For the best experience, open
https://m.newskannada.com
on your mobile browser.
Advertisement

ಯೋಧ-ಡಾಕ್ಟರ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್‌ ಕಾರ್ಡ್ ವೈರಲ್‌

ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಚಿಕ್ಕ ಚಿಕ್ಕ ವಿಷಯಗಳಿಗೂ ಸಂಪೂರ್ಣ ಗಮನ ನೀಡುತ್ತಾರೆ.
01:34 PM Jan 29, 2024 IST | Ramya Bolantoor
ಯೋಧ ಡಾಕ್ಟರ್ ಜೋಡಿಯ ವೆಡ್ಡಿಂಗ್ ಇನ್ವಿಟೇಷನ್‌ ಕಾರ್ಡ್ ವೈರಲ್‌

ಬೆಂಗಳೂರು: ಪ್ರತಿಯೊಬ್ಬರೂ ತಮ್ಮ ಮದುವೆಯನ್ನು ಸ್ಮರಣೀಯವಾಗಿಸಲು ಚಿಕ್ಕ ಚಿಕ್ಕ ವಿಷಯಗಳಿಗೂ ಸಂಪೂರ್ಣ ಗಮನ ನೀಡುತ್ತಾರೆ. ಡ್ರೆಸ್ ನಿಂದ ಹಿಡಿದು ಊಟ, ಅಲಂಕಾರದಿಂದ ಕಾರ್ಯಕ್ರಮ ಹೀಗೆ ಎಲ್ಲದಕ್ಕೂ ಗಮನ ಹರಿಸುತ್ತಾರೆ. ಆದರೆ ಒಂದು ಮದುವೆ ಕಾರ್ಡ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Advertisement

ಕೆಲವು ಕಾರ್ಡ್‌ಗಳು ಸರಳವಾಗಿರುತ್ತವೆ ಮತ್ತೆ ಕೆಲವು ಸುಂದರವಾಗಿರುತ್ತದೆ. ಆದರೆ ಈ ಮದುವೆ ಕಾರ್ಡ್‌ ತುಂಬಾ ವಿಶೇಷವಾಗಿದ್ದು, ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವೆಡ್ಡಿಂಗ್ ಕಾರ್ಡ್ ನ ವಿಶೇಷತೆ ಏನೆಂದರೆ, ನೋಡಿದ ತಕ್ಷಣ ಇಬ್ಬರ ವೃತ್ತಿ ಏನು ಎಂಬುದು ಗೊತ್ತಾಗುತ್ತದೆ. ಈ ಕಾರಣಕ್ಕೆ ಈ ಮದುವೆ ಕಾರ್ಡ್ ಸಾಕಷ್ಟು ವೈರಲ್ ಆಗುತ್ತಿದೆ. ಮದುವೆ ಕಾರ್ಡ್‌ನ ಅರ್ಧಭಾಗದಲ್ಲಿ ಮಿಲಿಟರಿ ಸಮವಸ್ತ್ರದ ವಿನ್ಯಾಸವಿದೆ ಮತ್ತು ಇನ್ನೊಂದು ಬದಿಯಲ್ಲಿ ವೈದ್ಯರ ಕೋಟ್‌ನ ವಿನ್ಯಾಸವಿದೆ. ಅದರೊಂದಿಗೆ ಇಬ್ಬರ ಹೆಸರನ್ನೂ ಬರೆಯಲಾಗಿದೆ.

Advertisement

Advertisement
Tags :
Advertisement