For the best experience, open
https://m.newskannada.com
on your mobile browser.
Advertisement

ಗ್ರಹಣಕ್ಕೆ ಹೆದರಿ ಸಂಗಾತಿ, ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ಸೂರ್ಯಗ್ರಹಣಕ್ಕೆ ಹೆದರಿ ಸಂಗಾತಿ ಹಾಗೂ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.
01:04 PM Apr 11, 2024 IST | Ashika S
ಗ್ರಹಣಕ್ಕೆ ಹೆದರಿ ಸಂಗಾತಿ  ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ

ಲಾಸ್​ ಏಂಜಲೀಸ್​: ಕ್ಯಾಲಿಫೋರ್ನಿಯಾದಲ್ಲಿ ಮಹಿಳೆಯೊಬ್ಬರು ಸೂರ್ಯಗ್ರಹಣಕ್ಕೆ ಹೆದರಿ ಸಂಗಾತಿ ಹಾಗೂ ಮಕ್ಕಳನ್ನು ಕೊಂದು ಬಳಿಕ ತಾನೂ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಅಮೆರಿಕದಲ್ಲಿ ನಡೆದಿದೆ.

Advertisement

ಡೇನಿಯಲ್ ಅಯೋಕಾ ಎನ್ನುವ ಮಹಿಳೆ  ಕ್ಯಾಲಿಫೋರ್ನಿಯಾದಲ್ಲಿ ಗ್ರಹಣವು ಯಾವ ರೀತಿ ಅಡ್ಡ ಪರಿಣಾಮ ಬೀರುತ್ತದೆ ಎಂಬುದನ್ನು ಆಕೆ ಟಿವಿಯಲ್ಲಿ ನೋಡಿದ್ದಾಳೆ ಹೀಗಾಗಿ  ಗ್ರಹಣ ಸಂಭವಿಸುವ ಗಂಟೆಗಳ ಮೊದಲು ಆಕೆ ತನ್ನಿಬ್ಬರು ಪ್ರೀತಿಪಾತ್ರರನ್ನು ಹತ್ಯೆ ಮಾಡಿದ್ದಾಳೆ. ಬಳಿಕ ತಾನೂ ಸಾವಿಗೆ ಶರಣಾಗಿದ್ದಾಳೆ.

ಮೊದಲಿಗೆ ತನ್ನ ಪತಿ  ಜಾನ್ಸನ್​ಗೆ ಚಾಕುವಿನಿಂದ ಇರಿದ್ದು, ನಂತರ ಕಾರಿನಲ್ಲಿ 8 ತಿಂಗಳ ಮಗು ಹಾಗೂ 9 ವರ್ಷದ ಮಗಳೊಂದಿಗೆ ಕುಳಿತು ವೇಗವಾಗಿ ಕಾರು ಚಲಾಯಿಸಿ ಇಬ್ಬರು ಮಕ್ಕಳನ್ನು ಕಾರಿನಿಂದ ಕೆಳಗೆ ತಳ್ಳಿ ಬಳಿಕ ಗಂಟೆಗೆ 100  ಕಿ.ಮೀ ವೇಗದಲ್ಲಿ ಕಾರು ಓಡಿಸಿ ದೊಡ್ಡ ಮರಕ್ಕೆ ಡಿಕ್ಕಿ ಹೊಡೆಸಿದ್ದಾಳೆ.

Advertisement

ಘಟನೆಯಲ್ಲಿ 8 ತಿಂಗಳ ಮಗು ಸಾವನ್ನಪ್ಪಿದ್ದು, ಹಿರಿಯ ಮಗಳು ಗಾಯಗೊಂಡಿದ್ದು, ಮಹಿಳೆ ಸಾವನ್ನಪ್ಪಿದ್ದಾಳೆ. ಅಪಾರ್ಟ್‌ಮೆಂಟ್‌ಗೆ ತೆರಳಿದ ಪೊಲೀಸರಿಗೆ ರಕ್ತಸಿಕ್ತ ಹೆಜ್ಜೆಗುರುತುಗಳು ಮತ್ತು 29 ವರ್ಷದ ಜಾನ್ಸನ್ ಅವರ ದೇಹ ಪತ್ತೆಯಾಗಿದೆ. ಅವರ ಹೃದಯಕ್ಕೆ ಚೂರಿ ಇರಿಯಲಾಗಿತ್ತು.

Advertisement
Tags :
Advertisement