For the best experience, open
https://m.newskannada.com
on your mobile browser.
Advertisement

ಬಾಲಕನಿಗೆ ಟಾಯ್ಲೆಟ್‌ ನೀರು ಕುಡಿಸಿದ್ದ ಮಹಿಳೆಯ ಬಂಧನ

ಬಾಲಕನನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋಗಿ ಟಾಯ್ಲೆಟ್‌ ನೀರು ಕುಡಿಯುವಂತೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಟೆಕ್ಸಾಸ್‌ನ ವುಡ್‌ವೇಯಲ್ಲಿ ಬಂಧಿಸಲಾಗಿದೆ.
01:40 PM Apr 07, 2024 IST | Ashika S
ಬಾಲಕನಿಗೆ ಟಾಯ್ಲೆಟ್‌ ನೀರು ಕುಡಿಸಿದ್ದ ಮಹಿಳೆಯ ಬಂಧನ

ಅಮೆರಿಕ: ಬಾಲಕನನ್ನು ಬಾತ್‌ರೂಮ್‌ಗೆ ಎಳೆದುಕೊಂಡು ಹೋಗಿ ಟಾಯ್ಲೆಟ್‌ ನೀರು ಕುಡಿಯುವಂತೆ ಮಾಡಿದ ಆರೋಪದ ಮೇಲೆ ಮಹಿಳೆಯೊಬ್ಬರನ್ನು ಟೆಕ್ಸಾಸ್‌ನ ವುಡ್‌ವೇಯಲ್ಲಿ ಬಂಧಿಸಲಾಗಿದೆ.

Advertisement

ಬಂಧಿತ ಮಹಿಳೆಯನ್ನು  ಡಿಯಾ ವೆಲೆಡಿಯಾಜ್-ಬೋನಿಫಾಜಿ ಎಂದು ಗುರುತಿಸಲಾಗಿದೆ.

ಬಾಲಕನ ಕೂದಲು ಹಿಡಿದು ಟಾಯ್ಲೆಟ್​ಗೆ ಎಳೆದೊಯ್ದು, ಟಾಯ್ಲೆಟ್​ ಗುಂಡಿಯೊಳಗಿದ್ದ ನೀರು ಕುಡಿಯುವಂತೆ ಮಹಿಳೆ ಒತ್ತಾಯಿಸಿದ್ದಳು. ಪರಿಣಾಮ ಆತನ ತಲೆಯ ಕೆಲವು ಭಾಗಗಳಲ್ಲಿ ಕೂದಲು ಉದುರಿ ಹೋಗಿದೆ.

Advertisement

ಇದಾದ ಬಳಿಕ ಬಾಲಕ ಅಳುತ್ತಲೇ ಶಾಲೆಗೆ ಬಂದಿದ್ದ ಆಗ ಶಿಕ್ಷಕರು ವಿಚಾರಿಸಿದಾಗ ನಡೆದ ವಿಚಾರವನ್ನು ತಿಳಿಸಿದ್ದ.

ಕ್ಷಣ ಪೊಲೀಸರು ಹಾಗೂ ಮಕ್ಕಳ ರಕ್ಷಣಾ ಇಲಾಖೆಯವರು ತನಿಖೆ ನಡೆಸಿದ್ದಾರೆ. ಡಿಯಾ ವೆಲೆಡಿಯಾಜ್-ಬೋನಿಫಾಜಿಯನ್ನು ಏಪ್ರಿಲ್ 3 ರಂದು ಬಂಧನದಲ್ಲಿರಿಸಲಾಗಿದೆ.

ಮಹಿಳೆಯು ಬಾಲಕನಿಗೆ ಪದೇ ಪದೇ ಹೊಡೆಯುತ್ತಿದ್ದಳು, ವಿವಿಧ ವಸ್ತುಗಳನ್ನು ಮೈಮೇಲೆ ಎಸೆಯುತ್ತಿದ್ದಳು, ದೀರ್ಘಕಾಲದವರೆಗೆ ಆಹಾರವನ್ನು ನೀಡುತ್ತಿರಲಿಲ್ಲ. ಈ ಬಾಲಕ ಹಲವು ಸಮಯಗಳಿಂದ ಹಿಂಸೆ ಅನುಭವಿಸಿದ್ದಾನೆ ಎಂಬುದು ತಿಳಿದು ಬಂದಿದೆ.

Advertisement
Tags :
Advertisement