ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

600 ಕೋಟಿ ರೂಪಾಯಿ ನಷ್ಟದೊಂದಿಗೆ ಪೇಟಿಎಂನಿಂದ ಹೊರನಡೆದ ವಾರನ್‌ ಬಫೆಟ್‌

ನವದೆಹಲಿ: ವಿಶ್ವದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿರುವ ವಾರೆನ್ ಬಫೆಟ್ ಒಡೆತನದ ಹೂಡಿಕೆ ಕಂಪನಿ ಬರ್ಕ್‌ಷೈರ್ ಹಾಥ್‌ವೇ, ಫಿನ್‌ಟೆಕ್ ಮೇಜರ್ ಪೇಟಿಎಂನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನಲ್ಲಿನ ತನ್ನ ಸಂಪೂರ್ಣ ಪಾಲನ್ನು ಇಂದು(ನ.24) ದೊಡ್ಡ ಬ್ಲಾಕ್ ಡೀಲ್‌ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ನಷ್ಟದೊಂದಿಗೆ ಮಾರಾಟ ಮಾಡಿದೆ.
11:10 PM Nov 24, 2023 IST | Ashitha S

ನವದೆಹಲಿ: ವಿಶ್ವದ ಶ್ರೀಮಂತ ವ್ಯಕ್ತಿಗಳ ಸಾಲಿನಲ್ಲಿರುವ ವಾರೆನ್ ಬಫೆಟ್ ಒಡೆತನದ ಹೂಡಿಕೆ ಕಂಪನಿ ಬರ್ಕ್‌ಷೈರ್ ಹಾಥ್‌ವೇ, ಫಿನ್‌ಟೆಕ್ ಮೇಜರ್ ಪೇಟಿಎಂನ ಮೂಲ ಕಂಪನಿಯಾದ One97 ಕಮ್ಯುನಿಕೇಷನ್ಸ್ ಲಿಮಿಟೆಡ್‌ನಲ್ಲಿನ ತನ್ನ ಸಂಪೂರ್ಣ ಪಾಲನ್ನು ಇಂದು(ನ.24) ದೊಡ್ಡ ಬ್ಲಾಕ್ ಡೀಲ್‌ನಲ್ಲಿ 600 ಕೋಟಿ ರೂಪಾಯಿಗೂ ಹೆಚ್ಚು ನಷ್ಟದೊಂದಿಗೆ ಮಾರಾಟ ಮಾಡಿದೆ.

Advertisement

ಪೇಟಿಎಂ ಕಂಪನಿಯಲ್ಲಿ ಖರೀದಿ ಮಾಡಿದ್ದ ಶೇ. 2.5ರಷ್ಟು ಅಂದರೆ 1.56 ಕೋಟಿ ಷೇರುಗಳನ್ನು ಬರ್ಕ್‌ಷೈರ್‌ ಹ್ಯಾತ್‌ವೇ ಮಾರಾಟ ಮಾಡಿದೆ. ಪ್ರತಿ ಷೇರುಗಳಿಗೆ 877.29 ರೂಪಾಯಿಯಂತೆ 1370 ಕೋಟಿ ರೂಪಾಯಿಗೆ ಈ ಎಲ್ಲಾ ಷೇರುಗಳನ್ನು ಮಾರಾಟ ಮಾಡಲಾಗಿದೆ.

2018ರಲ್ಲಿ ವಿಜಯ್‌ ಶೇಖರ್‌ ಶರ್ಮ ಮಾಲೀಕತ್ವದ ಪೇಟಿಎಂನ ಮೂಲ ಕಂಪನಿಯಾದ ಒನ್‌ 97 ಕಮ್ಯುನಿಕೇಷನ್‌ನಲ್ಲಿ ಶೇ. 2.6ರಷ್ಟು ಷೇರುಗಳನ್ನು ವಾರನ್‌ ಬಫೆಟ್‌ ಖರೀದಿ ಮಾಡಿದ್ದರು. ಐಪಿಓ ವೇಳೆ ಕಂಪನಿಯ ಮೌಲ್ಯವನ್ನು 10 ರಿಂದ 12 ಬಿಲಿಯನ್‌ ಯುಎಸ್‌ ಡಾಲರ್‌ ಎಂದು ಹೇಳಲಾಗಿದ್ದರಿಂದ ಪ್ರತಿ ಷೇರಿಗೆ 2200 ರೂಪಾಯಿಯಂತೆ 300 ಮಿಲಿಯನ್‌ ಯುಎಸ್‌ ಡಾಲರ್‌ಗೆ ಷೇರುಗಳನ್ನು ಖರೀದಿ ಮಾಡಿತ್ತು. ಪೇಟಿಎಂ ಐಪಿಓ ವೇಳೆ ಬರ್ಕ್‌ಷೈರ್‌ ಹಾಥ್‌ವೇ ಕಂಪನಿ 220 ಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿತ್ತು.

Advertisement

ಪೇಟಿಎಂನ ಮೂಲ ಕಂಪನಿ ಆಗಿರುವ One97 ಕಮ್ಯುನಿಕೇಷನ್ಸ್, ಸೆಪ್ಟೆಂಬರ್ 30, 2023 ಕ್ಕೆ ಕೊನೆಗೊಂಡ ಎರಡನೇ ತ್ರೈಮಾಸಿಕದಲ್ಲಿ ₹290.5 ಕೋಟಿ ನಷ್ಟವನ್ನು ವರದಿ ಮಾಡಿದೆ. ಕಳೆದ ವರ್ಷದ ಇದೇ ತ್ರೈಮಾಸಿಕದಲ್ಲಿ, ಪೇಟಿಎಂ ₹571.1 ಕೋಟಿ ನಿವ್ವಳ ನಷ್ಟವನ್ನು ದಾಖಲಿಸಿದೆ.

Advertisement
Tags :
Berkshire HathawayBUSINESSindiaLatestNewsNewsKannadaPaytmನವದೆಹಲಿ
Advertisement
Next Article