ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್​ ಕದ್ದ ಖದೀಮರು

ನಗರದ ಅಭಿನಯ ಜಂಕ್ಷನ್​​ನಲ್ಲಿರುವ​ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್​ ಅನ್ನು ಕಳ್ಳರು ಕದ್ದು ತಮ್ಮ ಕೈ ಚಳಕವನ್ನು ಪೊಲೀಸರಿಗೆ  ತೋರಿಸಿದ್ದಾರೆ.
11:50 AM Dec 04, 2023 IST | Ashika S

ಬೆಂಗಳೂರು:  ನಗರದ ಅಭಿನಯ ಜಂಕ್ಷನ್​​ನಲ್ಲಿರುವ​ ಪೊಲೀಸ್ ಚೌಕಿಯೊಳಗೆ ಇಟ್ಟಿದ್ದ ಮಹಿಳಾ ಪೊಲೀಸ್ ಅಧಿಕಾರಿಯ ಬ್ಯಾಗ್​ ಅನ್ನು ಕಳ್ಳರು ಕದ್ದು ತಮ್ಮ ಕೈ ಚಳಕವನ್ನು ಪೊಲೀಸರಿಗೆ  ತೋರಿಸಿದ್ದಾರೆ.

Advertisement

ನವೆಂಬರ್​ 22 ರಂದು ಕೆಆರ್ ಮಾರ್ಕೆಟ್  ಸಂಚಾರಿ ಪೊಲೀಸ್​ ಠಾಣೆಯ ಮಹಿಳಾ ಸಿಬ್ಬಂದಿ ಪೊಲೀಸ್ ಚೌಕಿಯೊಳಗೆ ಬಂದು ಬ್ಯಾಗ್ ಇಟ್ಟು ಬಳಿಕ ಸಂಚಾರ ದಟ್ಟಣೆ ನಿಯಂತ್ರಿಸಲು ಚೌಕಿಯಿಂದ ಹೊರಗೆ ಹೋಗಿದ್ದಾರೆ.

ಇದನ್ನು ಗಮನಿಸಿದ ಖದೀಮರು ಮಹಿಳಾ ಪೊಲೀಸ್​ ಸಿಬ್ಬಂದಿಯ ಬ್ಯಾಗ್ ಕದ್ದು ಪರಾರಿಯಾಗಿದ್ದಾರೆ.  ಬ್ಯಾಗ್​ನಲ್ಲಿ ಜನಸ್ನೇಹಿ ಪೊಲೀಸ್ ವ್ಯವಸ್ಥೆಗೆ ಕೊಟ್ಟಿದ್ದ ಬಾಡಿ ವೊರ್ನ್ ಕ್ಯಾಮೆರಾವನ್ನು ಇಟ್ಟಿದ್ದರು.

Advertisement

ಘಟನೆ ಬಗ್ಗೆ ಮಹಿಳಾ ಪೊಲೀಸ್​ ಸಿಬ್ಬಂದಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
LatestNewsNewsKannadaಅಧಿಕಾರಿಕಳ್ಳರುಖದೀಮರುಜಂಕ್ಷನ್ಪೊಲೀಸ್ ಚೌಕಿಬ್ಯಾಗ್ಮಹಿಳಾ ಪೊಲೀಸ್
Advertisement
Next Article