For the best experience, open
https://m.newskannada.com
on your mobile browser.
Advertisement

ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು: ಸುರ್ಜೆವಾಲಾ ಕಿಡಿ

ಮಂಗಳೂರಿನಲ್ಲಿ ಚೊಂಬು ಹಿಡಿದುಕೊಂಡೆ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ.
06:32 PM Apr 22, 2024 IST | Chaitra Kulal
ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು  ಸುರ್ಜೆವಾಲಾ ಕಿಡಿ

ಮಂಗಳೂರು: ಮಂಗಳೂರಿನಲ್ಲಿ ಚೊಂಬು ಹಿಡಿದುಕೊಂಡೆ ರಣದೀಪ್ ಸುರ್ಜೆವಾಲಾ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

Advertisement

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದ ಜನತೆ ಉದ್ಯೋಗ ಕೇಳಿದಾಗ ಮೋದಿ ನೀಡಿದ್ದು ಚೊಂಬು. ಕರ್ನಾಟಕ ನ್ಯಾಯ ಕೇಳಿದಾಗ ಮೋದಿ ನೀಡೋದು ಚೊಂಬು. ಜನರು 15 ಲಕ್ಷ ಕೇಳಿದಾಗ ಮೋದಿ ನೀಡೋದು ಚೊಂಬು. ಜನ ಸ್ಮಾರ್ಟ್ ಸಿಟಿ ಕೇಳಿದಾಗ ಮೋದಿ ಕೊಡೋದು ಚೊಂಬು ಎಂದು ಕಿಡಿಕಾರಿದ್ದಾರೆ.

ಕೇಂದ್ರ ಸರಕಾರ ಕನ್ನಡಿಗರಿಗೆ , ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ. ಕಳೆದ ವಿಧಾನಸಭಾ ಚುನಾವಣೆ ಬಿಜೆಪಿಗೆ ಆದ‌‌ ಸೋಲಿಗೆ ಸೇಡು ತೀರಿಸಿ ಕೊಳ್ಳಲಾಗಿದೆ. ಬರ ಪರಿಹಾರ ನೀಡದೇ ಕರ್ನಾಟಕದ ಜನರಲ್ಲಿ ಸೇಡು ತೀರಿಸಿ ಕೊಳ್ಳಲಾಗುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇಡು ತೀರಿಸಿ ಕೊಳ್ಳುತ್ತಿದ್ದಾರೆ. ಬರ ಪರಿಹಾರ ನೀಡದೇ ರಾಜ್ಯದ ಜನರಿಗೆ‌ ಅನ್ಯಾಯ ಮಾಡಲಾಗುತ್ಯಿದ್ದೆ. ಕರ್ನಾಟಕದಿಂದ ಆಯ್ಕೆಯಾದ ವಿತ್ತ ಸಚಿವರು ಕರ್ನಾಕದ ಜನರಿಗೆ‌ ಅನ್ಯಾಯ ಮಾಡಿದ್ದಾರೆ.

Advertisement

ಕನ್ನಡ ಜನರಿಗೆ ಸುಳ್ಳು ಹೇಳಲಾಗಿದೆ. ಎನ್.ಡಿ.ಆರ್.ಎಫ್ ಅನುದಾನ ನೀಡುವಲ್ಲಿ ಮೋಸ ಆಗಿದೆ. ಅಮಿತ್ ಶಾ ಕರ್ನಾಟಕಕ್ಕೆ ಬರ್ತಾ ಇದ್ದಾರೆ. ಕಾಂಗ್ರೆಸ್ ಅಮಿತ್ ಶಾ ಅವರಿಗೆ ಎಚ್ಚರಿಕೆ ನೀಡುತ್ತಿದೆ. ರಾಜ್ಯಕ್ಕೆ ಬರುವ ಮೊದಲು ಬರ ಪರಿಹಾರದ ಹಣ ಬಿಡುಗಡೆ ಮಾಡಬೇಕು. ಇಂದು ಸಂಜೆಯೊಳಗಡೆ ಹಣ ಬಿಡಬೇಕು. ಹಣ ಬಿಡುಗಡೆ ಮಾಡಿದ ಬಳಿಕವೇ ರಾಜ್ಯಕ್ಕೆ ಕಾಲಿಡಬೇಕು ಎಂದಿದ್ದಾರೆ.

Advertisement
Tags :
Advertisement