For the best experience, open
https://m.newskannada.com
on your mobile browser.
Advertisement

ಆರೋಗ್ಯಯತ ಕಿಡ್ನಿ ನಮ್ಮದಾಗಲು ಏನು ಮಾಡಬೇಕು?

ಯಾವಾಗ ಯಾವ ಕಾಯಿಲೆ ನಮ್ಮನ್ನು ಬಾಧಿಸುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆಯಬಾರದು. ಇತ್ತೀಚೆಗಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚು ಜನರನ್ನು ಕಾಡಲಾರಂಭಿಸಿದೆ.  ಇದಕ್ಕೆ ಕಾರಣಗಳು ಅನೇಕ ಇರಬಹುದಾದರೂ ಶಿಸ್ತು ಬದ್ಧ ಜೀವನದ ಕೊರತೆ, ಅಗತ್ಯ ನೀರನ್ನು ಸೇವಿಸದಿರುವುದು ಹೀಗೆ ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಬಹುದಾಗಿದೆ.
02:43 PM May 06, 2024 IST | Ashika S
ಆರೋಗ್ಯಯತ ಕಿಡ್ನಿ ನಮ್ಮದಾಗಲು ಏನು ಮಾಡಬೇಕು

ಯಾವಾಗ ಯಾವ ಕಾಯಿಲೆ ನಮ್ಮನ್ನು ಬಾಧಿಸುತ್ತದೆ ಎಂದು ಹೇಳಲಾಗುವುದಿಲ್ಲ. ಹೀಗಾಗಿ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸುವುದನ್ನು ಮರೆಯಬಾರದು. ಇತ್ತೀಚೆಗಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಗಳು ಹೆಚ್ಚು ಜನರನ್ನು ಕಾಡಲಾರಂಭಿಸಿದೆ.  ಇದಕ್ಕೆ ಕಾರಣಗಳು ಅನೇಕ ಇರಬಹುದಾದರೂ ಶಿಸ್ತು ಬದ್ಧ ಜೀವನದ ಕೊರತೆ, ಅಗತ್ಯ ನೀರನ್ನು ಸೇವಿಸದಿರುವುದು ಹೀಗೆ ಹಲವು ಕಾರಣಗಳನ್ನು ನಾವು ಪಟ್ಟಿ ಮಾಡಬಹುದಾಗಿದೆ.

Advertisement

ಒಬ್ಬ ವ್ಯಕ್ತಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ ಎಂಬುದಕ್ಕೆ  ಕಾಲು ಮತ್ತಿತರ ಶರೀರದ ಭಾಗಗಳು ಊದಿಕೊಳ್ಳುವುದು, ವಿಪರೀತ ರಕ್ತದೊತ್ತಡ, ರಕ್ತಹೀನತೆಯಿಂದ ಬಿಳಿಚಿಕೊಳ್ಳುವುದು, ದುರ್ಬಲತೆ, ಕಡಿಮೆ ಅಥವಾ ಸಾಮಾನ್ಯ ಪ್ರಮಾಣದ ಮೂತ್ರ, ವಾಕರಿಕೆ, ಒಣಗಿದ ನವೆಯಾದ ಚರ್ಮ, ಹಸಿವಿಲ್ಲದಿರುವಿಕೆ, ಪಾದಗಳಲ್ಲಿ ಹೆಚ್ಚು ಬಿರುಕು, ಮುಖದಲ್ಲಿ ಅದರಲ್ಲೂ ಕಣ್ಣುರೆಪ್ಪೆಯ ಕೆಳಭಾಗದಲ್ಲಿ ಊದಿಕೊಳ್ಳುವುದು ಗುಣಲಕ್ಷಣಗಳಾಗಿವೆ.

ಪ್ರತಿಯೊಬ್ಬ ಮನುಷ್ಯನಲ್ಲಿಯೂ ಬೆನ್ನುಹುರಿಯ ಅಕ್ಕಪಕ್ಕದಲ್ಲಿ ಎರಡು ಹುರುಳಿಕಾಳಿನಾಕಾರದ ಮುಷ್ಠಿಗಾತ್ರದ  ಮೂತ್ರಪಿಂಡ(ಕಿಡ್ನಿ)ಗಳಿರುತ್ತವೆ ಈ ಮೂತ್ರಪಿಂಡಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೆ ಮಾತ್ರ ಮನುಷ್ಯ ಆರೋಗ್ಯವಂತನಾಗಿ ಬದುಕಲು ಸಾಧ್ಯವಾಗುತ್ತದೆ. ನಮ್ಮ ಶರೀರಕ್ಕೆ ಆಹಾರದ ಮೂಲಕ ಬಂದಿರುವ ವ್ಯರ್ಥ ಪದಾರ್ಥಗಳನ್ನು ಶೋಧಿಸಿ ಅವುಗಳನ್ನು ಶರೀರದಿಂದ ಮೂತ್ರದ ಮೂಲಕ ಉತ್ಪಾದಿಸಿ ಹೊರಹಾಕುವ ಕೆಲಸವನ್ನು ಮಾಡುತ್ತಿರುತ್ತವೆ.

Advertisement

ಇಷ್ಟೇ ಅಲ್ಲದೆ ಶರೀರಕ್ಕೆ ಅಗತ್ಯ ಪ್ರಮಾಣದಲ್ಲಿ ಬೇಕಾಗುವ ಸೋಡಿಯಂ, ಪೊಟ್ಯಾಸಿಯಂ ಮತ್ತು ನೀರಿನಾಂಶವನ್ನು  ಕಾಪಾಡುವ ಕೆಲಸವನ್ನು ಕೂಡ ಮೂತ್ರಪಿಂಡಗಳು ಮಾಡುತ್ತಿರುತ್ತವೆ. ರಕ್ತದ ಒತ್ತಡವನ್ನು ಸಮತೋಲನವಾಗಿರಿಸುವುದು, ಕೆಂಪು ರಕ್ತಕಣಗಳನ್ನು ನಿರ್ಮಾಣ ಮಾಡುವುದು, ಮೂಳೆಗಳನ್ನು ಗಟ್ಟಿಗೊಳಿಸುವ ಕಾರ್ಯವನ್ನು ಮಾಡುತ್ತವೆ.

ಇವೆಲ್ಲವೂ ಮೂತ್ರಪಿಂಡಗಳ ಕೆಲಸವಾಗಿದ್ದು, ಇಲ್ಲಿ ಒಂದೇ ಒಂದು ಹೆಚ್ಚುಕಮ್ಮಿಯಾದರೂ ಅದರ ಪರಿಣಾಮ  ಶರೀರದ ಮೇಲೆ ಬೀಳುತ್ತದೆ. ಒಂದು ವೇಳೆ ಮೂತ್ರಪಿಂಡದಲ್ಲಿ ದೋಷ(ಕಾಯಿಲೆ) ಕಂಡುಬಂದರೆ ರಕ್ತದಿಂದ ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥ ಪದಾರ್ಥಗಳನ್ನು ಶೋಧಿಸಲು ಸಾಧ್ಯವಾಗದೆ ವ್ಯರ್ಥ ಪದಾರ್ಥಗಳು ಮತ್ತು ಎಲೆಕ್ಟ್ರೋಲೈಟ್(ಸೋಡಿಯಂ ಮತ್ತು ಪೊಟ್ಯಾಸಿಯಂ)ಗಳು ರಕ್ತದಲ್ಲಿ ಶೇಖರಣೆಗೊಳ್ಳುತ್ತವೆ. ಇದರಿಂದ ಆರೋಗ್ಯ ಹದಗೆಡುತ್ತದೆ.

ಸಾಮಾನ್ಯವಾಗಿ ರಕ್ತದಿಂದ ಸಾಕಷ್ಟು ಪ್ರಮಾಣದಲ್ಲಿ ವ್ಯರ್ಥ ಪದಾರ್ಥಗಳನ್ನು ಮೂತ್ರಪಿಂಡಕ್ಕೆ  ಬೇರ್ಪಡಿಸಲು  ಸಾಧ್ಯವಾಗುವುದಿಲ್ಲ ಎಂಬುದು ಗೊತ್ತಾದರೆ ಆ ವ್ಯಕ್ತಿ ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದರ್ಥ. ಮೂತ್ರಪಿಂಡದ ಕಾಯಿಲೆ ಮೊದಲಿನಿಂದಲೂ ಇದ್ದು ಯಾವುದೋ ಕಾರಣಕ್ಕೆ ರಕ್ತದ ಪರೀಕ್ಷೆಗಳನ್ನು ಮಾಡಿಸುವಾಗ ಗೊತ್ತಾಗುವ ಸಾಧ್ಯತೆ ಹೆಚ್ಚಿರುತ್ತದೆ. ಮೂತ್ರಪಿಂಡದ ಕಾಯಿಲೆ ಯಾವಾಗ ಹೇಗೆ ಬರುತ್ತದೆ ಎಂಬುದನ್ನು ಕೆಲವೊಮ್ಮೆ ಹೇಳಲಾಗುವುದಿಲ್ಲ ಆದರೂ ವೈದ್ಯರು ಕೆಲವೊಂದು ಕಾರಣಗಳನ್ನು ನೀಡುತ್ತಾರೆ.

ಇನ್ನು ಮೂತ್ರಪಿಂಡದ ಕಾಯಿಲೆಗಳನ್ನು ಅಲ್ಪಕಾಲೀನ ಮೂತ್ರಪಿಂಡದ ವಿಫಲತೆ ಮತ್ತು ದೀರ್ಘಕಾಲೀನ  ಮೂತ್ರಪಿಂಡದ ವಿಫಲತೆ ಎಂದು ಹೇಳುತ್ತಾರೆ. ಅಲ್ಪಕಾಲೀನ ಮೂತ್ರಪಿಂಡದ ವಿಫಲತೆಗೆ ವಿಪರೀತ ರಕ್ತನಷ್ಟ, ತೀವ್ರತರಹದ ಸುಟ್ಟಗಾಯಗಳು, ವಿಷಪ್ರವೇಶ, ಗಂಭೀರವಾದ ಗಾಯ, ಮೂತ್ರಾಂಗದಲ್ಲಿ ಕಲ್ಲು ಸೇರುವಿಕೆ ಕಾರಣವಾದರೆ ದೀರ್ಘಕಾಲೀನ ಮೂತ್ರಪಿಂಡದ ವಿಫಲತೆಯಲ್ಲಿ ಮಧುಮೇಹ, ಹೆಚ್ಚಿನ ರಕ್ತದೊತ್ತಡ, ಅನುವಂಶೀಯವಾಗಿ ಬಂದ ಮೂತ್ರಪಿಂಡ ಕಾಯಿಲೆ, ಔಷಧಿ ಸೇವನೆ, ಔಷಧಿ ಸೇವನೆಯ ಪಾರ್ಶ್ವಪರಿಣಾಮಗಳು ಕಾರಣವಾಗುತ್ತವೆ.

ಮೂತ್ರಾಂಗ ಕಾಯಿಲೆ ಬಗ್ಗೆ ನಾವು ಮುಖ್ಯವಾಗಿ ತಿಳಿದುಕೊಳ್ಳಬೇಕಾದ ಅಂಶವೇನೆಂದರೆ, ಅಲ್ಪಕಾಲದ  ಮೂತ್ರಪಿಂಡದ ಕಾಯಿಲೆಗಳನ್ನು ಗುಣಪಡಿಸಬಹುದು ಆದರೆ ದೀರ್ಘಕಾಲೀನ ಮೂತ್ರಾಂಗವನ್ನು ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿಲ್ಲ. ಹಾಗಾಗಿ ಒಮ್ಮೆ ಕಾಣಿಸಿಕೊಂಡರೆ ಮತ್ತೆ ಅದು ಆತನ ಸಂಗಾತಿಯಾಗಿ ಬಿಡುತ್ತದೆ. ಆಗ ಅದರಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ಇರುವುದೊಂದೇ ಮಾರ್ಗ ಅದೇನೆಂದರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು, ವೈದ್ಯರು ಶಿಫಾರಸ್ಸು ಮಾಡಿದ ಔಷಧಿಯನ್ನು ಸೇವಿಸುವುದು ಮತ್ತು ಆಹಾರದಲ್ಲಿ ಪಥ್ಯವನ್ನು ಆಚರಿಸುವುದಾಗಿದೆ.

Advertisement
Tags :
Advertisement