ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಟಪಾಡಿ ಪೇಟೆಯ ವ್ಯಾಪ್ತಿಯಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ

ಕಟಪಾಡಿ ಪೇಟೆ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದು ಒಂದು ತಿಂಗಳಿನಿಂದ ಮೊಬೈಲ್ ನೆಟ್ ವರ್ಕ್ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ಮೊಬೈಲ್ ಹಾಗೂ ಇಂಟರ್ ನೆಟ್ ಬಳಕೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ. ನೆಟ್ ವರ್ಕ್ ಸಿಗದೆ ಹೈರಾಣಾಗಿರುವ ಸ್ಥಳೀಯರು ಮೊಬೈಲ್ ಸೇವೆ ಕಲ್ಪಿಸುವ ಸಂಸ್ಥೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
05:00 PM Apr 16, 2024 IST | Nisarga K
ಕಟಪಾಡಿ ಪೇಟೆಯ ವ್ಯಾಪ್ತಿಯಲ್ಲಿ ನೆಟ್ ವರ್ಕ್ ಇಲ್ಲದೆ ಜನರ ಪರದಾಟ

ಉಡುಪಿ: ಕಟಪಾಡಿ ಪೇಟೆ ಸುತ್ತಮುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಕಳೆದು ಒಂದು ತಿಂಗಳಿನಿಂದ ಮೊಬೈಲ್ ನೆಟ್ ವರ್ಕ್ ಸಂಪೂರ್ಣ ಸ್ಥಗಿತಗೊಂಡಿದ್ದು, ಇದರಿಂದ ಮೊಬೈಲ್ ಹಾಗೂ ಇಂಟರ್ ನೆಟ್ ಬಳಕೆದಾರರು ತೀವ್ರ ತೊಂದರೆ ಅನುಭವಿಸುವಂತಾಗಿದೆ.
ನೆಟ್ ವರ್ಕ್ ಸಿಗದೆ ಹೈರಾಣಾಗಿರುವ ಸ್ಥಳೀಯರು ಮೊಬೈಲ್ ಸೇವೆ ಕಲ್ಪಿಸುವ ಸಂಸ್ಥೆಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

Advertisement

ಮೊಬೈಲ್ ಕಂಪನಿ ಹಾಗೂ ಟವರ್ ಅಳವಡಿಸಲಾಗಿರುವ ಜಾಗದ ಮಾಲೀಕರ ನಡುವಿನ ಒಪ್ಪಂದ ಮುಗಿದ ಹಿನ್ನೆಲೆಯಲ್ಲಿ ಏರ್‌ಟೆಲ್, ವಿಐ ಮತ್ತು ಜಿಯೋ ಬಳಕೆದಾರರಿಗೆ ನೆಟ್ ವರ್ಕ್ ಸಮಸ್ಯೆ ಉಂಟಾಗಿದೆ. ಅಲ್ಲದೆ, ಫೋನ್ ಕರೆ ಮಾಡಲು, ಸ್ವೀಕರಿಸಲು ಸಾಧ್ಯವಾಗುತ್ತಿಲ್ಲ, ಆನ್‌ಲೈನ್ ಹಣಕಾಸಿನ ವ್ಯವಹಾರ, ವರ್ಕ್ ಫ್ರಮ್ ಹೋಮ್, ಕಚೇರಿಯ ದೈನಂದಿನ ಕೆಲಸ ನಿರ್ವಹಿಸಲು ಕಷ್ಟಪಡುವಂತಾಗಿದೆ.

ಟವರ್ ಲಭ್ಯವಿಲ್ಲದೆ ನಾವೇನೂ ಮಾಡಲಾಗುತ್ತಿಲ್ಲ. ಸಮೀಪದಲ್ಲಿ ಪರ್ಯಾಯ ಜಾಗವೂ ಸಿಗುತ್ತಿಲ್ಲ ಎಂದು ಮೊಬೈಲ್ ಸೇವೆ ಒದಗಿಸುವ ಕಂಪನಿಗಳು ಅಳಲು ತೋಡಿಕೊಂಡಿದ್ದಾರೆ.
ಜಾಗದ ಮಾಲೀಕರು ಮತ್ತು ನೆಟ್ವರ್ಕ್ ಸಂಸ್ಥೆಗಳು ಪರಸ್ಪರ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬೇಕು. ಕೂಡಲೇ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Advertisement

Advertisement
Tags :
NetworksPEOPLEproblemSUFFERINGUDUPI
Advertisement
Next Article