For the best experience, open
https://m.newskannada.com
on your mobile browser.
Advertisement

ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು?

ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದ್ದವು.
06:20 PM May 12, 2024 IST | Ashika S
ರಷ್ಯಾದಿಂದ  ಕಡಿಮೆ ಬೆಲೆಗೆ ತೈಲ ಖರೀದಿಸಲು ಭಾರತಕ್ಕೆ ಅಮೆರಿಕ ಯಾಕೆ ಒಪ್ಪಿಗೆ ನೀಡಿದ್ದು

ನವದೆಹಲಿ: ಉಕ್ರೇನ್ ಮೇಲೆ ರಷ್ಯಾ ದಾಳಿ ಮಾಡಿದ ಬಳಿಕ   ಅಮೆರಿಕ ಸೇರಿದಂತೆ ಹಲವು ಯೂರೋಪಿಯನ್ ದೇಶಗಳು ರಷ್ಯಾದ ಮೇಲೆ ಅನೇಕ ನಿರ್ಬಂಧಗಳನ್ನು ವಿಧಿಸಿದ್ದವು.

Advertisement

ಆ ನಿರ್ಬಂಧಗಳಲ್ಲಿ  ರಷ್ಯಾದ ತೈಲ ಖರೀದಿಸದಂತೆ ಹಲವು ದೇಶಗಳಿಗೆ ಅಮೆರಿಕ ಅಪ್ಪಣೆ ಮಾಡಿತ್ತು.ಹೀಗಾಗಿ ತೈಲ ಖರೀದಿಸುವ ದೇಶಗಳು ಕೆಡಿಮೆ ಆದ್ದರಿಂದ ರಷ್ಯಾ ಕಡಿಮೆ ಬೆಲೆಗೆ ಮಾರುವ ಪರಿಸ್ಥಿತಿಯಲ್ಲಿತ್ತು.

ಈ ವೇಳೆ ಭಾರತವು ರಷ್ಯಾದಿಂದ ಯಥೇಚ್ಛವಾಗಿ ತೈಲ ಖರೀದಿ ಮಾಡತೊಡಗಿತು. ಚೀನಾ ಮತ್ತು ಭಾರತ ದೇಶಗಳು ರಷ್ಯಾದಿಂದ ತೈಲ ಆಮದು ಮಾಡಿಕೊಂಡವು. ಭಾರತದ ಈ ನಡೆಗೆ ಅಮೆರಿಕ ತಡೆ ಒಡ್ಡಲಿಲ್ಲ. ಬದಲಾಗಿ ಒಪ್ಪಿಗೆ ಸೂಚಿಸಿತು.

Advertisement

ಈ ಬಗ್ಗೆ ಭಾರತಕ್ಕೆ ಅಮೆರಿಕದ ರಾಯಭಾರಿಯಾಗಿರುವ ಎರಿಕ್ ಗಾರ್ಗೆಟ್ಟಿ ಕೆಲ ದಿನಗಳ ಹಿಂದೆ ಅಮೆರಿಕದ ವಾಷಿಂಗ್ಟನ್​ನಲ್ಲಿ ಕೌನ್ಸಿಲ್ ಆನ್ ಫಾರೀನ್ ರಿಲೇಶನ್ಸ್ ಆಯೋಜಿಸಿದ ಡೈವರ್ಸಿಟಿ ಇನ್ ಇಂಟರ್ನ್ಯಾಷನಲ್ ಅಫೇರ್ಸ್​ನ ಸಮಾವೇಶದಲ್ಲಿ ಮಾತನಾಡುತ್ತಿದ್ದಾಗ ಈ ವಿಷಯ ಪ್ರಸ್ತಾಪ ಪಡಿಸಿದ್ದಾರೆ.

ವಿಶ್ವದ ಏಳು ಅತಿ ಶ್ರೀಮಂತ ದೇಶಗಳಿರುವ ಜಿ7 ಗ್ರೂಪ್ ರಷ್ಯಾ ತೈಲ ಬೆಲೆ ಮಾರಾಟ ಬ್ಯಾರಲ್​ಗೆ 60 ಡಾಲರ್ ಮೀರಬಾರದು ಎಂದು ಅಂಕೆ ಹಾಕಿತು. ಯೂರೋಪಿಯನ್ ಯೂನಿಯನ್ ಮತ್ತು ಆಸ್ಟ್ರೇಲಿಯಾ ದೇಶಗಳೂ ಜಿ7 ಕ್ರಮವನ್ನು ಬೆಂಬಲಿಸಿದವು. ಬ್ಯಾರಲ್​ಗೆ 60 ಡಾಲರ್​ಗಿಂತ ಹೆಚ್ಚಿನ ಬೆಲೆಗೆ ರಷ್ಯಾ ತೈಲವನ್ನು ಖರೀದಿಸಿ ಸಾಗಿಸಲಾಗುತ್ತಿದ್ದರೆ ಅಂಥ ಟ್ಯಾಂಕರ್​​ಗಳನ್ನು ನಿಷೇಧಿಸಲಾಗಿತ್ತು. ಯಾವ ದೇಶಗಳೂ ಕೂಡ ಆ ಧೈರ್ಯ ಮಾಡಲಿಲ್ಲ. ರಷ್ಯಾ ಅನಿವಾರ್ಯವಾಗಿ 60 ಡಾಲರ್ ದರದಲ್ಲಿ ತೈಲ ಮಾರಬೇಕಾಯಿತು.

ರಷ್ಯಾ ಕಡಿಮೆ ಬೆಲೆಗೆ ತನ್ನ ತೈಲವನ್ನು ಬಿಕರಿ ಮಾಡುವ ಅನಿವಾರ್ಯತೆಗೆ ಸಿಲುಕಿತು. ಇದರಿಂದ ರಷ್ಯಾಗೆ ಬರುತ್ತಿದ್ದ ಆದಾಯ ಸಂಕುಚಿತಗೊಂಡಿತು. ರಷ್ಯಾ ತೈಲವನ್ನು ಯಾರೂ ಖರೀದಿಸದೇ ಹೋದರೆ ಜಾಗತಿಕವಾಗಿ ತೈಲ ಬೆಲೆ ಹೆಚ್ಚಾಗುತ್ತಿತ್ತು. ಅದಕ್ಕಾಗಿ ಭಾರತ ಆ ತೈಲ ಖರೀದಿಸಲು ಅಮೆರಿಕ ಅನುಮತಿಸಿತು. ಇದರಿಂದ ಜಾಗತಿಕ ತೈಲ ಬೆಲೆ ಏರಿಕೆ ಆಗಲಿಲ್ಲ ಎಂದು ಹೆಳಿದ್ದಾರೆ.

Advertisement
Tags :
Advertisement