For the best experience, open
https://m.newskannada.com
on your mobile browser.
Advertisement

ವಿವೇಕ್ ರಾಮಸ್ವಾಮಿ ‘ಉಪಾಧ್ಯಕ್ಷ‘ ಎಂದು ಘೋಷಿಸಿದ ಟ್ರಂಪ್ ಬಣ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ ಮುನ್ನಡೆ ಸಾಧಿಸಿದ್ದು, ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ ಅವರಿಗೂ ಅದೃಷ್ಟ ಒಲಿದು ಬರುವ ಸಾಧ್ಯತೆ ಇದೆ. ವಿವೇಕ್ ರಾಮಸ್ವಾಮಿ ಚುನಾವಣೆಯ ರೇಸ್‌ನಿಂದ ಹಿಂದೆ ಸರಿದು ಟ್ರಂಪ್‌ಗೆ ಬೆಂಬಲ ಘೋಷಣೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಡೊನಾಲ್ಟ್ ಟ್ರಂಪ್, ವಿವೇಕ್ ರಾಮಸ್ವಾಮಿ ನಮ್ಮ ಜೊತೆಗೆ ಇರುತ್ತಾರೆ ಅನ್ನೋ ಮೂಲಕ ಮಹತ್ವದ ಘೋಷಣೆ ಮಾಡಿದ್ದಾರೆ.
05:08 PM Jan 17, 2024 IST | Ashitha S
ವಿವೇಕ್ ರಾಮಸ್ವಾಮಿ ‘ಉಪಾಧ್ಯಕ್ಷ‘ ಎಂದು ಘೋಷಿಸಿದ ಟ್ರಂಪ್ ಬಣ

ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್‌ ಮುನ್ನಡೆ ಸಾಧಿಸಿದ್ದು, ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ ಅವರಿಗೂ ಅದೃಷ್ಟ ಒಲಿದು ಬರುವ ಸಾಧ್ಯತೆ ಇದೆ. ವಿವೇಕ್ ರಾಮಸ್ವಾಮಿ ಚುನಾವಣೆಯ ರೇಸ್‌ನಿಂದ ಹಿಂದೆ ಸರಿದು ಟ್ರಂಪ್‌ಗೆ ಬೆಂಬಲ ಘೋಷಣೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಡೊನಾಲ್ಟ್ ಟ್ರಂಪ್, ವಿವೇಕ್ ರಾಮಸ್ವಾಮಿ ನಮ್ಮ ಜೊತೆಗೆ ಇರುತ್ತಾರೆ ಅನ್ನೋ ಮೂಲಕ ಮಹತ್ವದ ಘೋಷಣೆ ಮಾಡಿದ್ದಾರೆ.

Advertisement

ಕಳೆದ ಎರಡು ದಿನಗಳ ಹಿಂದಷ್ಟೇ ಅಯೋವಾ ಕಾಕಸ್‌ನಲ್ಲಿ ನಡೆದ ಪ್ರೈಮರಿ ಎಲೆಕ್ಷನ್‌ನಲ್ಲಿ ಡೊನಾಲ್ಡ್ ಟ್ರಂಪ್ ಜಯಭೇರಿ ಬಾರಿಸಿದ್ದರು. ಈ ಗೆಲುವಿನ ಬಳಿಕ ರೇಸ್‌ನಿಂದ ಹಿಂದೆ ಸರಿದ ಭಾರತೀಯ ಸಂಜಾತ ವಿವೇಕ್ ರಾಮಸ್ವಾಮಿ ಸಂಪೂರ್ಣ ಬೆಂಬಲ ಘೋಷಿಸಿದರು.

ಇದಕ್ಕೆ ಧನ್ಯವಾದ ತಿಳಿಸಿದ ಡೊನಾಲ್ಡ್ ಟ್ರಂಪ್ ಅವರು ವಿವೇಕ್ ರಾಮಸ್ವಾಮಿ ಅವರು ಮುಂದೆ ಚುನಾವಣೆಯಲ್ಲಿ ಗೆದ್ದರೆ ಜೊತೆಯಾಗಿ ಬಹಳ ದೀರ್ಘಕಾಲ ಕೆಲಸ ಮಾಡುವುದಾಗಿ ಹೇಳಿದ್ದಾರೆ.

Advertisement

ಡೊನಾಲ್ಡ್ ಟ್ರಂಪ್ ಹಾಗೂ ವಿವೇಕ್ ರಾಮಸ್ವಾಮಿ ಸಂತಸದಿಂದ ಬೆಂಬಲ ಘೋಷಿಸುವಾಗ ಒಬ್ಬರನೊಬ್ಬರು ಖುಷಿಯಾಗಿ ಆಲಿಂಗನ ಮಾಡಿಕೊಂಡರು. ಅಮೆರಿಕಾದ ಹೊಸ ಭವಿಷ್ಯ ಉದಯವಾಗಿದೆ ಎಂದ ವಿವೇಕ್ ರಾಮಸ್ವಾಮಿ ಅವರು ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಅಧ್ಯಕ್ಷರಾಗುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಸಂಭಾಷಣೆ ನಡೆಯುವಾಗ ಡೊನಾಲ್ಡ್ ಟ್ರಂಪ್ ಬೆಂಬಲಿಗರು ವಿವೇಕ್ ರಾಮಸ್ವಾಮಿ ಅವರನ್ನು ಮುಂದಿನ ಉಪಾಧ್ಯಕ್ಷ ಎಂದು ಘೋಷಣೆ ಕೂಗಿದ್ದಾರೆ. VP VP VP ಅಂದ್ರೆ ವೈಸ್ ಪ್ರೆಸಿಡೆಂಟ್‌ ಎಂದು ಘೋಷಣೆ ಕೂಗಿರೋದು ವಿವೇಕ್ ರಾಮಸ್ವಾಮಿ ಅವರ ಸಂತಸಕ್ಕೂ ಕಾರಣವಾಗಿದೆ.

Advertisement
Tags :
Advertisement