For the best experience, open
https://m.newskannada.com
on your mobile browser.
Advertisement

ಒಂದರ ನಂತರ ಒಂದರಂತೆ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಮಕ್ಕಳಿಗೆ ಪವಾಡ ಎನ್ನುವಂತೆ ಜನ್ಮ ನೀಡಿದ್ದು ಎಲ್ಲವೂ ಆರೋಗ್ಯವಾಗಿವೆ. ಇದರಲ್ಲಿ 4 ಗಂಡು, 2 ಹೆಣ್ಣು ಮಕ್ಕಳು ಸೇರಿವೆ ಎಂದು ಹೇಳಲಾಗಿದೆ.
09:28 AM Apr 21, 2024 IST | Ashitha S
ಒಂದರ ನಂತರ ಒಂದರಂತೆ ಆರು ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ

ರಾವಲ್ಪಿಂಡಿ: ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ಒಂದಲ್ಲ, ಎರಡಲ್ಲ ಬರೋಬ್ಬರಿ 6 ಮಕ್ಕಳಿಗೆ ಪವಾಡ ಎನ್ನುವಂತೆ ಜನ್ಮ ನೀಡಿದ್ದು ಎಲ್ಲವೂ ಆರೋಗ್ಯವಾಗಿವೆ. ಇದರಲ್ಲಿ 4 ಗಂಡು, 2 ಹೆಣ್ಣು ಮಕ್ಕಳು ಸೇರಿವೆ ಎಂದು ಹೇಳಲಾಗಿದೆ.

Advertisement

ಪಾಕಿಸ್ತಾನದ ರಾವಲ್ಪಿಂಡಿಯ ಆಸ್ಪತ್ರೆಯಲ್ಲಿ 27 ವರ್ಷದ ಜೀನತ್ ವಹೀದ್ ಅವರು ಏಕಕಾಲಕ್ಕೆ ಆರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಒಂದು ಗಂಟೆಯ ಅವಧಿಯಲ್ಲಿ ಎಲ್ಲ ಮಕ್ಕಳಿಗೆ ಒಂದರ ನಂತರ ಒಂದರಂತೆ ಜೀನತ್ ಜನ್ಮ ನೀಡಿದಳು.

ತಾಯಿ ಸೇರಿದಂತೆ ಎಲ್ಲ ಶಿಶುಗಳ ಸ್ಥಿತಿ ಸ್ಥಿರವಾಗಿದೆ. ಶಿಶುಗಳು ಉತ್ತಮ ಆರೋಗ್ಯ ಹೊಂದಿದ್ದು ಮತ್ತು ಅವರೆಲ್ಲರೂ ಕಡಿಮೆ ತೂಕ ಹೊಂದಿದ್ದಾರೆ. ಆದರೆ ಬೆಳೆದಂತೆ ಸರಿ ಹೋಗ್ತಾರೆ. ಮನೆಯಲ್ಲಿ ಲಾಲನೆ, ಪಾಲನೆ ಸರಿಯಾಗಿ ಆದರೆ ತೂಕ ಸರಿದೂಗಿಸಿಕೊಳ್ಳಬಹುದು.

Advertisement

ಸದ್ಯ ಶಿಶುಗಳನ್ನು ಆಸ್ಪತ್ರೆಯ ಇನ್ಕ್ಯುಬೇಟರ್‌ಗಳಲ್ಲಿ ಇರಿಸಲಾಗಿದ್ದು, ಅವುಗಳಿಗೆ ಅಥವಾ ತಾಯಿಗೆ ಯಾವುದೇ ಅಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ ಎನ್ನಲಾಗಿದೆ. ಪತ್ನಿ 6 ಮಕ್ಕಳಿಗೆ ಜನ್ಮ ನೀಡಿದ್ದಕ್ಕೆ ಪತಿ ಹಾಗೂ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Advertisement
Tags :
Advertisement