For the best experience, open
https://m.newskannada.com
on your mobile browser.
Advertisement

ಮಹಿಳೆ ಭೀಕರ ಹತ್ಯೆ : ಹಂತಕರಿಗಾಗಿ ಪೊಲೀಸರ ಹುಡುಕಾಟ

ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟನಲ್ಲಿ ಮಹಿಳೆಯೊಬ್ಬರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶೋಭಾ ಎಂಬುವವರು ಕೊಲೆಯಾದವರು.
05:04 PM Apr 20, 2024 IST | Nisarga K
ಮಹಿಳೆ ಭೀಕರ ಹತ್ಯೆ   ಹಂತಕರಿಗಾಗಿ ಪೊಲೀಸರ ಹುಡುಕಾಟ
ಮಹಿಳೆ ಭೀಕರ ಹತ್ಯೆ : ಹಂತಕರಿಗಾಗಿ ಪೊಲೀಸರ ಹುಡುಕಾಟ

ಬೆಂಗಳೂರು: ಕೊಡಿಗೇಹಳ್ಳಿಯ ಭದ್ರಪ್ಪ ಲೇಔಟನಲ್ಲಿ ಮಹಿಳೆಯೊಬ್ಬರ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಶೋಭಾ ಎಂಬುವವರು ಕೊಲೆಯಾದವರು.

Advertisement

ಶೋಭಾ ಅವರಿಗೆ ಇಬ್ಬರು ಹೆಣ್ಣು ಮಕ್ಕಳಿಂದು ಅವರನ್ನು ಮದುವೆ ಮಾಡಿಕೊಟ್ಟಿದ್ದಾರೆ. ಮಗಳು ತಾಯಿಗೆ ಎಷ್ಟು ಬಾರಿ ಫೋನ್‌ ಮಾಡಿದರೂ ಶೋಭಾ ಸ್ವೀಕರಿಸಿರಲಿಲ್ಲ. ಇದರಿಂದ ಆತಂಕಗೊಂಡು, ಮನೆಗೆ ಬಂದು ನೋಡಿದಾಗ ತಾಯಿ ರಕ್ತಸಿಕ್ತವಾಗಿ ಬಿದ್ದಿದ್ದು ಕಣ್ಣಿಗೆ ಬಿದ್ದಿದೆ.

ಕೂಡಲೇ ಪೊಲೀಸರಿಗೆ ವಿಷಯವನ್ನು ಮುಟ್ಟಿಸಿದ್ದಾರೆ. ಸ್ಥಳಕ್ಕೆ ಕೊಡಿಗೇಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಹಿಳೆಯ ಮೃತದೇಹ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಕೊಲೆ ಪ್ರಕರಣವನ್ನು ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

Advertisement

Advertisement
Tags :
Advertisement