For the best experience, open
https://m.newskannada.com
on your mobile browser.
Advertisement

ನಡು ರಸ್ತೇಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಎದುರಾಯ್ತು ಸಂಕಷ್ಟ !

ಇಲ್ಲೊಬ್ಬ ಮಹಿಳೆ ರೀಲ್ಸ್ ಮಾಡುವಾಗ ಅನಿರೀಕ್ಷಿತ ಆಘಾತ ಎದುರಾಗಿದೆ. ಉತ್ತರಪ್ರದೇಶದ ಗಾಜಿಯಾಬಾದ್ ನ ಇಂದ್ರಪುರಂನ ಸುಷ್ಮಾ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ವೈರಲ್​ ಆಗಿದೆ.
04:23 PM Mar 25, 2024 IST | Ashitha S
ನಡು ರಸ್ತೇಲಿ ರೀಲ್ಸ್ ಮಾಡುತ್ತಿದ್ದ ಮಹಿಳೆಗೆ ಎದುರಾಯ್ತು ಸಂಕಷ್ಟ

ಖನೌ: ಇಲ್ಲೊಬ್ಬ ಮಹಿಳೆ ರೀಲ್ಸ್ ಮಾಡುವಾಗ ಅನಿರೀಕ್ಷಿತ ಆಘಾತ ಎದುರಾಗಿದೆ. ಉತ್ತರಪ್ರದೇಶದ ಗಾಜಿಯಾಬಾದ್ ನ ಇಂದ್ರಪುರಂನ ಸುಷ್ಮಾ ಇನ್ ಸ್ಟಾಗ್ರಾಂನಲ್ಲಿ ಹಾಕಿರುವ ಪೋಸ್ಟ್ ವೈರಲ್​ ಆಗಿದೆ.

Advertisement

ಇಷ್ಟಕ್ಕೂ ಆಕೆ ಹಾಕಿದ ಪೋಸ್ಟ್​ ಯಾವುದು? ಎಂದು ನೋಡುವುದಾದರೆ, ಆಕೆ ನಡು ರಸ್ತೆಯಲ್ಲಿ ನಡೆದು ಬರುತ್ತಿರುತ್ತಾರೆ. ಆಕೆಯ ಗೆಳತಿ ದೂರ ನಿಂತು ವೀಡಿಯೋ ಮಾಡುತ್ತಿರುತ್ತಾರೆ. ಅಷ್ಟರಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿದ್ದ ವ್ಯಕ್ತಿಯೊಬ್ಬ ರೀಲ್ಸ್ ಮಾಡುತ್ತಿದ್ದ ಮಹಿಳೆಯ  ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಶರವೇಗದಲ್ಲಿ ಪರಾರಿಯಾಗುತ್ತಾನೆ.

ಇದರಿಂದ ಸುಷ್ಮಾ ಹಾಗೂ ಆಕೆಯ ಸ್ನೇಹಿತೆ ಬೆಚ್ಚಿಬಿದ್ದಿದ್ದು, ಏನಾಗಿದೆ ಎಂದು ಯೋಚಿಸುವ ಮೊದಲೇ ಬೈಕ್ ನಲ್ಲಿದ್ದ ಕಳ್ಳ ಹೊರಟು ಹೋಗಿದ್ದ. ಬಳಿಕ ಸಂತ್ರಸ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಚೈನ್‌ ಸ್ನಾಚರ್‌ಗಾಗಿ ಶೋಧ ನಡೆಸುತ್ತಿದ್ದಾರೆ.

Advertisement

Advertisement
Tags :
Advertisement