For the best experience, open
https://m.newskannada.com
on your mobile browser.
Advertisement

ಯಾರಿಗೂ ನಾವು ನಮ್ಮನ್ನು ಹೆದರಿಸಲು ಪರವಾನಗಿ ನೀಡಿಲ್ಲ: ಮುಯಿಜು

ಪ್ರಧಾನಿ ನರೇಂದ್ರ ಮೋದಿ  ಅವರು ಲಕ್ಷದ್ವೀಪಕ್ಕೆ  ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿದೆ.
10:37 PM Jan 13, 2024 IST | Ashika S
ಯಾರಿಗೂ ನಾವು ನಮ್ಮನ್ನು ಹೆದರಿಸಲು ಪರವಾನಗಿ ನೀಡಿಲ್ಲ  ಮುಯಿಜು

ಮಾಲೆ: ಪ್ರಧಾನಿ ನರೇಂದ್ರ ಮೋದಿ  ಅವರು ಲಕ್ಷದ್ವೀಪಕ್ಕೆ  ಭೇಟಿ ನೀಡಿದ ಬಳಿಕ ಭಾರತ ಹಾಗೂ ಮೋದಿ ವಿರುದ್ಧ ಮಾಲ್ಡೀವ್ಸ್‌ ಸಚಿವರು ಅವಹೇಳನಕಾರಿ ಹೇಳಿಕೆ ನೀಡಿದ್ದಕ್ಕೆ ಭಾರತದಲ್ಲಂತೂ ಮಾಲ್ಡೀವ್ಸ್‌ ವಿರುದ್ಧ ಅಭಿಯಾನವೇ ಶುರುವಾಗಿದೆ.

Advertisement

ಇಷ್ಟಾದರೂ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು  ಅವರ ಜಂಭ ಕಡಿಮೆಯಾಗಿಲ್ಲ. ಐದು ದಿನಗಳ ಚೀನಾ ಭೇಟಿ ಮುಗಿಸಿ ಮಾಲ್ಡೀವ್ಸ್‌ಗೆ ಆಗಮಿಸಿದ ಮೊಹಮ್ಮದ್‌ ಮುಯಿಜು, ಸುದ್ದಿಗಾರರೊಂದಿಗೆ ಮಾತನಾಡಿದರು.

ಇದೇ ವೇಳೆ “ಮಾಲ್ಡೀವ್ಸ್‌ ಚಿಕ್ಕ ರಾಷ್ಟ್ರ ಆಗಿರಬಹುದು. ಆದರೆ, ನಾವು ಸ್ವತಂತ್ರರಾಗಿದ್ದೇವೆ, ಸಾರ್ವಭೌಮತ್ವ ಹೊಂದಿದ್ದೇವೆ. ಯಾರಿಗೂ ನಾವು ನಮ್ಮನ್ನು ಹೆದರಿಸಲು ಪರವಾನಗಿ ನೀಡಿಲ್ಲ. ಅಷ್ಟಕ್ಕೂ, ನಾವು ಸಮುದ್ರ ಪ್ರದೇಶದಲ್ಲಿ ಭಾರತದ ಜತೆ ಯಾವುದೇ ಸಹಭಾಗಿತ್ವ, ಪಾಲುದಾರಿಕೆಯನ್ನು ಹೊಂದಿಲ್ಲ” ಎಂದು ಹೇಳಿದ್ದಾರೆ.

Advertisement

ಈ ಮೊದಲೇ  ನೂತನ ಅಧ್ಯಕ್ಷ ಮೊಹಮ್ಮದ್ ಮುಯಿಜು ಅವರು ಚೀನಾ ಪರ ಒಲವುಳ್ಳ ನಾಯಕ ಎಂದು ಗುರುತಿಸಿಕೊಂಡಿದ್ದಾರೆ.  ಈಗ ಚೀನಾಗೆ ತೆರಳಿರುವ ಮೊಹಮ್ಮದ್‌ ಮುಯಿಜು, 50 ದಶಲಕ್ಷ ಡಾಲರ್‌ ಮೊತ್ತದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಸಾಲ, ವ್ಯಾಪಾರದ ಆಸೆ ತೋರಿಸುತ್ತಿರುವ ಚೀನಾ, ಪಾಕಿಸ್ತಾನದಂತೆ ಮಾಲ್ಡೀವ್ಸ್‌ ಮೇಲೆ ನಿಯಂತ್ರಣ ಸಾಧಿಸುವ ಉದ್ದೇಶ ಹೊಂದಿದೆ ಎಂದು ಹೇಳಲಾಗುತ್ತಿದೆ.

ಚೀನಾ ಭೇಟಿ ಬಳಿಕ ಮೊಹಮ್ಮದ್‌ ಮುಯಿಜು ಧಾಟಿಯೇ ಬದಲಾಗಿದೆ. ಚೀನಾ ಪರ ಹೆಚ್ಚಿನ ಒಲವು  ತೋರಿಸುತ್ತಿದ್ದು ಭಾರತವನ್ನು ಕಡೆಗಣಿತ್ತಿದೆ.

Advertisement
Tags :
Advertisement