ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಲಿಸುತ್ತಿರುವ ಬಸ್​ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಚಲಿಸುತ್ತಿರುವ ಬಸ್​ನಲ್ಲಿ ಇಬ್ಬರು ಚಾಲಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
03:10 PM Dec 17, 2023 IST | Ashika S

ರಾಜಸ್ಥಾನ: ಚಲಿಸುತ್ತಿರುವ ಬಸ್​ನಲ್ಲಿ ಇಬ್ಬರು ಚಾಲಕರು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ವೆಸಗಿರುವ ಘಟನೆ ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.

Advertisement

ಯುವತಿ ಕಾನ್ಪುರದಲ್ಲಿ ಬಸ್​ ಹತ್ತಿದ್ದಳು, ತುಂಬಿದ ಬಸ್​ನಲ್ಲಿ ಪ್ರಯಾಣಿಸುತ್ತಿದ್ದಳು, ಜಾಗವಿಲ್ಲದ ಕಾರಣ ಡ್ರೈವರ್​ ಕ್ಯಾಬಿನ್​ನಲ್ಲಿ ಮಲಗುವಂತೆ ಕೇಳಿದ್ದರು. ಬಸ್​ನಲ್ಲಿರುವ ಇತರೆ ಪ್ರಯಾಣಿಕರಿಗೆ ಶಬ್ಧ ಕೇಳಿಸದಂತೆ ಮ್ಯೂಸಿಕ್​ ದೊಡ್ಡದಾಗಿ ಹಾಕಿದ್ದರು. ಅಲ್ಲೇ ಅತ್ಯಾಚಾರವೆಸಗಿದ್ದಾರೆ ಎನ್ನಲಾಗಿದೆ.

ಕನೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಸ್ಸು ಹಾದು ಹೋಗುತ್ತಿದ್ದಾಗ ಕೆಲವು ಪ್ರಯಾಣಿಕರಿಗೆ ಕೂಗು ಕೇಳಿಸಿತ್ತು, ಪೆಟ್ರೋಲ್ ಪಂಪ್ ಬಳಿ ಬಸ್​ ನಿಲ್ಲಿಸಿದಾಗ ಪೊಲೀಸರು ಬಂದು ಆರೋಪಿಯನ್ನು ಬಂಧಿಸಿದ್ದಾರೆ ಮತ್ತೊಬ್ಬ ಪರಾರಿಯಾಗಿದ್ದಾನೆ.

Advertisement

ನಾವು ಆರೋಪಿಗಳಲ್ಲಿ ಒಬ್ಬನನ್ನು ಆರಿಫ್ ಖಾನ್ (22) ಎಂದು ಗುರುತಿಸಿದ್ದೇವೆ ಮತ್ತು ಎರಡನೇ ಶಂಕಿತ ಲಲಿತ್ ಕುಮಾರ್ (24) ಗಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರೋಪಿಗಳ ವಿರುದ್ಧ ಸಾಮೂಹಿಕ ಅತ್ಯಾಚಾರಕ್ಕಾಗಿ ಎಫ್‌ಐಆರ್ ದಾಖಲಿಸಲಾಗಿದೆ.

Advertisement
Tags :
LatetsNewsNewsKannadaಚಾಲಕರುಬಸ್ಯುವತಿಸಾಮೂಹಿಕ ಅತ್ಯಾಚಾರ
Advertisement
Next Article