For the best experience, open
https://m.newskannada.com
on your mobile browser.
Advertisement

ಕಾಲರಾದಂತಹ ಸಾಂಕ್ರಾಮಿಕ ರೋಗ ತಡೆಗೆ ಸಲಹೆಗಳೇನು?

ಈಗ ಬೇಸಿಗೆ ಕಾಲವಾಗಿರುವುದರಿಂದ  ಒಂದು ಕಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಮಳೆ ಸುರಿಯದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು  ಹರಡಲು ಆರಂಭಿಸಿದ್ದು, ಅದರಲ್ಲೂ ಕಾಲಾರ ಈಗ ಸದ್ದು ಮಾಡುತ್ತಿದೆ. ಇದನ್ನು ತಡೆಗಟ್ಟ ಬೇಕಾದರೆ ನಾವು ಮುಂಜಾಗ್ರತಾ ಕ್ರಮ ವಹಿಸುವುದು ಬಹು ಮುಖ್ಯವಾಗಿದೆ.
09:57 AM Apr 17, 2024 IST | Ashika S
ಕಾಲರಾದಂತಹ ಸಾಂಕ್ರಾಮಿಕ ರೋಗ ತಡೆಗೆ ಸಲಹೆಗಳೇನು

ಈಗ ಬೇಸಿಗೆ ಕಾಲವಾಗಿರುವುದರಿಂದ  ಒಂದು ಕಡೆ ಬಿಸಿಲು ನೆತ್ತಿ ಸುಡುತ್ತಿದ್ದರೆ, ಮತ್ತೊಂದೆಡೆ ನೀರಿನ ಸಮಸ್ಯೆಗಳು ಜನರನ್ನು ಕಾಡುತ್ತಿದೆ. ಇದರ ನಡುವೆ ಮಳೆ ಸುರಿಯದ ಕಾರಣದಿಂದಾಗಿ ಸಾಂಕ್ರಾಮಿಕ ರೋಗಗಳು  ಹರಡಲು ಆರಂಭಿಸಿದ್ದು, ಅದರಲ್ಲೂ ಕಾಲಾರ ಈಗ ಸದ್ದು ಮಾಡುತ್ತಿದೆ. ಇದನ್ನು ತಡೆಗಟ್ಟ ಬೇಕಾದರೆ ನಾವು ಮುಂಜಾಗ್ರತಾ ಕ್ರಮ ವಹಿಸುವುದು ಬಹು ಮುಖ್ಯವಾಗಿದೆ.

Advertisement

ನಗರದಲ್ಲಿ ವಾಸಿಸುವವರು ಹೆಚ್ಚಿನ ನಿಗಾವಹಿಸಬೇಕಾಗಿದೆ. ಈಗಾಗಲೇ  ಹೋಟೇಲ್ ಅಥವಾ ಬೇಕರಿ ಮಾಲೀಕರು, ಬೀದಿಬದಿ ವ್ಯಾಪಾರಸ್ಥರು, ತಂಪುಪಾನೀಯ ಅಥವಾ ಐಸ್‌ಕ್ರೀಮ್, ತಿಂಡಿತಿಸಿಸು ಮಾರಾಟ ಮಾಡುವ ಎಲ್ಲಾ ವ್ಯಾಪಾರಸ್ಥರಿಗೆ ಸಾಂಕ್ರಾಮಿಕ ರೋಗಗಳು ಹರಡದಂತೆ ಸರ್ಕಾರದಿಂದ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಇನ್ನು ಸಾರ್ವಜನಿಕರು ಕೂಡ ಹೊರಗಡೆ ಹೋಗಿ ಆಹಾರಗಳನ್ನು ಸೇವಿಸುವಾಗ ಎಚ್ಚರಿಕೆ ವಹಿಸಬೇಕಾಗುತ್ತದೆ. ಸದ್ಯ  ಆಹಾರ ಮತ್ತು ನೀರಿನಿಂದ ಕಾಲರಾ (ಕರಳುಬೇನೆ) ಸೇರಿದಂತೆ ಸಾಂಕ್ರಾಮಿಕ ರೋಗಗಳು ಕಾಡುತ್ತಿದ್ದು ಅದನ್ನು ತಡೆಯಬೇಕಾದರೆ ಸರ್ಕಾರ ನೀಡಿರುವ ಸಲಹೆಗಳನ್ನು ಪಾಲಿಸುವುದು ಅಗತ್ಯವಾಗಿದೆ.

Advertisement

ಹಾಗಾದರೆ ಸರ್ಕಾರ ಏನೆಲ್ಲ ಸಲಹೆಗಳನ್ನು ನೀಡಿದೆ ಎನ್ನುವುದನ್ನು ನೋಡಿದ್ದೇ ಆದರೆ,  ಸಾರ್ವಜನಿಕ ನೀರಿನ ಕೊಳಾಯಿ ಮತ್ತು ಕುಡಿಯುವ ನೀರನ್ನು ಸಂಗ್ರಹಿಸುವ ಸ್ಥಳವನ್ನು ಸ್ವಚ್ಛವಾಗಿಡುವುದು,  ಕುದಿಸಿ ಆರಿಸಿದ ನೀರನ್ನೇ ಕುಡಿಯುವುದು, ಶುದ್ಧ ನೀರಿನ ಘಟಕದ   ನೀರನ್ನು ಉಪಯೋಗಿಸುವುದು,  ಹೋಟೆಲ್ ಗಳಲ್ಲಿ ಕಡ್ಡಾಯವಾಗಿ ಕುಡಿಯಲು ಬಿಸಿನೀರನ್ನು ಗ್ರಾಹಕರಿಗೆ ನೀಡುವುದು,  ರಸ್ತೆ ಬದಿಯಲ್ಲಿ ಮಾರಾಟ ಮಾಡುವತಂಪು ಪಾನೀಯ ಮತ್ತು ಸೋಡಾಗಳನ್ನು ಸಾರ್ವಜನಿಕರು ಸಾಧ್ಯವಾದಷ್ಟು ಜಾಗೃತೆಯಿಂದ ಉಪಯೋಗಿಸಬೇಕು.

ಇಷ್ಟೇ  ಅಲ್ಲದೆ,  ಊಟ ಮಾಡುವ ಮುನ್ನ ಕೈಗಳನ್ನು ಸಾಬೂನು ಮತ್ತು ನೀರಿನಿಂದ ಸ್ವಚ್ಛಗೊಳಿಸಬೇಕು, ಹೋಟೆಲ್, ರೆಸ್ಟೋರೆಂಟ್ ಅಥವಾ ಬೇಕರಿಗಳಲ್ಲಿ ಬಿಸಿಯಾದ ಆಹಾರ ಪದಾರ್ಥಗಳನ್ನೆ ಸೇವಿಸಬೇಕು, ತಿಂಡಿ ತಿನಿಸು ಮಾರಾಟ ಮಾಡುವ ಎಲ್ಲಾ ವ್ಯಾಪಾರಸ್ಥರು ಮತ್ತು ಹೋಟೆಲ್‌ನಲ್ಲಿ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರು ಕಡ್ಡಾಯವಾಗಿ ಸುರಕ್ಷಾ ಧರಿಸುಗಳನ್ನು ಧರಿಸಬೇಕು,  ರಸ್ತೆ ಬದಿಯಲ್ಲಿತೆರೆದರೀತಿಯಲ್ಲಿ ಮಾರಾಟ ಮಾಡುವ ಆಹಾರ ಪದಾರ್ಥ, ತಿಂಡಿ ತಿನಿಸುಗಳು, ಕತ್ತರಿಸಿದ ಹಣ್ಣು ಹಂಪಲುಗಳನ್ನು ಸೇವಿಸಬಾರದು.

ಮನೆಯಿಂದ  ಹೊರಗೆ ಹೋದಾಗ  ಬಾಟಲ್‌ಗಳಲ್ಲಿ ನೀರನ್ನು ಸಂಗ್ರಹಿಸಿ ಸಾಧ್ಯವಾದಷ್ಟು ಮನೆಯ ನೀರನ್ನು ಕುಡಿಯಬೇಕು, ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮೇಲೆ ಕ್ರಿಮಿಕೀಟಗಳು ಕುಳಿತುಕೊಳ್ಳದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಈ ಮೇಲಿನ ಒಂದಷ್ಟು ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ್ದೇ ಆದರೆ ಬೇಸಿಗೆಯಲ್ಲಿ ಬಾಧಿಸುವ ಸಾಂಕ್ರಾಮಿಕ ರೋಗಗಳಿಂದ ದೂರವಿರಲು ಸಾಧ್ಯವಾಗಲಿದೆ.

Advertisement
Tags :
Advertisement