For the best experience, open
https://m.newskannada.com
on your mobile browser.
Advertisement

ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ; ಶಾಸಕರ ಭೇಟಿ, ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ ಶೀಟು ಗಾಳಿಗೆ ಹಾರಿ ಹೋಗಿದ್ದು, ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.
06:42 PM May 12, 2024 IST | Ashitha S
ಗಾಳಿ ಮಳೆಗೆ ಮರ ಬಿದ್ದು ಮನೆಗೆ ಹಾನಿ  ಶಾಸಕರ ಭೇಟಿ  ತಕ್ಷಣ ವ್ಯವಸ್ಥೆ ಮಾಡುವಂತೆ ಸೂಚನೆ

ಪುತ್ತೂರು: ಭಾನುವಾರ ಸಂಜೆ ಪುತಯ್ತೂರು ನಗರ ವ್ಯಾಪ್ತಿಯಲ್ಲಿ ಭಾರೀ ಗಾಳಿಮಳೆ ಬಂದಿದ್ದು ಬಪ್ಪಳಿಗೆಯ ಸಿಂಗಾಣಿ ಎಂಬಲ್ಲಿ ಕಮಲ ಎಂಬವರ ಮನೆಯ ಮಾಡಿನ ಶೀಟು ಗಾಳಿಗೆ ಹಾರಿ ಹೋಗಿದ್ದು, ಉರ್ಲಾಂಡಿಯಲ್ಲಿ ಶೋಭಾ ಹೆಗ್ಡೆ ಎಂಬವರ ಮನೆಯ ಮೇಲೆ ಮರ ಬಿದ್ದು ಬಾಗಶ: ಜಖಂಗೊಂಡಿದೆ. ಮನೆ ಮಂದಿ ಅಪಾಯದಿಂದ ಪಾರಾಗಿದ್ದಾರೆ.

Advertisement

Puttr

ಶಾಸಕರ ಭೇಟಿ:
ಘಟನೆಯ ಸುದ್ದಿ ತಿಳಿದು ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಶಾಸಕರು ಸಿಂಗಾನಿಯ ಕಮಲ ಅವರ ಮನೆಗೆ ತಾತ್ಕಾಲಿಕವಾಗಿ ಶಾಸಕರು ಟರ್ಪಾಲ್ ಹಾಕಿಸಿದ್ದಾರೆ. ಉರ್ಲಾಂಡಿಗೆ ಭೇಟಿ ನೀಡಿದ ಶಾಸಕರು ಮನೆ ಮೇಲೆ ಬಿದ್ದಿರುವ ಮರವನ್ನು ತಕ್ಷಣ ತೆರವು ಮಾಡುವಂತೆ ಸೂಚನೆಯನ್ನು ನೀಡಿದ್ದಾರೆ. ತಾತ್ಕಾಲಿಕವಾಗಿ ಎರಡೂ ಮನೆಗೂ ನೆರವಿನ ಭರವಸೆಯನ್ನು ನೀಡಿದ್ದಾರೆ. ಬಿಸಿಲಿನಿಂದ ಕಂಗೆಟ್ಟಿದ್ದ ಪುತ್ತೂರು ಜನತೆಗೆ ಮೊದಲ ಮಳೆಯೇ ಶಾಕ್ ಕೊಟ್ಟಿದೆ.

Advertisement

New Project (3)

ಈ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರಾದ ದಿನೇಶ್ ಪಿ ವಿ, ಮೋನು ಬಪ್ಪಳಿಗೆ, ಇಸ್ಮಾಯಿಲ್ ಬೊಳುವಾರು, ವಿಲ್ಫಿ, ಕೇಶವ ಉಲಾಂಡಿ, ಕುಮಾರ್ ಉರ್ಲಾಂಡಿ, ಸೂರ್ಯ,ವಿಲ್ಪ್ರೆಡ್ ಪೆರ್ನಾಂಡಿಸ್, ಶ್ರೀಕಾಂತ್, ದೀಕ್ಷಿತ್ ಮೊದಲಾದವರು ಉಪಸ್ತಿತರಿದ್ದರು

Advertisement
Tags :
Advertisement