ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬ್ರೆಜಿಲ್‌ನಲ್ಲಿ ವಿಚಿತ್ರ ಘಟನೆ : ಮೃತ ವ್ಯಕ್ತಿಯನ್ನ ಬ್ಯಾಂಕಿಗೆ ಕರೆತಂದ ಮಹಿಳೆ

ಬ್ರೆಜಿಲ್’ನ ರಿಯೋ ಡಿ ಜನೈರೊದಲ್ಲಿ ಒಂದು ವಿಚಿತ್ರ ಮತ್ತು ಆಶ್ಚರ್ಯಕ ಘಟನೆ ನಡೆದಿದ್ದು ಓರ್ವ ಮಹಿಳೆ ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಶವವನ್ನ ಬ್ಯಾಂಕಿಗೆ ವ್ಹೀಲ್ ಚೇರ್’ನಲ್ಲಿ ತರುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.
09:51 PM Apr 17, 2024 IST | Nisarga K
ಬ್ರೆಜಿಲ್‌ನಲ್ಲಿ ವಿಚಿತ್ರ ಘಟನೆ : ಮೃತ ವ್ಯಕ್ತಿಯನ್ನ ಬ್ಯಾಂಕಿಗೆ ಕರೆತಂದ ಮಹಿಳೆ

ಬ್ರೆಜಿಲ್‌ : ಬ್ರೆಜಿಲ್’ನ ರಿಯೋ ಡಿ ಜನೈರೊದಲ್ಲಿ ಒಂದು ವಿಚಿತ್ರ ಮತ್ತು ಆಶ್ಚರ್ಯಕ ಘಟನೆ ನಡೆದಿದ್ದು ಓರ್ವ ಮಹಿಳೆ ಸಾಲದ ನಮೂನೆಯಲ್ಲಿ ಸಹಿ ಪಡೆಯಲು ಶವವನ್ನ ಬ್ಯಾಂಕಿಗೆ ವ್ಹೀಲ್ ಚೇರ್’ನಲ್ಲಿ ತರುತ್ತಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Advertisement

ಆಕೆಗೆ ಸಾಲದ ಅವಶ್ಯಕತೆ ಇದ್ದ ಕಾರಣ ತನ್ನ ಹೆಸರಿನಲ್ಲಿ ಸಾಲ ಪಡೆಯಲು ಮೃತ ವ್ಯಕ್ತಿಯನ್ನು ವೀಲ್‌ಚ್ಹೇರ್‌ನಲ್ಲಿ ಕೂರಿಸಿಕೊಂಡು ಬಂದಿದ್ದಾಳೆ ಎಂದು ವರದಿ ತಿಳಿಸಿದೆ.

ಮಹಿಳೆ ಮೃತ ಪಿಂಚಣಿದಾರನ ತಲೆ ಎತ್ತಿ ಹಿಡಿದು ಕಾಗದದ ಮೇಲೆ ಸಹಿ ಮಾಡಿಸಲು ಪ್ರಯತ್ನಿಸುತ್ತಿದ್ದಳಾದರೂ ಸಾಧ್ಯವಾಗುತ್ತಿರಲಿಲ್ಲ ಆದರೂ ಪಟ್ಟುಹಿಡಿದು, ಮೃತ ವ್ಯಕ್ತಿಯ ಸಹಿಯನ್ನ ಪಡೆಯುವ ವ್ಯರ್ಥ ಪ್ರಯತ್ನದಲ್ಲಿ ವ್ಯಕ್ತಿಯ ಬೆರಳುಗಳ ನಡುವೆ ಪೆನ್ ಇರಿಸಿದಳು ಆದರೆ ಸಾಧ್ಯವಾಗದ ಕಾರಣ ಬ್ಯಾಂಕಿನ ಸಿಬ್ಬಂದಿ ಆತನ ಆರೋಗ್ಯದ ಬಗ್ಗೆ ವಿಚಾರಿಸಿದಾಗೆ ಆಕೆ ಅವರಿಗೂ ಹೆದರಿಸುತ್ತಾಳೆ ನಂತರ ಆ ವ್ಕಕ್ತಿ ಇರುವಿದೆ ಹೀಗೆ ಎಂದು ತಿಳಿಸುತ್ತಾಳೆ.

Advertisement

ವ್ಯಕ್ತಿಯ ಮಸುಕಾದ ನೋಟ ಹಾಗೂ ಯಾವುದೇ ಚಲನವಲನ ಇಲ್ಲದ್ದನ್ನು ಗಮನಿಸಿದ ಬ್ಯಾಂಕಿನ ಸಿಬ್ಬಂಧಿ ಅನುಮಾನಗೊಂಡು ತಕ್ಷಣ ಪೊಲೀಸರನ್ನ ಸಂಪರ್ಕಿಸಿದರು.

Advertisement
Tags :
BANKBrazilDEAD BODYLatestNewsNewsKarnatakawomen
Advertisement
Next Article