಿಯ ಕಸರತ್ತುಗಳು ನೋಡಲು ಸಿಗುತ್ತಿವೆ ಒಂದಡೆ ಅಭ್ಯರ್ಥಿಗಳ ಕಸರತ್ತು ಇನ್ನೋಂದೆಡೆ ನಾಯಕರದ್ದು ಆದರೆ ಇಲ್ಲಿ ಅಧಿಕಾರಿಗಳು ಕೂಡ ವಿನೂತನ ರೀತಿಯಲ್ಲಿ ಜನರಿಗೆ ಮತದಾನ ಕುರಿತು ಜಾಗೃತಿ ಮೂಡಿಸುಯ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಈ ಹಿಂದೆ ಚುನಾವಣ ಆಯೋಗ ಅಧಿಕಾರಿಗಳಿಗೆ ಪಾರಿತೋಷಕ ನೀಡಿತ್ತದೆ.

Advertisement

ವಿಷೇಶ ಎಂದರೆ ಉಡುಪಿ ಜಿಲ್ಲೆಯ ಅಧಿಕಾರಿಗಳು ಒಂದು ಹೆಜ್ಜೆ ಮುಂದೆ ಹೋಗಿ ಸ್ವತಹ ತಾವೇ ಯಕ್ಷಗಾನದ ಬಗೆಬಗೆಯ ವೇಷಗಳನ್ನು ತೊಡುವ ಮೂಲಕ ಮತದಾನದ ಬಗ್ಗೆ ಜಾಗೃತಿ ಮೂಡಿಸಿದರು. ಉಡುಪಿ ಚಿಕ್ಕಮಗಳೂರು ಚುನಾವಣೆ ಹಿನ್ನೆಲೆ ರಾಜ್ಯದಲ್ಲೇ ವಿಷೇಶ ಎಂಬಂತೆ ಜಿಲ್ಲೆಯ ಐಎಎಸ್‌. ಐಪಿಎಸ್‌ ಹಾಗೂ ಕೆಎಎಸ್‌ ಅಧಿಕಾರಿಗಳು ಗಂಟೆಗಟ್ಟಲೆ ಕುಳಿತು ಯಕ್ಷಗಾನ ವೇಷ ಧರಿಸಿ ಜಾಗೃತಿ ಕಾರ್ಯಕ್ರಮದ ವಿಡಿಯೋಗಳಿಗೆ ಪೋಸ್ಟರ್‌ಗಳಿಗೆ ಪೋಸ್‌ ನೀಡಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್‌ ಸಿಇಓ ಪ್ರತಿಕ್‌ ಬಾಯಲ್‌, ಅಪರ ಜಿಲ್ಲಾಧಿಕಾರಿ ಮಮತಾದೇವಿ,ಕುಂದಾಪುರ ಉಪ ವಿಭಾಗಾಧಿಕಾರಿ ರಶ್ಮಿ ಕರಾವಳಿ, ಪೊಲೀಸ್‌ ಅಧೀಕ್ಷಕ ಮಿಥುನ್‌ ಸ್ವತಹ ಆಸಕ್ತಿಯಿಂದ ಬಡಗತಿಟ್ಟು ಯಕ್ಷಗಾನ ಶೈಲಿಯ ವೇಷ ಭೂಷಣ ಧರಿಸಿಕೊಂಡು ಗಮನ ಸೆಳೆದರರು. ಶ್ರೇಷ್ಠ ಕಲೆ ಎನಿಕೊಂಡಿರುವ ಯಕ್ಷಗಾನ ವೇಷ ಧರಿಸಿ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಮತದಾನದ ಮಹತ್ವವನ್ನು ಸಾರಿದ್ದಾರೆ.

Advertisement

Advertisement
Tags :
Advertisement