For the best experience, open
https://m.newskannada.com
on your mobile browser.
Advertisement

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ: ಸಿಎಂ

ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
04:10 PM May 20, 2024 IST | Ashika S
ನಮ್ಮದು ಹೈಕಮಾಂಡ್ ಪಕ್ಷ  ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ  ಸಿಎಂ

ಬೆಂಗಳೂರು:  ನಮ್ಮದು ಹೈಕಮಾಂಡ್ ಪಕ್ಷ, ಹೈಕಮಾಂಡ್ ಹೇಳಿದಂಗೆ ಮಾಡ್ತೀವಿ,  ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

Advertisement

ಬೆಂಗಳೂರು ಪ್ರೆಸ್ ಕ್ಲಬ್ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಸಂಪುಟ ಪುನಾರಚನೆ ಪ್ರಸ್ತಾಪ ನಮ್ಮ ಮುಂದೆ ಇಲ್ಲ. ಸದ್ಯಕ್ಕೆ ಸಂಪುಟ ಪುನಾರಚನೆ ಇಲ್ಲ. ಲೋಕಸಭಾ ಚುನಾವಣೆಯಲ್ಲಿ ಮಿನಿಮಮ್ 15, ಮ್ಯಾಕ್ಸಿಮಮ್ 20 ಗೆಲ್ತೀವಿ. ಬಿಜೆಪಿ ಅವರ ರೀತಿ, ಯಡಿಯೂರಪ್ಪ ರೀತಿ 28ಕ್ಕೆ 28 ಗೆಲ್ತೀವಿ ಅಂತೇಳಲ್ಲ ಎಂದು  ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಜಾತಿ ಗಣತಿಯನ್ನ‌ ಸ್ವೀಕಾರ ಮಾಡಿದ್ದೇವೆ. ನಾನು ವರದಿಯನ್ನು ನೋಡಿಯೂ ಇಲ್ಲ. ಕ್ಯಾಬಿನೆಟ್ ‌ಮುಂದೆ ಇಟ್ಟು ಚರ್ಚೆ ಆಗಬೇಕು. ಆ ಬಳಿಕ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ. ಅಲ್ಲದೆ ಹಿಂದುಳಿದ ವರ್ಗಗಳ ಮೀಸಲಾತಿಯನ್ನ ಮುಸ್ಲಿಮರಿಗೆ ಕಿತ್ತು ಕೊಟ್ಟಿದ್ದಾರೆ ಎಂಬುದು 100ಕ್ಕೆ 100 ಸುಳ್ಳು. ಭಾವನಾತ್ಮಕವಾಗಿ ಜನರನ್ನ ಕೆರಳಿಸಿ ವೋಟ್ ತೆಗೆದುಕೊಳ್ಳುವುದಲ್ಲ ಎಂದು ಕಿಡಿಕಾರಿದರು.

Advertisement

ಇದೇ ವೇಳೆ ನೀವು ಪ್ರಧಾನ ಮಂತ್ರಿ ರೇಸ್ ನಲ್ಲಿ ಇದ್ದೀರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಪ್ರಧಾನಿ ಅಭ್ಯರ್ಥಿ ಅಂತಾ ಕರ್ನಾಟಕದಿಂದ ಯಾರೂ ಇಲ್ಲ. ಕೇಂದ್ರದಲ್ಲಿ INDIA ಮೈತ್ರಿಕೂಟ ಅಧಿಕಾರಕ್ಕೆ ಬರಲಿದೆ. ನಮ್ಮ ಕಾರ್ಯಕ್ರಮಗಳ ಜಾರಿ ಆಧಾರದಲ್ಲಿ ಚರ್ಚಿಸಿ ಪ್ರಧಾನಮಂತ್ರಿ ಯಾರಾಗಬೇಕು ಎನ್ನುವುದನ್ನು ನಿರ್ಧರಿಸುತ್ತೇವೆ ಅಂತಾ ಸ್ಪಷ್ಟಪಡಿಸಿದ್ರು.

Advertisement
Tags :
Advertisement