For the best experience, open
https://m.newskannada.com
on your mobile browser.
Advertisement

ಬಿಕಿನಿ ಧರಿಸಿ ಬಸ್ ಏರಿದ ಮಹಿಳೆಯಿಂದ ಅಶ್ಲೀಲ ವರ್ತನೆ: ವಿಡಿಯೋ ವೈರಲ್‌

ಇಷ್ಟು ದಿನ ಬಸ್‌ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಪುರುಷರ ಬಗ್ಗೆ ಸುದ್ದಿಯಾಗಿದ್ದವು. ಆದರೆ ಈಗ ಮಹಿಳೆಯೊಬ್ಬಳ ಸರದಿ, ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ ಜೀವನಾಡಿ ಆಗಿರುವ ಡಿಟಿಸಿ ಬಸ್‌ನಲ್ಲಿ ನಡೆದಿದೆ.
11:00 AM Apr 18, 2024 IST | Ashitha S
ಬಿಕಿನಿ ಧರಿಸಿ ಬಸ್ ಏರಿದ ಮಹಿಳೆಯಿಂದ ಅಶ್ಲೀಲ ವರ್ತನೆ  ವಿಡಿಯೋ ವೈರಲ್‌

ನವದೆಹಲಿ: ಇಷ್ಟು ದಿನ ಬಸ್‌ನಲ್ಲಿ ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವ ಪುರುಷರ ಬಗ್ಗೆ ಸುದ್ದಿಯಾಗಿದ್ದವು. ಆದರೆ ಈಗ ಮಹಿಳೆಯೊಬ್ಬಳ ಸರದಿ, ಬಿಕಿನಿ ಧರಿಸಿ ಬಸ್ ಏರಿದ ಮಹಿಳೆ ಪುರುಷರತ್ತ ಅಸಭ್ಯವಾಗಿ ಸನ್ನೆ ಮಾಡಿ ಕಿರುಕುಳ ನೀಡಿದ ಘಟನೆ ರಾಷ್ಟ್ರ ರಾಜಧಾನಿಯ ದೆಹಲಿಯ ಜೀವನಾಡಿ ಆಗಿರುವ ಡಿಟಿಸಿ ಬಸ್‌ನಲ್ಲಿ ನಡೆದಿದೆ.

Advertisement

ಮಹಿಳೆ ಕೇವಲ ಬಿಕಿನಿ ಧರಿಸಿ ಪ್ರಯಾಣಿಕರಿಂದ ತುಂಬಿದ್ದ ಬಸ್ ಏರಿದ್ದು, ಬಸ್‌ನಲ್ಲಿದ್ದ ಪ್ರಯಾಣಿಕರು ಬಿಕಿನಿ ಧರಿಸಿದ್ದ ಮಹಿಳೆಯನ್ನು ನೋಡಿ ಬೆಚ್ಚಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿ ಸಾರಿಗೆ ಕಾರ್ಪೋರೇಷನ್‌ಗೆ ಸೇರಿದ ಬಸ್‌ನಲ್ಲಿ ಈ ಘಟನೆ ನಡೆದಿದೆ. ಮಹಿಳೆ ಬಸ್ ಏರುತ್ತಿದ್ದಂತೆ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದಾಳೆ. ಅಲ್ಲದೇ ಮಹಿಳಾ ಪ್ರಯಾಣಿಕರ ಜೊತೆ ವಾದ ಮಾಡುತ್ತಾಳೆ. ಈಕೆಯ ವರ್ತನೆ ಪ್ರಯಾಣಿಕರನ್ನು ಗೊಂದಲಕ್ಕೀಡು ಮಾಡಿದೆ. ಅನೇಕರು ಈಕೆಯ ವರ್ತನೆಯಿಂದ ಕಿರಿಕಿರಿಗೊಳಗಾಗಿರುವುದು ಕಾಣಿಸುತ್ತಿದೆ. ಮತ್ತೆ ಕೆಲವರು ಆಕೆಯ ವರ್ತನೆ ನೋಡಲಾಗದೇ ಸೀಟಿನಿಂದ ಎದ್ದು ಹೋಗುತ್ತಿದ್ದಾರೆ.

Advertisement

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಜನ ಆಕ್ರೋಶ ವ್ಯಕ್ತಪಡಿಸಿದ್ದು, ಇಂತಹ ವರ್ತನೆಗಳನ್ನು ತಡೆಯುವ ಯಾವುದೇ ಕಾನೂನುಗಳು ಇಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

Advertisement
Tags :
Advertisement