For the best experience, open
https://m.newskannada.com
on your mobile browser.
Advertisement

ಮಾರ್ಚ್.15ರೊಳಗೆ ಸೇನೆ ಹಿಂಪಡೆಯಲು ಭಾರತಕ್ಕೆ 'ಮಾಲ್ಡೀವ್ಸ್' ಸೂಚನೆ

ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಇದೀಗ ಭಾರತಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಇಂಡಿಯಾ ಔಟ್ ಅಭಿಯಾನದ ಮೂಲಕ ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆ ವಾಪಸ್ ಪಡೆಯಲು ಹೋರಾಟ ನಡೆಸಿದ ಮುಯಿಝಿ ಇದೀಗ ಮಾರ್ಚ್ 15ರ ಡೆಡ್‌ಲೈನ್ ನೀಡಿದ್ದಾರೆ.
07:28 PM Jan 14, 2024 IST | Ashika S
ಮಾರ್ಚ್ 15ರೊಳಗೆ ಸೇನೆ ಹಿಂಪಡೆಯಲು ಭಾರತಕ್ಕೆ  ಮಾಲ್ಡೀವ್ಸ್  ಸೂಚನೆ

ಮಾಲ್ಡೀವ್ಸ್: ಮಾಲ್ಡೀವ್ಸ್ ಅಧ್ಯಕ್ಷ ಮುಯಿಝಿ ಇದೀಗ ಭಾರತಕ್ಕೆ ಮತ್ತೊಂದು ಎಚ್ಚರಿಕೆ ನೀಡಿದ್ದಾರೆ. ಇಂಡಿಯಾ ಔಟ್ ಅಭಿಯಾನದ ಮೂಲಕ ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆ ವಾಪಸ್ ಪಡೆಯಲು ಹೋರಾಟ ನಡೆಸಿದ ಮುಯಿಝಿ ಇದೀಗ ಮಾರ್ಚ್ 15ರ ಡೆಡ್‌ಲೈನ್ ನೀಡಿದ್ದಾರೆ.

Advertisement

ಮಾರ್ಚ್ 15ರೊಳಗೆ ಭಾರತೀಯ ಸೇನೆಯನ್ನು ಮಾಲ್ಡೀವ್ಸ್‌ನಿಂದ ವಾಪಸ್ ಪಡೆಯುವಂತೆ ಖಡಕ್ ಸೂಚನೆ ನೀಡಿದ್ದಾರೆ. ಮಾಲ್ಡೀವ್ಸ್ ಅಧ್ಯಕ್ಷ ಚೀನಾ ಕೈಗೊಂಬೆಯಾಗಿದ್ದಾರೆ ಅನ್ನೋ ಆರೋಪದ ಬೆನ್ನಲ್ಲೇ ಮಾಲ್ಡೀವ್ಸ್‌ನ ಈ ನಡೆ ಇದೀಗ ಭಾರತಕ್ಕೆ ಮತ್ತಷ್ಟು ಸವಾಲಾಗಿದೆ.

ಭಾರತ ಸೇನಾ ವಾಪಸ್ ಪಡೆಯುವ ಡೆಡ್‌ಲೈನ್ ಕುರಿತು ಪಬ್ಲಿಕ್ ಪಾಲಿಸಿ ಮುಖ್ಯ ಕಾರ್ಯದರ್ಶಿ ಅಬ್ದುಲ್ಲಾ ನಜೀಮ್ ಸುದ್ದಿಗೋಷ್ಠಿ ನಡೆಸಿದ್ದಾರೆ. ಅಧ್ಯಕ್ಷ ಮುಯಿಝಿ ,ಮಾಲ್ಡೀವ್ಸ್ ಸರ್ಕಾರದ ಪ್ರಮುಖ ಅಧಿಕಾರಿಗಳು ಹಾಗೂ ಭಾರತ ಸರ್ಕಾರದ ಅಧಿಕಾರಿಗಳು, ವಿದೇಶಾಂಗ ಇಲಾಖೆ ಅಧಿಕಾರಿಗಳ ಜೊತೆಗೆ ನಡೆದ ಸಭೆಯಲ್ಲಿ ಈ ವಿಚಾರ ಚರ್ಚಿಸಲಾಗಿದೆ.

Advertisement

ಮುಯಿಝಿ ಈಗಾಗಲೇ ಭಾರತದ ಸೇನೆ ವಾಪಸ್ ಕರೆಯಿಸಿಕೊಳ್ಳುವ ಕುರಿತು ನಿಲುವು ಸ್ಪಷ್ಟಪಡಿಸಿದ್ದಾರೆ. ಕೊನೆಯ ಸಭೆಯಲ್ಲಿ ಮಾರ್ಚ್ 15ರೊಳಗೆ ಸೇನೆ ವಾಪಸ್ ಕರೆಯಿಸಿಕೊಳ್ಳುವಂತೆ ಸೂಚಿಸಿದ್ದಾರೆ. ಈ ಕುರಿತು ಅಧಿಕೃತವಾಗಿ ಭಾರತಕ್ಕೆ ನಿಲವು ನೀಡಲಾಗುತ್ತದೆ ಎಂದು ಅಬ್ದುಲ್ಲಾ ನಜೀಮ್ ಹೇಳಿದ್ದಾರೆ.

Advertisement
Tags :
Advertisement