For the best experience, open
https://m.newskannada.com
on your mobile browser.
Advertisement

ಚಲಿಸುತ್ತಿದ್ದ ಬಸ್‌ನಿಂದ ಕಳಚಿಕೊಂಡ ಚಕ್ರಗಳು: ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಚಲಿಸುತ್ತಿದ್ದ ಸಾರಿಗೆ ಬಸ್‌ನ ಚಕ್ರ ಕಳಚಿಕೊಂಡು ಬಸ್‌ನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಮಂದೂರು ಬಳಿ ನಡೆದಿದೆ.
11:22 AM May 02, 2024 IST | Chaitra Kulal
ಚಲಿಸುತ್ತಿದ್ದ ಬಸ್‌ನಿಂದ ಕಳಚಿಕೊಂಡ ಚಕ್ರಗಳು  ಚಾಲಕನ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತ

ಆನೇಕಲ್: ಚಲಿಸುತ್ತಿದ್ದ ಸಾರಿಗೆ ಬಸ್‌ನ ಚಕ್ರ ಕಳಚಿಕೊಂಡು ಬಸ್‌ನಲ್ಲಿದ್ದ 20ಕ್ಕೂ ಅಧಿಕ ಪ್ರಯಾಣಿಕರು ಬೆಚ್ಚಿಬಿದ್ದಿರುವ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಮಂದೂರು ಬಳಿ ನಡೆದಿದೆ.

Advertisement

ಚಾಲಕ ಸಮಯಪ್ರಜ್ಞೆ ಮೆರೆದು ತಕ್ಷಣವೇ ವಾಹನ ನಿಲ್ಲಿಸಿದ್ದಾರೆ. ಬಸ್‌ ತುಂಬಾ ವೇಗವಾಗಿಯೇನೂ ಹೋಗುತ್ತಿರಲಿಲ್ಲ. ಒಂದೊಮ್ಮೆ ವೇಗವಾಗಿ ಸಾಗುತ್ತಿದ್ದರೆ ಕಳಚಿಕೊಂಡ ಚಕ್ರ, ವೇಗವಾಗಿ ಹೋಗಿ ಯಾವುದೋ ವಾಹನಕ್ಕೆ ಅಥವಾ ಪಾದಚಾರಿಗಳಿಗೆ ಬಡಿದು ದೊಡ್ಡ ಅನಾಹುತ ಸಂಭವಿಸುವ ಅಪಾಯವಿತ್ತು.

ಅದೃಷ್ಟವಶಾತ್‌ ಅಂತ ಅವಘಡ ಸಂಭವಿಸಿಲ್ಲ. ಬಸ್ಸಿನ ಹಿಂಬದಿ ಒಮ್ಮೆಗೇ ನೆಲಕ್ಕೆ ಬಡಿದಿದ್ದರಿಂದ ಕೆಲವರಿಗೆ ಸಣ್ಣ ಪುಟ್ಟ ಗಾಯಗಳಾಗಿತ್ತು. ಆನೇಕಲ್ ಘಟಕಕ್ಕೆ ಸೇರಿದ ಕೆಎಸ್ಆರ್‌ಟಿಸಿ ಬಸ್ ಆನೇಕಲ್ ಕಡೆಯಿಂದ ಸಮಂದೂರು ಮಾರ್ಗವಾಗಿ ಹೊರಟಿತ್ತು.

Advertisement

ಸಮಂದೂರು ಸಮೀಪ ಬರುತ್ತಿದ್ದಾಗ ಏಕಾಏಕಿ ಟೈರ್‌ಗಳು ಕಳಚಿಕೊಂಡಿವೆ. ಕೂಡಲೇ ಚಾಲಕ ಬಸ್ ನಿಲ್ಲಿಸಿದ್ದಾರೆ. ಚಾಲಕನು ಏಕಾಏಕಿ ಬ್ರೇಕ್‌ ಹಾಕಿದ ಕಾರಣ ಜನ ಗಲಿಬಿಲಿಗೊಂಡರು. ಕೂಡಲೇ ಕೆಳಗಿಳಿದು ನೋಡಿದಾಗ ಬಸ್‌ ಚಕ್ರ ಬಿದ್ದಿದ್ದನ್ನು ಕಂಡು ಮತ್ತಷ್ಟು ಗಾಬರಿಗೊಂಡರು.

Advertisement
Tags :
Advertisement