For the best experience, open
https://m.newskannada.com
on your mobile browser.
Advertisement

ಕುಕಿಯ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಪೊಲೀಸರೇ ಕಾರಣ !

ಸಂಘರ್ಷ ಪೀಡಿತ ಮಣಿಪುರದಲ್ಲಿ ಕಳೆದ ವರ್ಷ ಮೇ 3ರಂದು ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪೊಲೀಸರು ಸಂತ್ರಸ್ತರಿಗೆ ನೆರವಾಗದೇ ಇರುವುದೇ ಕೃತ್ಯಕ್ಕೆ ಕಾರಣ ಎಂದು ಉಲ್ಲೇಖಿಸಿದ್ದಾರೆ.
03:55 PM May 01, 2024 IST | Ashitha S
ಕುಕಿಯ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಪೊಲೀಸರೇ ಕಾರಣ

ಇಂಫಾಲ್‌: ಸಂಘರ್ಷ ಪೀಡಿತ ಮಣಿಪುರದಲ್ಲಿ ಕಳೆದ ವರ್ಷ ಮೇ 3ರಂದು ನಡೆದಿದ್ದ ಇಬ್ಬರು ಮಹಿಳೆಯರ ಬೆತ್ತಲೆ ಮೆರವಣಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಪೊಲೀಸರು ಸಂತ್ರಸ್ತರಿಗೆ ನೆರವಾಗದೇ ಇರುವುದೇ ಕೃತ್ಯಕ್ಕೆ ಕಾರಣ ಎಂದು ಉಲ್ಲೇಖಿಸಿದ್ದಾರೆ.

Advertisement

ಅಂದು ಸಂತ್ರಸ್ತ ಮಹಿಳೆಯರು ನೆರವು ಕೋರಿ ಪೊಲೀಸರ ವಾಹನ ಏರಿದ್ದರು, ಆದರೆ ಪೊಲೀಸರು ವಾಹನದ ಕೀ ಇಲ್ಲ ಎನ್ನುವ ನೆಪ ಹೇಳಿ ನೆರವು ನೀಡಲು ನಿರಾಕರಿಸಿದ್ದಾರೆ. ಮಹಿಳೆಯರು ಮಾತ್ರವಲ್ಲ ಇಬ್ಬರು ಪುರುಷರೂ ಪೊಲೀಸರ ವಾಹನ ಏರಿದ್ದರು.

ಆದರೆ ಸಂಘರ್ಷನಿರತರು ಅವರನ್ನು ವಾಹನದಿಂದ ಎಳೆದು ಥಳಿಸುತ್ತಿದ್ದಂತೆ ಸ್ಥಳದಿಂದ ಕಾಲ್ಕಿತ್ತರು ಎಂದು ಕೇಂದ್ರೆಯ ತನಿಖಾ ದಳ ತನ್ನ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಿದೆ.

Advertisement

2023ರ ಮೇ 3-4ರಂದು ನಡೆದಿದ್ದ ಹಿಂಚಾಚಾರದ ವೇಳೆ ಸಾರ್ವಜನಿಕರ ಮೇಲೆ ಭಾರೀ ಹಲ್ಲೆ ನಡೆದಿತ್ತು. ಈ ವೇಳೆ ಸಂತ್ರಸ್ತರು ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳಲು ಕಾಡಿನತ್ತ ಓಡಿದ್ದರು. ಆದರೆ ಅವರನ್ನು ಶಸಾತ್ರಸ್ತ್ರ ಹಿಡಿದುಕೊಂಡೇ ಹಿಂಬಾಲಿಸಿದ್ದ ದಾಳಿಕೋರರು ಕಾಡಿನೊಳಗೆ ಹೊಕ್ಕಿದ್ದವರನ್ನೆಲ್ಲ ಬಲವಂತವಾಗಿ ರಸ್ತೆಗೆ ಎಳೆದು ತಂದು ಥಳಿಸ ತೊಡಗಿದ್ದರು.

ಸಂತ್ರಸ್ತೆಯರಿಬ್ಬರನ್ನು ಒಂದು ಕಡೆ, ಇನ್ನಿಬ್ಬರು ಮಹಿಳೆಯರು, ಅವರ ತಂದೆ ಹಾಗೂ ಗ್ರಾಮದ ಯಜಮಾನನನ್ನು ಮತ್ತೊಂದು ಕಡೆ ನಿಲ್ಲಿಸಿ ಕಿರುಕುಳ ನೀಡಲು ಶುರು ಮಾಡಿದ್ದರು ಎಂದು ಸಿಬಿಐ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಿದೆ

Advertisement
Tags :
Advertisement