For the best experience, open
https://m.newskannada.com
on your mobile browser.
Advertisement

ಸೌತೆಕಾಯಿ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು?

ಸೌತೆಕಾಯಿ ಬೇಸಿಗೆಯಲ್ಲಿ ಜನರನ್ನು ಆರೋಗ್ಯದಿಂದ ಇರಿಸುವ ಮತ್ತು ಆರೋಗ್ಯ ಕಾಪಾಡುವ ಪದಾರ್ಥಗಳಲ್ಲಿ ಒಂದು.
02:01 PM Jan 24, 2024 IST | Ramya Bolantoor
ಸೌತೆಕಾಯಿ ಜ್ಯೂಸ್ ಸೇವನೆಯ ಆರೋಗ್ಯಕರ ಪ್ರಯೋಜನಗಳೇನು

ಸೌತೆಕಾಯಿ ಬೇಸಿಗೆಯಲ್ಲಿ ಜನರನ್ನು ಆರೋಗ್ಯದಿಂದ ಇರಿಸುವ ಮತ್ತು ಆರೋಗ್ಯ ಕಾಪಾಡುವ ಪದಾರ್ಥಗಳಲ್ಲಿ ಒಂದು. ಬೇಸಿಗೆ ಕಾಲದಲ್ಲಿ ತಂಪು ಪದಾರ್ಥಗಳ ಸೇವನೆಯತ್ತ ಜನರು ಹೆಚ್ಚು ಮನಸ್ಸು ಮಾಡುತ್ತಾರೆ. ಹೆಚ್ಚು ಹೆಚ್ಚು ಹಣ್ಣು, ನೀರಿನಂಶ ಇರುವ ಪದಾರ್ಥಗಳ ಸೇವನೆ ಮಾಡುತ್ತಾರೆ. ನೀರಿನಂಶ ಇರುವ ಪದಾರ್ಥಗಳ ಸೇವನೆಗೆ ವೈದ್ಯರು ಸಲಹೆ ನೀಡುತ್ತಿದ್ದಾರೆ. ಸೌತೆಕಾಯಿಯಲ್ಲಿ ಹೆಚ್ಚು ನೀರಿನಂಶ ಇದೆ. ಈ ಮುಳ್ಳು ಸೌತೆಕಾಯಿ ಎರಡೂ ಸಲಾಡ್‌ ಮತ್ತು ಜ್ಯೂಸ್ ರೂದಲ್ಲಿ ಸೇವಿಸಬಹುದು

Advertisement

ರಸವಿರುವ ಸೌತೆಕಾಯಿ ನಿಮಗೆ ಜೀರ್ಣವಾಗುವ ನಾರಿನಂಶವನ್ನು ಒದಗಿಸುತ್ತದೆ. ಇದು ನಿಮಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ. ಇವು ಕರುಳಿನಲ್ಲಿ ಸುಲಭವಾಗಿ ಜೀರ್ಣವಾಗುತ್ತವೆ. ಈ ಸೌತೆಕಾಯಿ ಉಗುರು, ಕೂದಲು ಮತ್ತು ತ್ವಚೆಯ ಆರೋಗ್ಯವನ್ನು ನೀಡುತ್ತದೆ.

ಹಲವಾರು ಮಹಿಳೆಯರು ಕಣ್ಣಿನ ಮೇಲೆ ಸೌತೆಕಾಯಿಯನ್ನು ಇರಿಸಿಕೊಂಡು ತಮ್ಮ ಸೌಂದರ್ಯವನ್ನು ಹೆಚ್ಚಿಸಿಕೊಳ್ಳುವ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇದು ಕಣ್ಣಿನ ಊತವನ್ನು ಕಡಿಮೆ ಮಾಡುತ್ತದೆ. ಇದರಲ್ಲಿರುವ ನೋವು ನಿವಾರಕ ಗುಣಗಳು ಕಣ್ಣಿನಲ್ಲಿರುವ ಕೊಳೆಯನ್ನು ತೆಗೆದು, ಅದರ ಸುತ್ತಿನ ರಂಧ್ರಗಳನ್ನು ಸ್ವಚ್ಛಗೊಳಿಸುತ್ತದೆ.

Advertisement

ಸೌತೆಕಾಯಿಯಲ್ಲಿರುವ ಮೊಡವೆ ನಿವಾರಕ ಗುಣಗಳು ಇದನ್ನು ಮತ್ತಷ್ಟು ಪ್ರಯೋಜನಕಾರಿಯಾಗಿದೆ. ಸಿಲಿಕಾ ಎಂಬ ಖನಿಜಾಂಶವು ನಮ್ಮ ದೇಹದ ಅಂಗಾಂಶಗಳನ್ನು ಕಂಡೀಶನಿಂಗ್ ಮಾಡುವ ಗುಣಗಳನ್ನು ಹೊಂದಿದೆ. ಸೌತೆಕಾಯಿಯಲ್ಲಿ ಬಹುತೇಕ ನೀರಿನಂಶವು ಇರುತ್ತದೆ. ಇದರಿಂದಾಗಿಯೇ ಇದು ದೇಹದಲ್ಲಿರುವ ಟಾಕ್ಸಿನ್‌ಗಳನ್ನು ಹೊರ ಹಾಕುವಲ್ಲಿ ಪ್ರಧಾನ ಪಾತ್ರ ನಿರ್ವಹಿಸುತ್ತದೆ. ಟಾಕ್ಸಿನ್‌ಗಳು ನಮ್ಮ ದೇಹದ ಕೋಶಗಳಲ್ಲಿ ಸೇರಿದಾಗ ಉರಿಯೂತವು ಕಾಣಿಸಿಕೊಳ್ಳುತ್ತದೆ.

ಕ್ಯಾಲ್ಸಿಯಂ ರಕ್ತದಲ್ಲಿನ ಅವಿಭಾಜ್ಯ ಅಂಶವಾಗಿದ್ದು ಅದು ಹಾರ್ಮೋನುಗಳ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ. ಪಿಟ್ಯುಟರಿ ಅಥವಾ ಥೈರಾಯ್ಡ್ ನಂತಹ ದೇಹದಲ್ಲಿನ ಯಾವುದೇ ಹಾರ್ಮೋನ್ ಗ್ರಂಥಿಯು ಸಮತೋಲನದಿಂದ ಹೊರಗಿದ್ದರೆ, ಸೌತೆಕಾಯಿಯ ನಿಯಮಿತ ಸೇವನೆಯು ಅದರ ಕ್ಯಾಲ್ಸಿಯಂ ಮಟ್ಟಗಳ ಕಾರಣದಿಂದಾಗಿ ಹಾರ್ಮೋನ್ ಮಟ್ಟವನ್ನು ಸಾಮಾನ್ಯ ಸ್ಥಿತಿಗೆ ತರಲು ಸಹಾಯ ಮಾಡುತ್ತದೆ.

Advertisement
Tags :
Advertisement