ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇದಪ್ಪಾ ಡಿಜಿಟರ್‌ ಇಂಡಿಯಾ: ಬಂದೇ ಬಿಡ್ತು ನೋಡಿ ವೈರ್‌ಲೆಸ್ ಟೆಲಿವಿಷನ್

ನಾವು ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿದ್ದೇವೆ.
12:57 PM Jan 10, 2024 IST | Ramya Bolantoor

ನಾವು ಪ್ರತಿದಿನ ಬದಲಾಗುತ್ತಿರುವ ತಂತ್ರಜ್ಞಾನ ಯುಗದಲ್ಲಿದ್ದೇವೆ. ಇಂತಹ ತಂತ್ರಜ್ಞಾನದಲ್ಲಿ ಟೆಲಿವಿಷನ್ ಕೂಡಾ ಒಂದಾಗಿದೆ. ಹೀಗ ಪ್ರತಿ ಮನೆಯಲ್ಲಿ ಟಿವಿ ಇದೆ. ದಿನದಿಂದ ದಿನಕ್ಕೆ ಹೊಸ ರೂಪವನ್ನು ಪಡೆದುಕೊಳ್ಳುತ್ತಿದೆ. ತಂತ್ರಜ್ಞಾನದ ಯಗದಲ್ಲಿ ಗೋಡೆಯಿಂದ ಕೆಳಗಿಳಿಯುವ ಟಿವಿಯ ಮಾರುಕಟ್ಟೆಗೆ ಬಂದಿದೆ.

Advertisement

ಟೆಲಿವಿಷನ್ ಎಂದರೆ ಮನೋರಂಜನೆಯ ಸಾಧನೆಯಾಗಿದೆ. ಪ್ರಪಂಚದಲ್ಲಿ ನಡೆಯುವ ವಿಚಾರವನ್ನು ತೋರಿಸುವಂತಹ ಸಾಧನವಾಗಿದೆ ಟೆಲಿವಿಷನ್. ಹೀಗೆ ಕರ್ವ್ಡ್‌ ಡಿಸ್‌ಪ್ಲೇ, ಒಎಲ್‌ಡಿ ಸ್ಕ್ರೀನ್ ಟಿ.ವಿ, ಸ್ಮಾರ್ಟ್‌ ಟಿ.ವಿ, ಡಿಜಿಟಲ್ ಟಿ.ವಿ… ಹೀಗೆ ವಿವಿಧ ತಂತ್ರಜ್ಞಾನದ ಟಿ.ವಿಗಳು ಬಂದಿವೆ. ಇನ್ನೂ ಸ್ವಲ್ಪ ದಿನ ಕಳೆದರೆ ಕೆಲವೇ ವರ್ಷಗಳಲ್ಲಿ ಎಲ್ಲೆಡೆ ಸಾಮಾನ್ಯವೆಂಬಂತೆ ಬಾಕ್ಸ್‌ ಟಿ.ವಿಗಳು, ರೋಲೆಬಲ್ ಟಿ.ವಿಗಳೂ ಕೂಡಾ ಬರಲಿವೆ.

ಇದೀಗ ವೈಶಿಷ್ಟ್ಯಗಳುಳ್ಳ ಟಿ.ವಿ ಮಾರುಕಟ್ಟೆಗೆ ಬಂದಿದೆ. ಇದರ ಹೆಸರು ಡಿಸ್‌ಪ್ಲೇಸ್. ಇದರ ಬಳಕೆ, ಉಪಯೋಗ, ತಂತ್ರಜ್ಞಾನ, ವಿನ್ಯಾಸ ಎಲ್ಲವೂ ಭಿನ್ನವಾಗಿವೆ. ಎಲ್ಲಕ್ಕಿಂತ ಮುಖ್ಯವಾಗಿ ವಿಶ್ವದ ಮೊದಲ ವೈರ್‌ಲೆಸ್‌ ತಂತ್ರಜ್ಞಾನವಿರುವ ಟಿ.ವಿ ಆಗಿದೆ. ಬ್ಯಾಟರಿಗಳ ನೆರವಿನಿಂದ ಕಾರ್ಯವನ್ನು ಮಾಡುತ್ತದೆ.

Advertisement

ಎಲ್ಲ ಟಿ.ವಿಗಳಂತೆ ಇದನ್ನು ಗೋಡೆಗೆ ಅಳವಡಿಸಲು ರಂಧ್ರ ಕೊರೆಯುವ ಅಥವಾ ಇದಕ್ಕಾಗಿ ಪ್ರತ್ಯೇಕ ಕಪಾಟು ಮಾಡಿಸುವ ಅಗತ್ಯವಿಲ್ಲ. ಸ್ಟ್ಯಾಂಡ್ ಕೂಡ ಬೇಕಿಲ್ಲ. ಇದರಲ್ಲಿ ಸೆಲ್ಫ್ ಮೌಂಟೆಬಲ್ ತಂತ್ರಜ್ಞಾನ ಅಳವಡಿಸಲಾಗಿದ್ದು, ಮನೆಯ ಗೋಡೆ ಅಥವಾ ಗಾಜಿನ ಗೋಡೆಗಳಿಗೆ ವ್ಯಾಕ್ಯುಮ್ ಸೆಲ್ಫ್ ಸೆಕ್ಷನ್ ಕಪ್‌ಗಳ ನೆರವಿನಿಂದ ಅಂಟಿಕೊಳ್ಳುವಂತೆ ತಯಾರಿಸಲಾಗಿದೆ. ಇದಕ್ಕೆ ಯಾವುದೇ ರೀತಿಯಲ್ಲೂ ವಿದ್ಯುತ್ ಸಂಪರ್ಕ ಕೊಡುವ ಅವಶ್ಯಕತೆ ಇಲ್ಲ. ಇದರಲ್ಲಿ ನಾಲ್ಕು ಬ್ಯಾಟರಿಗಳನ್ನು ಅಳವಡಿಸಲಾಗಿದ್ದು , ಬ್ಯಾಟರಿ ಶಕ್ತಿ ಕ್ಷೀಣಿಸಿದಾಗ ಟಿ.ವಿಯಿಂದ ಹೊರ ತೆಗೆದು ರೀಚಾರ್ಜ್ ಮಾಡಿಕೊಳ್ಳಲು ಅವಕಾಶ ಇದೆ.

ಎಲ್ಲ ಬ್ಯಾಟರಿಗಳನ್ನು ಒಮ್ಮೆ ರೀಚಾರ್ಜ್ ಮಾಡಿದರೆ ದಿನಕ್ಕೆ ಸರಾಸರಿ ಆರು ಗಂಟೆ ವೀಕ್ಷಿಸಿದರೂ ಒಂದು ತಿಂಗಳವರೆಗೆ ಬ್ಯಾಟರಿ ಬ್ಯಾಕಪ್ ಇರುತ್ತದೆ. ನಾಲ್ಕೂ ಬ್ಯಾಟರಿಗಳನ್ನು ಒಮ್ಮೆಗೆ ರೀಚಾರ್ಜ್ ಮಾಡುವ ಅಗತ್ಯವಿಲ್ಲ ಒಂದು ಬ್ಯಾಟರಿ ಶಕ್ತಿ ಹೀನವಾದಾಗ ಕೇವಲ ಅದನ್ನೇ ಹೊರತೆಗೆದು ರೀಚಾರ್ಜ್ ಮಾಡಿ ಇಡಬಹುದು. ಹೀಗಾಗಿ ಒಂದರ ನಂತರ ಮತ್ತೊಂದನ್ನು ರೀಚಾರ್ಜ್ ಮಾಡಿಕೊಳ್ಳುತ್ತಾ ಟಿ.ವಿ ನೋಡಬಹುದು.

* ರೆಸಲ್ಯೂಷನ್: 4ಕೆ
* ಡಿಸ್‌ಪ್ಲೇ ಸ್ಕ್ರೀನ್ ಗಾತ್ರ: 55 ಇಂಚು
* ತೂಕ: ಸುಮಾರು 9 ಕೆ.ಜಿ.

ಬ್ಯಾಟರಿ ಶಕ್ತಿ ಕಡಿಮೆಯಾದಗಾ ತಾನಾಗಿಯೇ ಗೋಡೆಯಿಂದ ಸುರಕ್ಷಿತವಾಗಿ ಇಳಿಯುವಂತೆ ಸೆಲ್ಫ್ ಲ್ಯಾಂಡಿಂಗ್ ಇದೆ. ಇದರಲ್ಲಿ ತಂತ್ರಜ್ಞಾನದ ಮೋಟಾರ್ ಸೆಲ್ಫ್ ಮೆಕ್ಯಾನಿಸಂ ಅಳವಡಿಸಲಾಗಿದೆ. ಇದರಿಂದ ಡಿಸ್‌ಪ್ಲೇ ಸ್ಕ್ರೀನ್‌ಗೆ ಯಾವುದೇ ಹಾನಿಯಾಗದಂತೆ ಜಿಪ್‌ಲೈನ್ ಹಾಗೂ ಫೋಮ್ ಮೆಕ್ಯಾನಿಸಂ ಇದೆ. ಇದು ಈ ಟಿ.ವಿಯ ಮತ್ತೊಂದು ವಿಶೇಷವಾಗಿದೆ. ಇದರ ನಿಯಂತ್ರಣಕ್ಕೆ ಯಾವುದೇ ರಿಮೋಟ್ ಇಲ್ಲ, ಕೈ ಸನ್ನೆಗಳಿಂದಲೇ ನಿಯಂತ್ರಿಸಬಹುದು.

ಅಗತ್ಯಕ್ಕೆ ತಕ್ಕಂತೆ ಸೌಂಡ್‌ ನಿಯಂತ್ರಿಸಬಹುದು. ಇದರಲ್ಲಿ ಕ್ಯಾಮೆರಾ ಅಳವಡಿಸಲಾಗಿದೆ. ನಮ್ಮ ಧ್ವನಿಯಿಂದಲೂ ನಿಯಂತ್ರಿಸಬಹುದು. ತೀರಾ ಕಷ್ಟವಾದರೆ ಸ್ಮಾರ್ಟ್‌ಫೋನ್‌ಗಳ ಟಚ್‌ಸ್ಕ್ರೀನ್ ಮುಟ್ಟಿ ಬೇಕೆನಿಸಿದ ಆ್ಯಪ್‌ ಹೇಗೆ ಬಳಸುತ್ತಿದ್ದೇವೆಯೊ ಇದರ ಸ್ಕ್ರೀನ್ ಮೇಲೆ ಬೆರಳು ಸ್ಪರ್ಶಿಸಿ ಉಪಯೋಗಿಸಲು ನೆರವಾಗುವಂತೆ ವಾಯ್ಸ್ ಮತ್ತು ಟಚ್ ಬೇಸ್ಡ್ ಕಂಟ್ರೋಲ್ ತಂತ್ರಜ್ಞಾನವನ್ನೂ ಅಳವಡಿಸಲಾಗಿದೆ.

ಉಳಿದ ಟಿ.ವಿಗಳ ಹಿಂದುಗಡೆ ಅದರ ಕಾರ್ಯನಿರ್ವಹಣೆಗೆ ನೆರವಾಗುವಂತೆ ಪಿಸಿಬಿ ಯೂನಿಟ್, ಸ್ಪೀಕರ್‌ಗಳನ್ನು ಅಳವಡಿಸಲಾಗಿರುತ್ತದೆ. ಇದರಿಂದ ಟಿ.ವಿಯ ತೂಕ ಹೆಚ್ಚಾಗಿರುತ್ತದೆ. ಆದರೆ ಈ ಟಿ.ವಿಯನ್ನು ಗೋಡೆಗೆ ಅಂಟಿಕೊಳ್ಳುವಂತೆ ತಯಾರಿಸಲಾಗಿರುವುದರಿಂದ ಇದು ಹಗುರವಾಗಿ ಇರಬೇಕು. ಹೀಗಾಗಿ ಇದರಲ್ಲಿ ಕೇವಲ ಡಿಸ್‌ಪ್ಲೇ ಪ್ಯಾನೆಲ್ ಹಾಗೂ ವೈರ್‌ಲೆಸ್ ರಿಸೀವರ್ ಅಳವಡಿಸಲಾಗಿದೆ. ಆದರೆ ಇದು ಕೆಲಸ ನಿರ್ವಹಿಸಲು ಕನ್‌ಸೋಲ್ ನೀಡಲಾಗುತ್ತದೆ. ಇದು ಟಿ.ವಿಯಿಂದ ಪ್ರತ್ಯೇಕವಾಗಿರುತ್ತದೆ. ಈ ರೀತಿಯ ಒಂದು ಕನ್‌ಸೋಲ್‌ನಿಂದ ಡಿಸ್‌ಪ್ಲೇಸ್‌ನಂತಹ ನಾಲ್ಕು ಟಿ.ವಿಗಳನ್ನು ನಿಯಂತ್ರಿಸುವಂತಹ ಸಾಮರ್ಥ್ಯವನ್ನು ಹೊಂದಿದೆ.

Advertisement
Tags :
LatestNewsNewsKannadaತಂತ್ರಜ್ಞಾನ
Advertisement
Next Article