For the best experience, open
https://m.newskannada.com
on your mobile browser.
Advertisement

ರಕ್ತದೊತ್ತಡವನ್ನು ಸಮತೋಲನದಲ್ಲಿರಿಸಲು ಕಲ್ಲಂಗಡಿ ಹಣ್ಣು ಸೂಕ್ತ!

ಕಡಿಮೆ ಕ್ಯಾಲರಿಯ, ಹೆಚ್ಚು ನೀರಿನಂಶ ಇರುವ ತಂಪಾದ ಹಣ್ಣು ಕಲ್ಲಂಗಡಿ. ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಈ ಹಣ್ಣು ಸೇವನೆಗೆ ಸೂಕ್ತ.
02:18 PM Jul 09, 2024 IST | Chaitra Kulal
ರಕ್ತದೊತ್ತಡವನ್ನು ಸಮತೋಲನದಲ್ಲಿರಿಸಲು ಕಲ್ಲಂಗಡಿ ಹಣ್ಣು ಸೂಕ್ತ

ಕಡಿಮೆ ಕ್ಯಾಲರಿಯ, ಹೆಚ್ಚು ನೀರಿನಂಶ ಇರುವ ತಂಪಾದ ಹಣ್ಣು ಕಲ್ಲಂಗಡಿ. ಭರಪೂರ ಪೋಷಕಾಂಶಗಳಿರುವ ಹೃದಯ ಸ್ನೇಹಿಯಾಗಿರುವ, ಕಿಡ್ನಿಯ ಆರೋಗ್ಯಕ್ಕೂ ಸಹಾಯ ಮಾಡುವ, ರಕ್ತದೊತ್ತಡವನ್ನೂ ಸಮತೋಲನಗೊಳಿಸುವ ಈ ಹಣ್ಣು ಸೇವನೆಗೆ ಸೂಕ್ತವಾಗಿದೆ.

Advertisement

ಕಲ್ಲಂಗಡಿ ಹಣ್ಣಿನಲ್ಲಿ 90ಕ್ಕೂ ಹೆಚ್ಚು ಪ್ರತಿಶತ ನೀರಿದೆ. ಲೈಕೋಪೀನ್, ಪೊಟಾಶಿಯಂ, ಹಾಗೂ ಸಾಕಷ್ಟು ಪ್ರಮಾಣದಲ್ಲಿ ಇತರ ಪೋಷಕಾಂಶಗಳೂ ಇವೆ. ನಾರಿನಂಶವೂ ಹೆಚ್ಚಿದೆ. ಹಾಗಾಗಿ ಜೀರ್ಣಕ್ರಿಯೆಗೆ ಸಹಾಯವನ್ನೂ ಮಾಡುತ್ತದೆ ನಿಜ. ಆದರೆ, ಇವೆಲ್ಲ ಇದ್ದೂ, ಕಲ್ಲಂಗಡಿ ಹಣ್ಣನ್ನು ಯಾವಾಗ ಎಷ್ಟು ತಿನ್ನಬೇಕು ಎಂಬ ಅರಿವು ಇರಬೇಕು.

ಕಲ್ಲಂಗಡಿ ಹಣ್ಣು ಸ್ವಲ್ಪ ಅಸಿಡಿಕ್‌ ಅಂದರೆ ಆಮ್ಲೀಯ ಗುಣವನ್ನೂ ಹೊಂದಿರುವುದರಿಂದ ದೇಹ ವಿಶ್ರಾಂತಿಗೆ ಹೊರಡುವ ಸಂದರ್ಭ ಇದರ ಸೇವನೆ ಒಳ್ಳೆಯದಲ್ಲ. ಅಷ್ಟೇ ಅಲ್ಲ, ಇದು ಜೀರ್ಣಕ್ರಿಯೆಯನ್ನೂ ನಿಧಾನಗೊಳಿಸುವ ಅಪಾಯವಿರುತ್ತದೆ.

Advertisement

ಕಲ್ಲಂಗಡಿ ಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆಯ ಪ್ರಮಾಣ ಹೆಚ್ಚಿರುವುದರಿಂದ ರಾತ್ರಿ ಸೇವಿಸಿದರೆ, ತೂಕ ಹೆಚ್ಚಾಗುವ ಸಂಭವವೂ ಇದೆ. ಕೇವಲ ಇವಿಷ್ಟೇ ಅಲ್ಲ, ಕಲ್ಲಂಗಡಿ ಹಣ್ಣಿನಲ್ಲಿ ಹೆಚ್ಚು ನೀರಿರುವುದರಿಂದ ಆಗಾಗ ಮೂತ್ರ ಬರುವ ಸಂಭವ ಹೆಚ್ಚು. ಹೀಗಾಗಿ, ರಾತ್ರಿಯ ನಿದ್ದೆಗೆ ಭಂಗ ಉಂಟಾಗಲೂಬಹುದು.

ಶೀತ ಪ್ರಕೃತಿಯ ದೇಹ ಇರುವ ಮಂದಿಗೆ ರಾತ್ರಿ ಕಲ್ಲಂಗಡಿ ಸೇವನೆಯಿಂದ ತಲೆನೋವು, ನೆಗಡಿ ಬರುವ ಸಂಭವವೂ ಇದೆ. ಮಾರನೇ ದಿನ ತಲೆ ಭಾರವಾದ ಸ್ಥಿತಿ, ತಲೆನೋವಿನ ಸಮಸ್ಯೆಯೂ ಕೆಲವರಿಗೆ ಬರಬಹುದು. ಹಾಗಾಗಿ ಈ ಬಗ್ಗೆ ಜಾಗರೂಕರಾಗಿರಿ. ಕಲ್ಲಂಗಡಿ ಹಣ್ಣನ್ನು ಅಂಗಡಿಯಿಂದ ತಂದ ತಕ್ಷಣ ತಾಜಾ ಆಗಿರುವಾಗಲೇ ಕತ್ತರಿಸಿ ತಿನ್ನುವುದು ಒಳ್ಳೆಯದು.

Advertisement
Tags :
Advertisement