For the best experience, open
https://m.newskannada.com
on your mobile browser.
Advertisement

ಮಹಿಳೆಯರ ಬಗೆಗಿನ ಹೇಳಿಕೆಯಿಂದಾಗಿ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಉತ್ತರ ನೀಡಬೇಕು

ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೇಶದ್ರೋಹಿ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡಿ ಸೋಲಿಸಲು ಕಾರಣರಾದ ಶ್ರೀನಿವಾಸ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ಗಣರಾಜ್ಯೋತ್ಸವಕ್ಕೆ ತಿರಸ್ಕರಿಸಿ ಅವಮಾನಿಸಿದಾಗ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರ ನಾರಾಯಣ ಗುರುಗಳ ಸಂದೇಶವನ್ನು ಪಠ್ಯ ಪುಸ್ತಕದಿಂದ ಕಿತ್ತು ಹಾಕಿದಾಗ ಶ್ರೀನಿವಾಸ ಪೂಜಾರಿಯವರ ಜಾತಿ ಸಮಿಕರಣ ಎಲ್ಲಿ ಹೋಗಿತ್ತು ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.
09:54 AM Apr 24, 2024 IST | Ashika S
ಮಹಿಳೆಯರ ಬಗೆಗಿನ ಹೇಳಿಕೆಯಿಂದಾಗಿ  ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಉತ್ತರ ನೀಡಬೇಕು

ಕಾಪು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ದೇಶದ್ರೋಹಿ ಹೇಳಿಕೆ ಮೂಲಕ ಕಾಂಗ್ರೆಸ್ ಪಕ್ಷದ ಬಗ್ಗೆ ಅಪಪ್ರಚಾರ ಮಾಡಿ ಸೋಲಿಸಲು ಕಾರಣರಾದ ಶ್ರೀನಿವಾಸ ಪೂಜಾರಿಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ತಬ್ಧ ಚಿತ್ರವನ್ನು ಕೇಂದ್ರ ಸರ್ಕಾರ ಗಣರಾಜ್ಯೋತ್ಸವಕ್ಕೆ ತಿರಸ್ಕರಿಸಿ ಅವಮಾನಿಸಿದಾಗ ಮತ್ತು ಕರ್ನಾಟಕದ ಬಿಜೆಪಿ ಸರ್ಕಾರ ನಾರಾಯಣ ಗುರುಗಳ ಸಂದೇಶವನ್ನು ಪಠ್ಯ ಪುಸ್ತಕದಿಂದ ಕಿತ್ತು ಹಾಕಿದಾಗ ಶ್ರೀನಿವಾಸ ಪೂಜಾರಿಯವರ ಜಾತಿ ಸಮಿಕರಣ ಎಲ್ಲಿ ಹೋಗಿತ್ತು ಎಂದು ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಹೇಳಿದರು.

Advertisement

ಅವರು ಕಾಂಗ್ರೆಸ್ ಪಕ್ಷದ ವತಿಯಿಂದ ಪಡುಬಿದ್ರಿಯಿಂದ ಕಾಪುವಿನವರೆಗೆ ಜರಗಿದ ಬೃಹತ್ ರ್‍ಯಾಲಿ ಮತ್ತು ಕಾಪು ಪೇಟೆಯಲ್ಲಿ ಜರಗಿದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಕಳೆದ ಬಾರಿ ಕಾಪುವಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮುಖ ಕುಚ್ಚಲಕ್ಕಿ ನೀಡುವ ಶ್ರೀನಿವಾಸ ಪೂಜಾರಿಯವರ ಭರವಸೆ ಏನಾಯಿತು. ಕಾಂಗ್ರೆಸ್ ಗ್ಯಾರೆಂಟಿ ಬಗ್ಗೆ ವಿರೋಧ ಮಾಡುತ್ತಿದ್ದಾರೆ. ಮಹಿಳೆಯರ ಬಗೆಗಿನ ಹೇಳಿಕೆಗಳಿಂದಾಗಿ ಈ ಬಾರಿ ಚುನಾವಣೆಯಲ್ಲಿ ಮಹಿಳೆಯರು ಉತ್ತರ ನೀಡಬೇಕಾಗಿದೆ. ಬಿಜೆಪಿಗೆ ನೈತಿಕತೆ ಬಗ್ಗೆ ಮಾತನಾಡುವ ಹಕ್ಕಿಲ್ಲ. ಪ್ರಚಂಡ ಬಹುಮತದಿಂದ ಜಯಪ್ರಕಾಶ್ ಹೆಗ್ಡೆ ಗೆದ್ದು ಬರುತ್ತಾರೆ ಎಂಬ ವಿಶ್ವಾಸ ವಿನಯ ಕುಮಾರ್ ಸೊರಕೆ ವ್ಯಕ್ತಪಡಿಸಿದರು.

Advertisement

ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ ನಮ್ಮೂರಿನ ಅಂಗನವಾಡಿ, ಶಾಲೆಗಳು, ಪಶು ಆಸ್ಪತ್ರೆ, ಸಾರ್ವಜನಿಕ ಆರೋಗ್ಯ ಕೇಂದ್ರ, ವಿಮಾನ ನಿಲ್ದಾಣ, ಬಂದರು ಕಾಂಗ್ರೆಸ್ ಅವಧಿಯದ್ದು, ಶೋಭಾ ಕರಂದ್ಲಾಜೆ ತಮ್ಮ 10 ವರ್ಷದ ಆಡಳಿತದಲ್ಲಿ ಏನು ಕೊಟ್ಟಿದ್ದೀರಿ ? ಕೇಂದ್ರದಲ್ಲಿ 10 ವರ್ಷ ಆಡಳಿತದಲ್ಲಿದ್ದ ಬಿಜೆಪಿ ಸರಕಾರಕ್ಕೆ ಈ ದೇಶದಲ್ಲಿ ಮನುಷ್ಯರಿದ್ದಾರೆ ಎನ್ನುವುದನ್ನು ಮರೆತು ಈ ದೇಶ ಜಾತಿ, ಮತ ಭೇದ ಇಟ್ಟುಕೊಂಡು ಹೊಡೆದಾಟದ ಪ್ರಯತ್ನ ಮಾಡಿದರೆ, ಕಾಂಗ್ರೆಸ್ ಸ್ವಾತಂತ್ರ್ಯ ಚಳುವಳಿಯಿಂದ ಅಧಿಕಾರದವರೆಗೂ ಕುವೆಂಪುರವರ ಸರ್ವ ಜನಾಂಗದ ಶಾಂತಿಯ ತೋಟದಂತೆ ಸರ್ವರನ್ನು ಸಮಾನತೆಯಿಂದ ಕಂಡದ್ದು ಕಾಂಗ್ರೆಸ್ ಹೆಗ್ಗಳಿಕೆ.

ಕಾಂಗ್ರೆಸ್ ನ ಗ್ಯಾರಂಟಿಯಿಂದ ಹೆಣ್ಣು ಮಕ್ಕಳು ಹಾದಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆ ಖಂಡನೀಯ. ಅಧಿಕಾರದಲ್ಲಿದ್ದಾಗ ಹಾದಿ ತಪ್ಪಿದ್ದು ಜನಸಾಮಾನ್ಯರಿಗೂ ಗೊತ್ತು. ಹೆಣ್ಣು ಮಕ್ಕಳು ಹಾದಿ ತಪ್ಪಿದ್ದಲ್ಲ ಕುಟುಂಬವನ್ನು ಕಟ್ಟಿದ್ದಾರೆ ಎಂದು ಹೇಳಿದರು.

ಈ ಸಂದರ್ಭ ಪಕ್ಷದ ಪ್ರಮುಖರು ಉಪಸ್ಥಿತರಿದ್ದರು.

Advertisement
Tags :
Advertisement