For the best experience, open
https://m.newskannada.com
on your mobile browser.
Advertisement

ಯಾರು ಕುಕ್ಕರ್ ಹಂಚಿದ್ರೂ ವಿಸಿಲ್ ಕೂಗೋದು ಮೋದಿ: ಅಶ್ವಥ್ ನಾರಾಯಣ್

ಯಾರೇ ಕುಕ್ಕರ್, ತವಾ ಏನೇ ಕೊಟ್ಟರು ವಿಸಿಲ್ ಕೂಗೋದು ಮೋದಿ. ಜನಗಳು ಡಿಕೆ ಸುರೇಶ್ ಗೆ ಯಾಕೆ ಮತ ಹಾಕ್ತಾರೆ. ಅವರು ಏನು ಕೆಲಸ ಮಾಡಿದ್ದಾರೆ ಎಂದು ಶಾಸಕ ಅಶ್ವಥ್ ನಾರಾಯಣ್ ಹೇಳಿದರು.
04:29 PM Apr 09, 2024 IST | Chaitra Kulal
ಯಾರು ಕುಕ್ಕರ್ ಹಂಚಿದ್ರೂ ವಿಸಿಲ್ ಕೂಗೋದು ಮೋದಿ  ಅಶ್ವಥ್ ನಾರಾಯಣ್

ಬೆಂಗಳೂರು: ಯಾರೇ ಕುಕ್ಕರ್, ತವಾ ಏನೇ ಕೊಟ್ಟರು ವಿಸಿಲ್ ಕೂಗೋದು ಮೋದಿ. ಜನಗಳು ಡಿಕೆ ಸುರೇಶ್ ಗೆ ಯಾಕೆ ಮತ ಹಾಕ್ತಾರೆ. ಅವರು ಏನು ಕೆಲಸ ಮಾಡಿದ್ದಾರೆ ಎಂದು ಶಾಸಕ ಅಶ್ವಥ್ ನಾರಾಯಣ್ ಹೇಳಿದರು.

Advertisement

ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಪ್ಯಾರಾ ಮಿಲಿಟರಿ ನಿಯೋಜನೆಯಾಗಬೇಕು. ಜನರಲ್ಲಿ ಯಾವುದೇ ಭಯದ ವಾತಾವರಣ ಇರಬಾರದು, ಭಯ ಇಲ್ಲದೇ ಜನ ಮತ ಹಾಕಬೇಕು. ಶಾಂತಿಯುತ ಮತದಾನ ಆಗಬೇಕು. ಈ ಕಾರಣಕ್ಕೆ ನಾವು ಪ್ಯಾರಾ ಮಿಲಿಟರಿ ದಳ ನಿಯೋಜನೆಗೆ ಕೇಳಿದ್ದೇವೆ ಎಂದರು.

ಕಾಂಗ್ರೆಸ್ ನವರು ಬೆಂಗಳೂರು ಗ್ರಾಮಾಂತರದಲ್ಲಿ  ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ಜನರನ್ನ ಹತ್ತಿಕ್ಕುವುದು, ಗಲಾಟೆ ಸೃಷ್ಟಿಸೋದು ಅವರ ಬುದ್ದಿ ಎಂದರು.

Advertisement

ದೇಶದ ಜನರ ವಿಶ್ವಾಸ ಗಳಿಸಿರುವ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲೆಂದು ಜನ ಬಯಸಿದ್ದಾರೆ. ಮೋದಿಯವರ ಕೈ ಬಲಪಡಿಸಲು ಎಲ್ಲ 28 ಲೋಕಸಭೆ ಕ್ಷೇತ್ರ ಗೆಲ್ಲುತ್ತೇವೆ. ಈ ನಿಟ್ಟಿನಲ್ಲಿ ಬಿಜೆಪಿ-ಜೆಡಿಎಸ್ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದರು.

ಬೆಂಗಳೂರು ಗ್ರಾಮಾಂತರದಲ್ಲಿ ಮಂಜುನಾಥ್ ಅವರು ನಮ್ಮ ಅಭ್ಯರ್ಥಿ ಆಗ್ತಾರೆ ಅಂತ ಯಾರೂ ನಿರೀಕ್ಷೆ ಮಾಡಿರಲಿಲ್ಲ.ಅವರು ನಮ್ಮ ಅಭ್ಯರ್ಥಿ ಆಗಿದ್ದು ಪ್ರಕೃತಿ ನಿಯಮ ಅನ್ನಬಹುದು.  ಮಂಜುನಾಥ್ ಅವರ ಮೇಲೆ ಪ್ರಕೃತಿಯ ಆಶೀರ್ವಾದ ಇದೆ. ಅವರು ಯೋಗ್ಯ ಅಭ್ಯರ್ಥಿ ಎಂದು ಅಶ್ವಥ್ ನಾರಾಯಣ್ ಹೇಳಿದರು.

Advertisement
Tags :
Advertisement