For the best experience, open
https://m.newskannada.com
on your mobile browser.
Advertisement

ಪ್ರಜ್ವಲ್ ಅಶ್ಲೀಲ ವಿಡಿಯೋ ಮೊದಲು ವಾಟ್ಸ್‌ಆ್ಯಪ್‌ಗೆ ಹಾಕಿದ ಸ್ಫೋಟಕ ಮಾಹಿತಿ ಬಹಿರಂಗ

ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಇಡೀ ರಾಜ್ಯ, ದೇಶಾದ್ಯಂತ ಸುದ್ದಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾದ ಮೇಲೆ SIT ತನಿಖೆ ಚುರುಕಾಗಿದೆ. ತನಿಖೆ ನಡೆಯುತ್ತಿರುವಾಗಲೇ ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋವನ್ನು ಮೊದಲು ವಾಟ್ಸ್​ ಪ್​ಗೆ ಶೇರ್‌ ಮಾಡಿದ್ದು ಯಾರು ಅನ್ನೋ ಮಾಹಿತಿ ಸದ್ಯ ಬಹಿರಂಗವಾಗಿದೆ.
03:33 PM May 02, 2024 IST | Ashitha S
ಪ್ರಜ್ವಲ್ ಅಶ್ಲೀಲ ವಿಡಿಯೋ ಮೊದಲು ವಾಟ್ಸ್‌ಆ್ಯಪ್‌ಗೆ ಹಾಕಿದ ಸ್ಫೋಟಕ ಮಾಹಿತಿ ಬಹಿರಂಗ

ಬೆಂಗಳೂರು: ಹಾಸನದ ಅಶ್ಲೀಲ ವಿಡಿಯೋ ವೈರಲ್ ಪ್ರಕರಣ ಇಡೀ ರಾಜ್ಯ, ದೇಶಾದ್ಯಂತ ಸುದ್ದಿಯಾಗಿದೆ. ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಪ್ರಕರಣ ದಾಖಲಾದ ಮೇಲೆ SIT ತನಿಖೆ ಚುರುಕಾಗಿದೆ. ತನಿಖೆ ನಡೆಯುತ್ತಿರುವಾಗಲೇ ಹಾಸನದಲ್ಲಿ ಹರಿದಾಡಿದ ಅಶ್ಲೀಲ ವಿಡಿಯೋವನ್ನು ಮೊದಲು ವಾಟ್ಸ್​ ಪ್​ಗೆ ಶೇರ್‌ ಮಾಡಿದ್ದು ಯಾರು ಅನ್ನೋ ಮಾಹಿತಿ ಸದ್ಯ ಬಹಿರಂಗವಾಗಿದೆ.

Advertisement

ಪ್ರಜ್ವಲ್ ರೇವಣ್ಣ ಅವರ ಬಳಿಕ ಕಾರು ಚಾಲಕನಾಗಿದ್ದ ಕಾರ್ತಿಕ್ ಅವರು ಮೊದಲು ವಿಡಿಯೋವನ್ನು ವಾಟ್ಸ್​ಪ್​ಗೆ ಹಾಕಿದ್ದಾರೆ. ವಾಟ್ಸ್​ಪ್​ನಲ್ಲಿ ವಿಡಿಯೋ ಕಳಿಸಿದ ಕಾರ್ತಿಕ್‌ ಬ್ಲ್ಯಾಕ್‌ಮೇಲ್ ಕೂಡ ಮಾಡಿರುವ​ ಆರೋಪ ಕೇಳಿ ಬಂದಿದೆ. ಸ್ವತಃ ಕಾರ್ತಿಕ್ ನಂಬರ್​ನಿಂದ ಪ್ರಜ್ವಲ್ ರೇವಣ್ಣಗೆ ಅಶ್ಲೀಲ ವಿಡಿಯೋ ಕಳುಹಿಸಲಾಗಿದೆ.

ಇನ್ನು ನವೀನ್ ಗೌಡ ಎಂಬ ಅಕೌಂಟ್‌ನಿಂದ ಫೇಸ್ ಬುಕ್‌ಗೆ ವಿಡಿಯೋ ಅಪ್ಲೋಡ್ ಆಗಿದೆ. ಸಚಿವ ಜಮೀರ್ ಅಹಮದ್ ಖಾನ್ ಅವರ ಆಪ್ತ ನವೀನ್ ಗೌಡ ಫೇಸ್ ಬುಕ್‌ ಅಕೌಂಟ್‌ನಲ್ಲಿ ವಿಡಿಯೋ ಸದ್ಯದಲ್ಲೇ ಬರಲಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೇ ಆಧಾರದಲ್ಲಿ ಹಾಸನ ಠಾಣೆಯಲ್ಲಿ ಈ ಸಂಬಂಧ ಕೇಸ್ ಕೂಡ ದಾಖಲು ಮಾಡಲಾಗಿದೆ.

Advertisement

Advertisement
Tags :
Advertisement