ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮೆಟ್ರೋ ಬಾಗಿಲಿಗೆ ಸಿಲುಕಿಕೊಂಡ ಸೀರೆ: ಮಹಿಳೆ ಸಾವು

ಮಹಿಳೆಯೊಬ್ಬರು ಮೆಟ್ರೋ ಹಳಿ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ನಡೆದಿದೆ.
09:00 AM Dec 17, 2023 IST | Ashika S

ದೆಹಲಿ: ಮಹಿಳೆಯೊಬ್ಬರು ಮೆಟ್ರೋ ಹಳಿ ಮೇಲೆ ಬಿದ್ದು ಸಾವನ್ನಪ್ಪಿರುವ ಘಟನೆ ದೆಹಲಿಯ ಇಂದ್ರಲೋಕ ಮೆಟ್ರೋ ನಿಲ್ದಾಣದಲ್ಲಿ ಗುರುವಾರ ನಡೆದಿದೆ.

Advertisement

ಮಹಿಳೆ ಇಳಿಯುವಷ್ಟರಲ್ಲಿ ಮೆಟ್ರೋ ಬಾಗಿಲು ಹಾಕಿದ ಕಾರಣ ಆಕೆಯ ಸೀರೆ ಹಾಗೂ ಜಾಕೆಟ್​ ಬಾಗಿಲು ನಡುವೆ ಸಿಲುಕಿತ್ತು. ಪ್ರಯಾಣಿಕರು ಕೂಗುತ್ತಿದ್ದಂತೆಯೇ ಮೆಟ್ರೋ ಹೊರಟುಬಿಟ್ಟಿತ್ತು, ರೈಲು ಪ್ಲಾಟ್​ಫಾರಂನಿಂದ ಮುಂದೆ ಸಾಗಿದ ನಂತರ ಮಹಿಳೆ ಪ್ಲಾಟ್​ಫಾರಂನ ಕೊನೆಯ ಗೇಟ್​ಗೆ ಡಿಕ್ಕಿ ಹೊಡೆದು ಟ್ರ್ಯಾಕ್​ ಮೇಲೆ ಬಿದ್ದಿದ್ದಾರೆ.

ಇದರಿಂದ ಮಹಿಳೆಗೆ ಗಂಭೀರ ಗಾಯಗಳಾಗಿವೆ. ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದೆ. ಸಂತ್ರಸ್ತ ಮಹಿಳಾ ಪ್ರಯಾಣಿಕರನ್ನು 35 ವರ್ಷದ ರೀನಾ ಎಂದು ಗುರುತಿಸಲಾಗಿದ್ದು, ಪ್ರಸ್ತುತ ಸಫ್ದರ್‌ಜಂಗ್ ಆಸ್ಪತ್ರೆಯ ನ್ಯೂರೋ ಸರ್ಜರಿ ಐಸಿಯುನಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದರು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

Advertisement

ಸಾಮಾನ್ಯವಾಗಿ ಮೆಟ್ರೋದ ಬಾಗಿಲುಗಳ ನಡುವೆ 15 ಎಂಎಂ ಗಾತ್ರದ ಯಾವುದೇ ವಸ್ತು ಅಡ್ಡ ಬಂದರೆ ಬಾಗಿಲು ಮುಚ್ಚುವುದಿಲ್ಲ.

ಬಟ್ಟೆ ಸಿಕ್ಕಿಹಾಕಿಕೊಂಡ ನಂತರ ಮೆಟ್ರೋ ಡೋರ್ ಸೆನ್ಸರ್‌ಗಳು ಏಕೆ ಕಾರ್ಯನಿರ್ವಹಿಸಲಿಲ್ಲ ಎಂಬ ಪ್ರಶ್ನೆಗಳು ಉದ್ಭವಿಸುತ್ತಿವೆ? ಎಲ್ಲಾ ಪ್ರಯಾಣಿಕರು ಸುರಕ್ಷಿತವಾಗಿ ಹತ್ತಿದಾಗ ಮಾತ್ರ ರೈಲು ಮೆಟ್ರೋ ನಿಲ್ದಾಣದಿಂದ ಹೊರಡುವ ಯಾವುದೇ ವ್ಯವಸ್ಥೆ ಮೆಟ್ರೋ ನಿಲ್ದಾಣಗಳಲ್ಲಿ ಇಲ್ಲ. ಜನದಟ್ಟಣೆಯ ಸಮಯದಲ್ಲಿ ಕೆಲವು ಜನನಿಬಿಡ ನಿಲ್ದಾಣಗಳಲ್ಲಿ ಮಾತ್ರ ಗಾರ್ಡ್‌ಗಳು ಇರುತ್ತಾರೆ. ಇಲ್ಲದಿದ್ದರೆ ಭದ್ರತಾ ಸಿಬ್ಬಂದಿ ಕೂಡ ಸ್ಟೇಷನ್​ಗಳಲ್ಲಿ ಇರುವುದಿಲ್ಲ.

ಪ್ರಯಾಣಿಕರು ಸಡಿಲವಾದ ಬಟ್ಟೆಗಳನ್ನು ಧರಿಸಿ ಬಾಗಿಲುಗಳ ಬಳಿ ನಿಲ್ಲಬಾರದು ಎಂದು ಘೋಷಿಸಲಾಗಿದೆ. ಬಾಗಿಲು ಮುಚ್ಚುವಾಗ ಅಥವಾ ತೆರೆಯುವಾಗ ಮೆಟ್ರೋವನ್ನು ಹತ್ತಲು ಅಥವಾ ಡಿಬೋರ್ಡ್ ಮಾಡಲು ಪ್ರಯತ್ನಿಸಬಾರದು ಡಿಎಂಆರ್​ಸಿ ತಿಳಿಸಿದೆ.

Advertisement
Tags :
LatetsNewsNewsKannadaದೆಹಲಿಮಹಿಳೆಮೆಟ್ರೋಮೆಟ್ರೋ ನಿಲ್ದಾಣಹಳಿ
Advertisement
Next Article