ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಂಗಳೂರಿನ ಮಹಿಳಾ ವಕೀಲೆ ಗೀತಾ ಸಿವಿಲ್ ಜಡ್ಜ್ ಹುದ್ದೆಗೆ ಆಯ್ಕೆ

ಮಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟಿಸ್ ಮಾಡುತ್ತಿದ್ದ ಗೀತಾ ಡಿ. ಅವರು ಕೂಡ 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಜಡ್ಜ್‌ ಹುದ್ದೆಗೇರಿದ್ದಾರೆ.
09:40 AM Feb 24, 2024 IST | Ashika S

ಮಂಗಳೂರು: ಮಂಗಳೂರಿನಲ್ಲಿ ವಕೀಲರಾಗಿ ಪ್ರಾಕ್ಟಿಸ್ ಮಾಡುತ್ತಿದ್ದ ಗೀತಾ ಡಿ. ಅವರು ಕೂಡ 2023ನೇ ಸಾಲಿನ ಕರ್ನಾಟಕ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಜಡ್ಜ್‌ ಹುದ್ದೆಗೇರಿದ್ದಾರೆ.

Advertisement

ಮೂಲತಃ ತುಮಕೂರು ಜಿಲ್ಲೆಯ ನಿವಾಸಿಯಾದ ಗೀತಾ ಅವರು, ಚಿಕ್ಕಮಗಳೂರಿನಲ್ಲಿ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯದಲ್ಲಿ ಜಡ್ಜ್ ಆಗಿ ನಿವೃತ್ತರಾಗಿದ್ದ ಡಿ. ಕಂಬೇಗೌಡ ಅವರ ಪುತ್ರಿ. ಮೂಡುಬಿದ್ರೆ ಆಳ್ವಾಸ್‌ ಕಾಲೇಜಿನಲ್ಲಿ ಪಿಯು ಮತ್ತು ಬಿಎಸ್ಸಿ ಪದವಿ ಪೂರೈಸಿದ್ದ ಗೀತಾ ಅವರು, ಮಂಗಳೂರಿನ ಎಸ್ ಡಿಎಂ ಕಾನೂನು ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಗಳಿಸಿದ್ದರು. ಬಳಿಕ ಮಂಗಳೂರಿನ ವಕೀಲರಾದ ಮಯೂರ ಕೀರ್ತಿ ಮತ್ತು ಶರತ್ ಕುಮಾರ್ ಬಿ ಅವರ ಜೊತೆ ಜೂನಿಯರ್ ಆಗಿ ಕೆಲಸ ಮಾಡುತ್ತಿದ್ದರು.

ಒಂದು ವರ್ಷದ ಹಿಂದೆ ಪುತ್ತೂರು ತಾಲೂಕಿನ ಚಾರ್ವಾಕ ಮೂಲದ ವಕೀಲ ಕಾರ್ತಿಕ್ ಮಾಚಿಲ ಅವರನ್ನು ಮದುವೆಯಾಗಿದ್ದು ಬಳಿಕ ಮಂಗಳೂರಿನಲ್ಲಿ ವಕೀಲ ದಂಪತಿಯಾಗಿ ಸ್ವಂತ ಕಚೇರಿ ಆರಂಭಿಸಿ ಪ್ರಾಕ್ಟಿಸ್ ಮಾಡುತ್ತಿದ್ದರು. 2020ರಲ್ಲಿ ಎಲ್ ಎಲ್ ಬಿ ಪೂರೈಸಿದ್ದ ಗೀತಾ ಸತತ ಮೂರು ವರ್ಷದಿಂದ ಸಿವಿಲ್ ಜಡ್ಜ್ ಪರೀಕ್ಷೆ ಬರೆಯುತ್ತಿದ್ದರು. ಮೂರನೇ ಪ್ರಯತ್ನದಲ್ಲಿ ತೇರ್ಗಡೆಯಾಗಿದ್ದು, ಜಡ್ಜ್ ಹುದ್ದೆಗೆ ಸೆಲೆಕ್ಟ್ ಆಗಿದ್ದಾರೆ.

Advertisement

Advertisement
Tags :
LatetsNewsNewsKannadaಗೀತಾ ಡಿಜಡ್ಜ್‌ವಕೀಲಸಿವಿಲ್ ಜಡ್ಜ್ ಪರೀಕ್ಷೆ
Advertisement
Next Article