ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜೈನ ಸಂತರು ಹೇಗೆ ಸಾವನ್ನ ಬರಮಾಡಿಕೊಳ್ಳುತ್ತಾರೆ: ಏನಿದು ಸಲ್ಲೇಖನ?

ಜೈನ ಸಂತರು ಕೈಗೊಳ್ಳುವ ಸಮಾಧಿಯನ್ನು 'ಸಲ್ಲೇಖನ' ಎಂದು ಕರೆಯಲಾಗುತ್ತದೆ. ಜೈನ ಧರ್ಮದ ಪ್ರಕಾರ, ಸಲ್ಲೇಖನವು ಒಂದು ರೀತಿಯ ಆತ್ಮಹತ್ಯೆಯಾಗಿದೆ. ಸಲ್ಲೇಖನ ಮೂಲಕ ಜೈನ ಸಂತರು ಯಾವುದೇ ವಿಶೇಷ ಆಚರಣೆಗಳಿಲ್ಲದೆ ಮರ್ತ್ಯ ಜೀವನದ ಮೋಕ್ಷವನ್ನು ಪಡೆಯುತ್ತಾರೆ. ನಿರಾಹಾರಿಗಳಾಗಿ ಪರಪಮದವನ್ನು ಸೇರುವುದಕ್ಕೆ ಆ ಸಮುದಾಯ ಶೋಧಿಸಿರುವ ಮಾರ್ಗ ಅದು. ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ಫೆ.18ರಂದು ದೇಹ ತ್ಯಾಗ ಮಾಡಿದ್ದಾರೆ.
03:24 PM Feb 23, 2024 IST | Ashitha S

ವಿಶೇಷ: ಜೈನ ಸಂತರು ಕೈಗೊಳ್ಳುವ ಸಮಾಧಿಯನ್ನು "ಸಲ್ಲೇಖನ" ಎಂದು ಕರೆಯಲಾಗುತ್ತದೆ. ಜೈನ ಧರ್ಮದ ಪ್ರಕಾರ, ಸಲ್ಲೇಖನವು ಒಂದು ರೀತಿಯ ಆತ್ಮಕ್ಕೆ ಮುಕ್ತಿ ನೀಡುವುದಾಗಿದೆ.  ಸಲ್ಲೇಖನ ಮೂಲಕ ಜೈನ ಸಂತರು ಯಾವುದೇ ವಿಶೇಷ ಆಚರಣೆಗಳಿಲ್ಲದೆ ಮರ್ತ್ಯ ಜೀವನದ ಮೋಕ್ಷವನ್ನು ಪಡೆಯುತ್ತಾರೆ. ನಿರಾಹಾರಿಗಳಾಗಿ ಪರಪಮದವನ್ನು ಸೇರುವುದಕ್ಕೆ ಆ ಸಮುದಾಯ ಶೋಧಿಸಿರುವ ಮಾರ್ಗ ಅದು. ಜೈನ ಸನ್ಯಾಸಿ ಆಚಾರ್ಯ ವಿದ್ಯಾಸಾಗರ ಮಹಾರಾಜ್ ಸಲ್ಲೇಖನ ವ್ರತ ಘೋಷಿಸಿ ಫೆ.18ರಂದು ದೇಹ ತ್ಯಾಗ ಮಾಡಿದ್ದಾರೆ.

Advertisement

ಏನಿದು ಸಲ್ಲೇಖನ ವ್ರತ ಅಂತ ನೋಡುವುದಾರೇ. . ಜೈನ ಸಮುದಾಯದ ಆದಿಯಿಂದಲೂ ಸಲ್ಲೇಖನ ವ್ರತ ಇದೆ. ಜೈನರು ಸಲ್ಲೇಖನ ಕೈಗೊಳ್ಳುವುದಕ್ಕೆ ಮತ್ತೊಂದು ಪ್ರಧಾನ ಕಾರಣವೆಂದರೆ ಅದು ಕರ್ಮ. ಆಹಾರ ಸೇವನೆಯೂ ಸೇರಿ ಜೈನರ ನಂಬಿಕೆಯ ಪ್ರಕಾರ ಪ್ರತಿಯೊಂದೂ ಕ್ರಿಯೆಯೂ ಕರ್ಮಕ್ಕೆ ಸಂಬಂಧಿಸಿದ್ದಾಗಿದೆ.

ಸಸ್ಯಗಳಿಗೂ ಜೀವವಿದೆ ಎಂದು ನಂಬಿರುವ ಜೈನರು ತರಕಾರಿ, ಹಣ್ಣುಗಳನ್ನು ತಿನ್ನುವುದರಿಂದ ಅವುಗಳಿಗೆ ನೋವಾಗುತ್ತದೆ ಎಂದು ಭಾವಿಸತ್ತಾರೆ. ಹೀಗಾಗಿ ಅವುಗಳ ಸೇವನೆಯೂ ವರ್ಜ್ಯವೆನ್ನಿಸಿದೆ. ಸಸ್ಯಾಹಾರ ಸೇವನೆಯಿಂದ ಸಸ್ಯಗಳಿಗೆ ನೋವನ್ನು ಉಂಟು ಮಾಡಿದಂತೆ. ನೀರಿನಲ್ಲಿಯೂ ಸೂಕ್ಷ್ಮ ಜೀವಿಗಳಿರುವುದರಿಂದ ನೀರು ಕುಡಿಯುವುದು ಕೂಡ ನಕಾರಾತ್ಮಕ ಕರ್ಮಕ್ಕೆ ಕಾರಣ ಎಂಬುದು ಸಲ್ಲೇಖನ ಕೈಗೊಂಡವರ ನಂಬಿಕೆಯಾಗಿರುತ್ತದೆ.

Advertisement

ದೇಹ ತ್ಯಾಗದ ವೇಳೆ ಹಳೆಯ ಕರ್ಮದ ಪಾಪದಿಂದ ದೇಹವನ್ನು ಶುದ್ಧೀಕರಿಸಿ ಮೋಕ್ಷ ಸಾಧಿಸಲು ಜೈನರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ ಎಂದೂ ಹೇಳಲಾಗುತ್ತದೆ.

ಜೈನ ಧರ್ಮದಲ್ಲಿ, ಒಬ್ಬ ಸಂತನು ಸಮಾಧಿಯನ್ನು ಅಂದರೆ ಸಲ್ಲೇಖನ ವ್ರತವನ್ನು ತೆಗೆದು ಕೊಳ್ಳಬೇಕಾದರೆ, ಅದಕ್ಕಾಗಿ ಅವನು ಅಹಿಂಸೆ, ಆಸ್ತಿ ಸಂಗ್ರಹಣೆ, ಸುಳ್ಳು, ಕಳ್ಳತನ ಮುಂತಾದ ಕೃತ್ಯಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಯಾಕೆಂದರೆ ಸಲ್ಲೇಖನ ಸಂಪ್ರದಾಯವನ್ನು ಜೈನ ಧರ್ಮದಲ್ಲಿ ಬಹಳ ವಿಶೇಷವೆಂದು ಪರಿಗಣಿಸಲಾಗಿದೆ. ಸಾವು ಬಂದಾಗ ಈ ಸಂಪ್ರದಾಯವನ್ನು ಅನುಸರಿಸಲಾಗುತ್ತದೆ.

ಜೈನ ಧರ್ಮದಲ್ಲಿ ತಿಳಿಸಿದಂತೆ ಒಬ್ಬ ವ್ಯಕ್ತಿಗೆ ಸಾವು ಸನ್ನಿಹಿತವಾದಾಗ ಮತ್ತು ಅವನ ದೇಹವು ಕೆಲವೇ ದಿನಗಳಲ್ಲಿ ಸಾಯಬಹುದು ಎಂದೆನಿಸಿದಾಗ, ಆ ವ್ಯಕ್ತಿಯು ತಾನಾಗಿಯೇ ಆಹಾರ ಮತ್ತು ನೀರನ್ನು ತ್ಯಜಿಸುತ್ತಾನೆ. ದಿಗಂಬರ ಜೈನ ಶಾಸ್ತ್ರದ ಪ್ರಕಾರ, ಇದನ್ನು ಮಹಾಸಮಾಧಿ ಅಥವಾ ಸಲ್ಲೇಖನ ಎಂದು ಕರೆಯಲಾಗುತ್ತದೆ.

ಸಲ್ಲೇಖನವನ್ನು ಅನುಸರಿಸುವುದು ತುಂಬಾ ಕಷ್ಟ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ದೇಹವು ಸಾಕಷ್ಟು ಕಷ್ಟಗಳನ್ನು ಅನುಭವಿಸಬೇಕಾಗುತ್ತದೆ. ಜೈನ ಧರ್ಮದ ಸಂತರು ಸಲ್ಲೇಖನವನ್ನು ಅಂದರೆ ಸಮಾಧಿಯನ್ನು ಹೊಂದುವುದು ಎಂದರೆ, ಅದು ಸಾವಿನ ಸಮಯವನ್ನು ಗೆದ್ದಂತೆ. ಈ ಕಾರಣಕ್ಕಾಗಿ, ಸಲ್ಲೇಖನ ಸಮಯದಲ್ಲಿ ನಿಯಮಗಳನ್ನು ಅನುಸರಿಸುವುದು ಜೈನ ಧರ್ಮದಲ್ಲಿ ಅತ್ಯಂತ ಮುಖ್ಯ.

ಇನ್ನು ಯಾರು ತಮಗಿಷ್ಟ ಬಂದಂತೆ ಸಲ್ಲೇಖನ ವ್ರತವನ್ನು ಕೈಗೊಳ್ಳಲು ಸಾಧ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಯಾರು ಜೀವನದಲ್ಲಿ ತನ್ನ ಜೀವಿತದ ಎಲ್ಲಾ ಉದ್ದೇಶಗಳನ್ನು ಈಡೇರಿಸಿರುವ ತೃಪ್ತಿ ಹೊಂದಿರುತ್ತಾರೋ, ಈ ದೇಹದ ಅಗತ್ಯ ಇನ್ನು ಇಲ್ಲ ಎಂದು ಅನಿಸುತ್ತದೆಯೋ, ಅವರು ಸಲ್ಲೇಖನ ವೃತ ಮಾಡುತ್ತಾರೆ.

ಸಲ್ಲೇಖನ ಅಥವಾ ಸಂತಾರಾ ಯಾರು ಬೇಕಾದರೂ ಕೈಗೊಳ್ಳಬಹುದಾದ ವ್ರತವಲ್ಲ. ಅನಾರೋಗ್ಯದಿಂದ ಬಳಲುತ್ತಿರುವವರು, ಅಥವಾ ಸಾವಿನ ಸನಿಹದಲ್ಲಿರುವವರು ಜೀವಿತದ ಉದ್ದೇಶವನ್ನು ಈಡೇರಿಸಿರುವವರು ಕೈಗೊಳ್ಳಬಹುದಾಗಿರುವುದಾಗಿದ್ದು ಅಪರೂಪದಲ್ಲಿ ಕೆಲವೇ ಮಂದಿ ಸಾಧು ಸಂತರು ಸಲ್ಲೇಖನ ವ್ರತ ಕೈಗೊಳ್ಳುತ್ತಾರೆ. ಹಾಗಂತ ಅವರೇನು ದಿಢೀರನೆ ಎಲ್ಲಾ ರೀತಿಯ ಆಹಾರಗಳನ್ನು ಬಿಟ್ಟು ಉಪವಾಸ ಕುಳಿತುಬಿಡುವುದಿಲ್ಲ. ಅದಕ್ಕೂ ಒಂದು ಕ್ರಮವಿದೆ. ಪ್ರಾರಂಭದಲ್ಲಿ ಘನ ಆಹಾರವನ್ನು ತ್ಯಜಿಸುತ್ತಾರೆ, ನಂತರ ದ್ರವರೂಪದಲ್ಲಿರುವ ಆಹಾರ, ಕೊನೆಗೆ ನೀರನ್ನೂ ತ್ಯಜಿಸಿ ದೇಹವನ್ನು ಅಂತ್ಯಗೊಳಿಸಿಬಿಡುತ್ತಾರೆ.

ಸಲ್ಲೇಖನ ವ್ರತಕ್ಕೆ ಪುರಾತನ ಇತಿಹಾಸವೂ ಇದ್ದು ರಾಜ ಮಹಾರಾಜರು ಸಲ್ಲೇಖನ ವ್ರತ ಕೈಗೊಂಡಿದ್ದ ಉದಾಹರಣೆಗಳಿವೆ. ಭಾರತ ಕಂಡ ಅತ್ಯಂತ ಸಮರ್ಥ ಅರಸುಗಳಲ್ಲಿ ಒಬ್ಬನಾದ ಚಂದ್ರಗುಪ್ತ ಮೌರ್ಯ ಕರ್ನಾಟಕದ ಶ್ರವಣಬೆಳಗೊಳದಲ್ಲಿರುವ ಚಂದ್ರಗಿರಿಯಲ್ಲಿ ಸಲ್ಲೇಖನ ವ್ರತ ಕೈಗೊಂಡು ತನ್ನ ದೇಹಾಂತ್ಯ ಮಾಡಿದ್ದರು. ಇನ್ನು ಅಖಂಡ ಜೈನ ಸಂಪ್ರದಾಯದ ಆಚಾರ್ಯರಾಗಿದ್ದ ಭದ್ರಬಾಹು ಸಹ ಸಲ್ಲೇಖನ ರೀತಿಯಲ್ಲೇ ದೇಹಾಂತ್ಯ ಮಾಡಿದ್ದರು.

Advertisement
Tags :
indiaLatestNewsNewsKannadasallekhanaಆತ್ಮಜೈನಸಂತರುಸಾವು
Advertisement
Next Article