For the best experience, open
https://m.newskannada.com
on your mobile browser.
Advertisement

ಆಸ್ತಿ ವಿಚಾರಕ್ಕೆ ಗಲಾಟೆ: ಮಹಿಳೆಯ ಹತ್ಯೆ

ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಹತ್ಯೆ ಮಾಡಿರುವ ಘಟನೆ ಹಾರೋಹಳ್ಳಿ ತಾಲೂಕಿನ ಭದ್ರೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.
08:55 AM Jan 20, 2024 IST | Ashika S
ಆಸ್ತಿ ವಿಚಾರಕ್ಕೆ ಗಲಾಟೆ  ಮಹಿಳೆಯ ಹತ್ಯೆ

ರಾಮನಗರ: ಆಸ್ತಿ ವಿಚಾರಕ್ಕೆ ಗಲಾಟೆ ನಡೆದು ಮಾರಕಾಸ್ತ್ರಗಳಿಂದ ಕೊಚ್ಚಿ ಮಹಿಳೆಯ ಹತ್ಯೆ ಮಾಡಿರುವ ಘಟನೆ ಹಾರೋಹಳ್ಳಿ ತಾಲೂಕಿನ ಭದ್ರೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

Advertisement

ಭದ್ರೇಗೌಡನ ದೊಡ್ಡಿ ಗ್ರಾಮದ ಗೌರಮ್ಮ (55) ಕೊಲೆಯಾದ ಮಹಿಳೆ.

ಗೌರಮ್ಮ ಜಮೀನಿನ ಪಕ್ಕದಲ್ಲಿಯೇ ಸಂಬಂಧಿಯೊಬ್ಬರು ವ್ಯವಸಾಯ ಮಾಡಿಕೊಂಡಿದ್ದರು. ಹೀಗಾಗಿ ಜಮೀನು ಒತ್ತುವರಿ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳೆಯನ್ನು ಕೊಲೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.

Advertisement

ಮೃತ ಮಹಿಳೆಯ ದೂರದ ಸಂಬಂಧಿಯಿಂದಲೇ ಈ ಕೃತ್ಯದ ಆರೋಪ ಮಾಡಲಾಗಿದೆ.  ಕೊಲೆ ಮಾಡಿರುವ ಆರೋಪಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಕನಕಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Advertisement
Tags :
Advertisement