ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯ ವಿರುದ್ಧ ವರ್ಗಾವಣೆ ಆದೇಶ ನಿರಾಕರಣೆ ಆರೋಪ

ವರ್ಗಾವಣೆ ಆದೇಶವಾದರೂ ಅಧಿಕಾರ ಸ್ವೀಕರಿಸದ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯ ವಿರುದ್ಧ ವರ್ಗಾವಣೆ ಆದೇಶ ನಿರಾಕರಣೆ ಆರೋಪ ಕೇಳಿ ಬಂದಿದೆ.
01:39 PM Nov 29, 2023 IST | Ramya Bolantoor

ಪುತ್ತೂರು: ವರ್ಗಾವಣೆ ಆದೇಶವಾದರೂ ಅಧಿಕಾರ ಸ್ವೀಕರಿಸದ ಸಮಾಜ ಕಲ್ಯಾಣ ಇಲಾಖೆಯ ಮಹಿಳಾ ಅಧಿಕಾರಿಯ ವಿರುದ್ಧ ವರ್ಗಾವಣೆ ಆದೇಶ ನಿರಾಕರಣೆ ಆರೋಪ ಕೇಳಿ ಬಂದಿದೆ.

Advertisement

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯಕ್ಕೆ ವರ್ಗಾವಣೆ ಆದೇಶವನ್ನು ನೀಡಲಾಗಿತ್ತು. ಕರ್ತವ್ಯಕ್ಕೆ ಹಾಜರಾಗದೆ, ಮಂಗಳೂರು ಕಛೇರಿಯಲ್ಲೇ ಬೀಡು ಬಿಟ್ಟಿದ್ದಾರೆ. ಮಂಗಳೂರು ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರ ಕಚೇರಿ ಅಧೀಕ್ಷಕಿ ಕೆ ಎಸ್ ಪಾರ್ವತಿ ಎಂದು ತಿಳಿದು ಬಂದಿದೆ.

ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ವರ್ಗಾವಣೆ ಆದೇಶವನ್ನು ನೀಡಿತ್ತು. ವರ್ಗಾವಣೆ ಆದೇಶವಾದರೂ ಮಂಗಳೂರೇ ಬೇಕೆಂದು ಅಧಿಕಾರಿ ಪಟ್ಟು ಹಿಡಿದಿದ್ದಾರೆ.

Advertisement

ಅತ್ಯಂತ ಹಿಂದುಳಿದ ಪ್ರದೇಶವಾಗಿರುವ ಸುಳ್ಯಕ ತಾಲೂಕಿಗೆ ಸಮಾಜಕಲ್ಯಾಣ ಇಲಾಖೆಗೆ ವರ್ಗಾವಣೆ ಮಾಡಿತ್ತು. ಕಳೆದ ಹಲವು ವರ್ಷಗಳಿಂದ ಖಾಲಿ ಬಿದ್ದಿರುವ ಹುದ್ದೆಗೆ ಅಧಿಕಾರಿ ನೇಮಕವಾದರೂ, ಕರ್ತವ್ಯಕ್ಕೆ ಅಧಿಕಾರಿ ಹಾಜರಾಗಲಿಲ್ಲ.

ಕಚೇರಿ ಸಮಯದಲ್ಲಿ ದಿನಂಪ್ರತಿ ಸೇವೆಗೆ ಲಭ್ಯವಿಲ್ಲದ ಕೆ.ಎಸ್. ಪಾರ್ವತಿ ವಿರುದ್ಧ ಸಾರ್ವಜನಿಕರರು ಅಸಮಾಧನ ವ್ಯಕ್ತಪಡಿಸಿದ್ದಾರೆ. ಹತ್ತು ಗಂಟೆಗೆ ಕಚೇರಿ ಸಮಯ ಆರಂಭವಾದ್ರೂ ಮಧ್ಯಾಹ್ನದವರೆಗೂ ಕಚೇರಿಗೆ ಬಾರದೆ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಅಷ್ಟಕ್ಕೂ ಕೆ.ಎಸ್. ಪಾರ್ವತಿ ಮಂಗಳೂರು ಕಚೇರಿಯನ್ನೇ ಪಟ್ಟುಹಿಡಿದು ಕುಳಿತಿರುವುದಾದ್ರೂ ಯಾಕೇ ಅನ್ನೊದು ಸಾರ್ವಜನಿಕರ ಪ್ರಶ್ನೆ...?
ಸರ್ಕಾರದ ವರ್ಗಾವಣೆ ಆದೇಶವನ್ನೇ ತಳ್ಳಿ ಹಾಕಿದ್ರಾ ಎಂಬ ಅನುಮಾನ ವ್ಯಕ್ತವಾಗಿದೆ.

Advertisement
Tags :
dakshin kannadaLatestNewsNewsKannadaPUTTURsullyaಮಂಗಳೂರು
Advertisement
Next Article