For the best experience, open
https://m.newskannada.com
on your mobile browser.
Advertisement

ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ-ಮಳೆ : ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು

  ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16 ರ ಸಂಜೆ ಸಂಭವಿಸಿದೆ.
10:15 AM May 16, 2024 IST | Nisarga K
ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ ಮಳೆ   ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು
ಸುಬ್ರಹ್ಮಣ್ಯದಲ್ಲಿ ಭಾರಿ ಗಾಳಿ-ಮಳೆ : ತೋಟದಲ್ಲಿ ಮರ ಬಿದ್ದು ಮಹಿಳೆ ಸಾವು

ಸುಬ್ರಹ್ಮಣ್ಯ: ಗಾಳಿ - ಮಳೆಗೆ ಮರ ಬಿದ್ದು ವೃದ್ಧೆಯೋರ್ವರು ಮೃತಪಟ್ಟ ಘಟನೆ ಸುಬ್ರಹ್ಮಣ್ಯ ಸಮೀಪದ ಕುಲ್ಕುಂದ ಎಂಬಲ್ಲಿ ಮೇ 16 ರ ಸಂಜೆ ಸಂಭವಿಸಿದೆ. ಕಡಬ ತಾಲೂಕಿನ ಸುಬ್ರಹ್ಮಣ್ಯ ಗ್ರಾಮದ ಕುಲ್ಕುಂದ ಬಸವನಮೂಲೆ ನಿವಾಸಿ ದಿ|ಶೇಷಪ್ಪ ಎಂಬವರ ಪತ್ನಿ ಮೀನಾಕ್ಷಿ (65) ಮೃತರು. ಮೃತರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

Advertisement

ಮೀನಾಕ್ಷಿ ಅವರು ತಮ್ಮ ತೋಟದಲ್ಲಿ ಕಟ್ಟಿದ್ದ ದನವನ್ನು ಬಿಡಿಸಿ ತರಲು ಸಂಜೆ ತೆರಳಿದ್ದ ವೇಳೆ ಗಾಳಿ-ಮಳೆಗೆ ತೋಟದಲ್ಲಿನ ಉಪ್ಪಳಿಗೆ ಮರವೊಂದು ಇವರ ಮೇಲೆ ಬಿದ್ದಿದೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ಮೀನಾಕ್ಷಿ ಸ್ಥಳದಲ್ಲೇ ಮೃತರಾಗಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಕಡಬ ಕಂದಾಯ ನಿರೀಕ್ಷಕ ಪ್ರಥ್ವಿರಾಜ್ ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement
Tags :
Advertisement