ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮತ ಹಾಕಿ ಫೋಟೋ ಕ್ಲಿಕ್ಕಿಸಿ : 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ

ನಾಳೆ ಹಲವಡೆ ಮತದಾನದ ಹಬ್ಬ, ಮತಹಾಕುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಲಾಗುತ್ತದೆ.ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದೆ. ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ. ಅದರಲ್ಲಿ 1,44,28,099 ಪುರುಷರು, 1,43,88,176 ಮಹಿಳೆಯರು ಮತದಾನ ಮಾಡಲಿದ್ದಾರೆ. ಸುಮಾರು 3,067 ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ.
02:19 PM Apr 25, 2024 IST | Nisarga K
ಮತ ಹಾಕಿ ಫೋಟೋ ಕ್ಲಿಕ್ಕಿಸಿ : 25 ಸಾವಿರ ರೂಪಾಯಿ ಬಹುಮಾನ ಗೆಲ್ಲಿ

ಬೆಂಗಳೂರು: ನಾಳೆ ಹಲವಡೆ ಮತದಾನದ ಹಬ್ಬ, ಮತಹಾಕುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಲಾಗುತ್ತದೆ.ನಾಳೆ 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ನಡೆಯಲಿದೆ. 7 ಗಂಟೆಯಿಂದ ಮತದಾನ ಪ್ರಾರಂಭವಾಗಲಿದೆ. ಸುಮಾರು 2,88,19,342 ಮತದಾರರು ಮತದಾನ ಮಾಡಲಿದ್ದಾರೆ. ಅದರಲ್ಲಿ 1,44,28,099 ಪುರುಷರು, 1,43,88,176 ಮಹಿಳೆಯರು ಮತದಾನ ಮಾಡಲಿದ್ದಾರೆ. ಸುಮಾರು 3,067 ತೃತೀಯ ಲಿಂಗಿಗಳು ಮತ ಚಲಾಯಿಸಲಿದ್ದಾರೆ.

Advertisement

ಮತದಾನದ ಸಂದರ್ಭದಲ್ಲಿ ರಾಜ್ಯ ಚುನಾವಣಾ ಅಯೋಗವು ಛಾಯಾಚಿತ್ರ ಸ್ಪರ್ಧೆಯನ್ನು ಹಮ್ಮಿಕೊಂಡಿದೆ. ಮತದಾನ ವಿಷಯವಾಗಿ ಈ ಸ್ಪರ್ಧೆಯನ್ನು ಏರ್ಪಡಿಸಿದೆ. ಎಲೆಕ್ಷನ್​ ದಿನ ವಿಶಿಷ್ಟ ಫೋಟೋದಲ್ಲಿ ಸೆರೆಹಿಡಿದರೆ ನಗದು ಬಹುಮಾನ ನೀಡುವುದಾಗಿ ರಾಜ್ಯ ಚುನಾವನಾ ಆಯೋಗ ಘೋಷಿಸಿದೆ.

ಅಷ್ಟು ಮಾತ್ರವಲ್ಲ, ಅತ್ಯುತ್ತಮ ಫೋಟೋ ಕ್ಲಿಕ್ಕಿಸಿದರೆ ಪ್ರಮಾಣ ಪತ್ರದ ಜೊತೆಗೆ ನಗದನ್ನು ನೀಡುವುದಾಗಿ ತಿಳಿಸಿದೆ.ಫೋಟೋ ಕ್ಲಿಕ್ಕಿಸಿದ ಬಳಿಕ ಛಾಯಾಗ್ರಾಹಕರ ವಿವರಗಳನ್ನು Mediacellceokarnataka@gmail.com ಸಲ್ಲಿಸಬೇಕಿದೆ. ಮೇ 15ರವರೆಗೆ ಫೋಟೋ ಕಳುಹಿಸಲು ಸಮಯವಕಾಶ ನೀಡಲಾಗಿದೆ. ಅತ್ಯುತ್ತಮ ಫೋಟೋಗೆ ಬಹುಮಾನ ಸಿಗಲಿದೆ.

Advertisement

ಅಂದಹಾಗೆಯೇ ಬೆಸ್ಟ್​ ಫೋಟೋ ಕ್ಲಿಕ್ಕಿಸಿದ ವಿಜೇತರಿಗೆ ಪ್ರಥಮ 25 ಸಾವಿರ, ದ್ವಿತೀಯ 15 ಸಾವಿರ ಮತ್ತು ತೃತೀಯ 10 ಸಾವಿರ ಬಹುಮಾನ ಸಿಗಲಿದೆ.ಇದಲ್ಲಿದೆ ಸಮಾಧಾನಕರ ಬಹುಮಾನವಾಗಿ 6 ಸಾವಿರ ರೂಪಾಯಿ ಜೊತೆಗೆ ವಿಶೇಷ ಬಹುಮಾನವಾಗಿ 5 ಸಾವಿರ ರೂಪಾಯಿ ನಗದು ಸಿಗಲಿದೆ.

 

Advertisement
Tags :
bengaluruELECTIONLatestNewslokasabha electionMoneyNewsKarnatakaphotoPRIZEwin
Advertisement
Next Article