For the best experience, open
https://m.newskannada.com
on your mobile browser.
Advertisement

ವಾಟ್ಸಾಪ್​ನಲ್ಲಿ ಲವ್: ಮದುವೆಯಾಗಲು ಭಾರತದಿಂದ ಪಾಕ್​ಗೆ ಹೋದ ಮಹಿಳೆ

ಜಮ್ಮು ಮತ್ತು ಕಾಶ್ಮೀರ‌ದ ಮಹಿಳೆಯೊಬ್ಬರು ತಮಗೆ ವಾಟ್ಸಾಪ್​ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಒಂದೂವರೆ ವರ್ಷದ ಮಗಳ ಸಮೇತ ಪಾಕಿಸ್ತಾನಕ್ಕೆ ತೆರಳಿದ್ದಾರೆ.
10:50 AM Feb 08, 2024 IST | Ashitha S
ವಾಟ್ಸಾಪ್​ನಲ್ಲಿ ಲವ್  ಮದುವೆಯಾಗಲು ಭಾರತದಿಂದ ಪಾಕ್​ಗೆ ಹೋದ ಮಹಿಳೆ

ಪೂಂಛ್: ಜಮ್ಮು ಮತ್ತು ಕಾಶ್ಮೀರ‌ದ ಮಹಿಳೆಯೊಬ್ಬರು ತಮಗೆ ವಾಟ್ಸಾಪ್​ ಮೂಲಕ ಪರಿಚಯವಾದ ವ್ಯಕ್ತಿಯನ್ನು ಮದುವೆಯಾಗಲು ತನ್ನ ಒಂದೂವರೆ ವರ್ಷದ ಮಗಳ ಸಮೇತ ಪಾಕಿಸ್ತಾನಕ್ಕೆ ತೆರಳಿದ್ದಾರೆ.

Advertisement

ಪೂಂಛ್ ನಿವಾಸಿಯಾಗಿರುವ 22 ವರ್ಷದ ಮಹಿಳೆ ಶಬ್ನಮ್ ಅವರು ಗುಲಾಮ್ ರುಬಾನಿ ಎಂಬುವವರನ್ನು ಮದುವೆಯಾಗಿದ್ದರು. ಅವರು ಈಗ ಇಬ್ಬರು ಹೆಣ್ಣುಮಕ್ಕಳ ತಾಯಿ. 4 ವರ್ಷದ ಹಿರಿಯ ಮಗಳನ್ನು ಅಲ್ಲಿಯೇ ಬಿಟ್ಟು ಒಂದೂವರೆ ವರ್ಷದ ಮಗುವನ್ನು ಮಾತ್ರ ಕರೆದುಕೊಂಡು ಹೋಗಿದ್ದಾಳೆ.

ಮಹಿಳೆಯ ಪತಿ ಭಾನುವಾರ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು, ಜಮ್ಮು ಮತ್ತು ಕಾಶ್ಮೀರದ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಮಹಿಳೆಯ ಮೂವರು ಚಿಕ್ಕಪ್ಪಂದಿರು ಮತ್ತು ಚಿಕ್ಕಮ್ಮ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾರೆ. ಆಕೆ ಪ್ರಿಯಕರನ ಜತೆ ಸಂಪರ್ಕದಲ್ಲಿದ್ದಳು ಎನ್ನಲಾಗಿದೆ.

Advertisement

ಕಳೆದ ವರ್ಷ ಇಂತದ್ದೇ ಎರಡು ಘಟನೆ ನಡೆದಿತ್ತು. ಎರಡು ಮಕ್ಕಳ ತಾಯಿಯಾದ ಅಂಜು ಜುಲೈ 2023ರಲ್ಲಿ ತನ್ನ ಫೇಸ್​ಬುಕ್ ಸ್ನೇಹಿತ ನಸ್ರುಲ್ಲಾರನ್ನು ಮದುವೆಯಾಗಲು ಖೈಬರ್ ಪಖ್ತುಂಖ್ವಾಗೆ ಪ್ರಯಾಣ ಬೆಳೆಸಿದ್ದಳು. ಆಕೆ ತನ್ನ ಇಬ್ಬರು ಮಕ್ಕಳನ್ನು ಭಾರತದಲ್ಲೇ ಬಿಟ್ಟು ಹೋಗಿದ್ದಳು. ಮತ್ತೊಂದು ಪ್ರಕರಣದಲ್ಲಿ ಸೀಮಾ ಹೈದರ್​ ಎಂಬಾಕೆ ತನ್ನ ಮಕ್ಕಳನ್ನು ಕರೆದುಕೊಂಡು ಭಾರತದಲ್ಲಿರುವ ಸಚಿನ್ ಮೀನಾ ಅವರನ್ನು ಮದುವೆಯಾಗಲು ಪಾಕಿಸ್ತಾನದಿಂದ ಬಂದಿದ್ದರು.

Advertisement
Tags :
Advertisement