For the best experience, open
https://m.newskannada.com
on your mobile browser.
Advertisement

ತಂಗಿಗೆ ಉಡುಗೊರೆ ನೀಡಿದಕ್ಕೆ ಪತಿಯನ್ನು ಕೊಂದ ಪತ್ನಿ

ತಂಗಿಗೆ ಉಡುಗೊರೆ ನೀಡಿದ ವಿಚಾರವಾಗಿ ಪತಿಯನ್ನು ಪತ್ನಿ ಸೇರಿ ಆಕೆಯ ಮನೆಯವರು ಕೊಂದ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಬೆಳಕಿಗೆ ಬಂದಿದೆ.
03:29 PM Apr 24, 2024 IST | Ashika S
ತಂಗಿಗೆ ಉಡುಗೊರೆ ನೀಡಿದಕ್ಕೆ ಪತಿಯನ್ನು ಕೊಂದ ಪತ್ನಿ

ಉತ್ತರ ಪ್ರದೇಶ: ತಂಗಿಗೆ ಉಡುಗೊರೆ ನೀಡಿದ ವಿಚಾರವಾಗಿ ಪತಿಯನ್ನು ಪತ್ನಿ ಸೇರಿ ಆಕೆಯ ಮನೆಯವರು ಕೊಂದ ಘಟನೆ ಉತ್ತರ ಪ್ರದೇಶದ ಬಾರಬಂಕಿಯಲ್ಲಿ ಬೆಳಕಿಗೆ ಬಂದಿದೆ.

Advertisement

ಸಾವನ್ನಪ್ಪಿದ ವ್ಯಕ್ತಿಯನ್ನು ಚಂದ್ರ ಪ್ರಕಾಶ್​ ಮಿಶ್ರಾ ಎಂದು ಗುರುತಿಸಲಾಗಿದೆ.

ಸ್ವಂತ ತಂಗಿಯ ವಿವಾಹದಂದು ಚಂದ್ರ ಪ್ರಕಾಶ್​ ಮಿಶ್ರಾ ಚಿನ್ನದ ಉಂಗುರ ಮತ್ತು ಟಿವಿಯನ್ನು ಉಡುಗೊರೆಯಾಗಿ ನೀಡಿದ್ದನು. ತಂಗಿಗೆ ಉಡುಗೊರೆ ನೀಡಿದ ಗಂಡನನ್ನು ಕಂಡು ಪತ್ನಿ ಚಾಬಿ ಕೋಪಿಸಿಕೊಂಡಿದ್ದಳು. ಇದೇ ವಿಚಾರಕ್ಕೆ ಜಗಳ ಕೂಡ ನಡೆದಿತ್ತು. ಕೊನೆಗೆ ಪತ್ನಿ ಚಾಬಿ ತನ್ನ ಸಹೋದರ ಬಳಿ ಗಿಫ್ಟ್​ ಕೊಟ್ಟ ವಿಚಾರ ಹೇಳಿದ್ದಾಳೆ.

Advertisement

ಇದೇ ವಿಚಾರವಾಗಿ ಚಾಬಿ ಸಹೋದರನ ಬಳಿ ಚಂದ್ರ ಪ್ರಕಾಶ್​ ಮಿಶ್ರಾನನ್ನು ದೂರಿದ್ದಲ್ಲದೆ, ಸರಿಯಾಗಿ ಪಾಠ ಕಲಿಸಿ ಎಂದು ಹೇಳಿದ್ದಾರೆ.

ಅದರಂತೆಯೇ ಪತ್ನಿಯ ಸಹೋದರ ಚಂದ್ರ ಪ್ರಕಾಶ್​ ಮಿಶ್ರಾಗೆ ಮನಬಂದಂತೆ ಥಳಿಸಿದ್ದಾರೆ. ಪರಿಣಾಮ ಚಂದ್ರ ಪ್ರಕಾಶ್​ ಮಿಶ್ರಾ ಸಂಪೂರ್ಣ ಗಾಯಗೊಂಡು ಆಸ್ಪತ್ರೆ ಸೇರಿದ್ದನು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆತ ಸಾವನ್ನಪ್ಪಿದ್ದಾನೆ.

ಈ ಪ್ರಕರಣ ಸಂಬಂಧ ಪತ್ನಿ ಚಾಬಿ, ಸಹೋದರ ಸೇರಿದಂತೆ ಐವರನ್ನು ಪೊಲೀಸರು ಅರೆಸ್ಟ್​ ಮಾಡಿದ್ದಾರೆ.

Advertisement
Tags :
Advertisement