For the best experience, open
https://m.newskannada.com
on your mobile browser.
Advertisement

70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಉಗಾಂಡದ ಮಹಿಳೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯನ್ನು ಕೇಳಿ ಇಳಿ ವಯಸ್ಸಿನಲ್ಲಿಯೂ ಗರ್ಭಧರಿಸಲು ಸಾಧ್ಯನಾ ಎಂದು ಹಲವರು ಅಚ್ಚರಪಪಟ್ಟಿದ್ದಾರೆ.
12:47 PM Dec 04, 2023 IST | Ashitha S
70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ

ಉಗಾಂಡ: ಉಗಾಂಡದ ಮಹಿಳೆಯೊಬ್ಬರು ತಮ್ಮ 70ನೇ ವಯಸ್ಸಿನಲ್ಲಿ ಅವಳಿ ಮಕ್ಕಳಿಗೆ ಜನ್ಮವನ್ನು ನೀಡುವ ಮೂಲಕ ಇದೀಗ ಸುದ್ದಿಯಲ್ಲಿದ್ದಾರೆ. ಈ ಸುದ್ದಿಯನ್ನು ಕೇಳಿ ಇಳಿ ವಯಸ್ಸಿನಲ್ಲಿಯೂ ಗರ್ಭಧರಿಸಲು ಸಾಧ್ಯನಾ ಎಂದು ಹಲವರು ಅಚ್ಚರಪಪಟ್ಟಿದ್ದಾರೆ.

Advertisement

ಈ ಮಹಿಳೆಯ ಹೆಸರು ಸಫೀನಾ ನಮುಕ್ವಾಯಾ. ಕಳೆದ ಬುಧವಾರ ಆಫ್ರಿಕಾದ ರಾಜಧಾನಿ ಕಂಪಾಲಾದ ಆಸ್ಪತ್ರೆಯೊಂದರಲ್ಲಿ ಸಿಸೇರಿಯನ್ ಮೂಲಕ ಸಫಿನಾ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಕ್ಕಳಿಬ್ಬರೂ ಆರೋಗ್ಯವಾಗಿದ್ದಾರೆ ಎಂದು ಡಾ. ಎಡ್ವರ್ಡ್ ತಮಾಲೆ ಸಾಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈಕೆ ಇಂಟ್ರಾ-ವೆನಸ್ ಫರ್ಟಿಲಿಟಿ (IVF) ಚಿಕಿತ್ಸೆಯ ಮೂಲಕ ಗರ್ಭ ಧರಿಸಿ ಇದೀಗ ಅವಳಿ ಮಕ್ಕಳಿಗೆ ಜನ್ಮವನ್ನು ನೀಡಿದ್ದಾರೆ. ಸಪೀನಾ ಅವರ ಮೊದಲ ಪತಿ 1992 ರಲ್ಲಿ ನಿಧನರಾದರು. 4 ವರ್ಷಳ ಬಳಿಕ ಮತ್ತೊಂದು ಮದುವೆಯಾದರು. ಆದರೆ ಅವರಿಗೆ ಮಕ್ಕಳಾಗಿರಲಿಲ್ಲ. ಆದ್ದರಿಂದ ಅವರು ಈ ವಯಸ್ಸಿನಲ್ಲಿ ಐವಿಎಫ್ ಚಿಕಿತ್ಸೆಯ ಮೂಲಕ ಮಗುವನ್ನು ಪಡೆದಿದ್ದಾರೆ.

Advertisement

Advertisement
Tags :
Advertisement