ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವುಮೆನ್ಸ್ ಪ್ರೀಮಿಯರ್ ಲೀಗ್: ಇನ್ನೊಮ್ಮೆ ಯುಪಿ ಮತ್ತು ಡೆಲ್ಲಿ ನಡುವೆ ಮುಖಾಮುಖಿ

ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಈಗ ಮತ್ತೊಮ್ಮೆ ಮುಖಾಮುಖಿ ಆಗಲಿದೆ ಯುಪಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್.‌ ಇದೀಗ 3ನೇ ಬಾರಿ ಕೂಡ ಯುಪಿ ವಾರಿಯರ್ಸ್​ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಿದೆ.
10:29 AM Feb 26, 2024 IST | Ashika S

ಬೆಂಗಳೂರು: ವುಮೆನ್ಸ್ ಪ್ರೀಮಿಯರ್ ಲೀಗ್​ನಲ್ಲಿ ಈಗ ಮತ್ತೊಮ್ಮೆ ಮುಖಾಮುಖಿ ಆಗಲಿದೆ ಯುಪಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್.‌ ಇದೀಗ 3ನೇ ಬಾರಿ ಕೂಡ ಯುಪಿ ವಾರಿಯರ್ಸ್​ಗೆ ಡೆಲ್ಲಿ ಕ್ಯಾಪಿಟಲ್ಸ್ ಸವಾಲು ಹಾಕಿದೆ.

Advertisement

ಕಳೆದ ಸೀಸನ್​ನಲ್ಲಿ ಆಡಿದ್ದ 2 ಪಂದ್ಯಗಳಲ್ಲೂ ಯುಪಿ ತನ್ನ ಸೋಲು ಒಪ್ಪಿಕೊಂಡಿತ್ತು. ಆದರೆ ಈ ಬಾರಿ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ. ಮೊದಲ ಪಂದ್ಯದಲ್ಲಿ ಸೋಲನ್ನು ಅನುಭವಿಸಿದ್ದ ಉಭಯ ತಂಡಗಳು ಈ ಬಾರಿ ಗೆಲುವಿನ ಖಾತೆ ತೆರಯಲು ಸಿದ್ಧವಾಗಿವೆ.

ಈ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ಧ 4 ವಿಕೆಟ್​ಗಳಿಂದ ಸೋಲನುಭವಿಸಿತ್ತು. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಮೊದಲ ಪಂದ್ಯವಾಡಿದ್ದ ಯುಪಿ ವಾರಿಯರ್ಸ್ ತಂಡವು 2 ರನ್​ಗಳಿಂದ ಪರಾಜಯಗೊಂಡಿತ್ತು ಆದರೆ ಈ ಬಾರಿ ಗೆಲ್ಲುವ ಆಪೇಕ್ಷೆ ಹೊತ್ತು ಕಣಕ್ಕೆ ಇಳಿಯಲಿವೆ.

Advertisement

ಆದರೆ ಆಸ್ಟ್ರೇಲಿಯಾ ಆಟಗಾರ್ತಿಯರು ಈ ಎರಡು ತಂಡಗಳ ಮುಂದಾಳತ್ವ ವಹಿಸುತ್ತಿರುವುದು ವಿಷೇಶ.ಆಸ್ಟ್ರೇಲಿಯಾ ತಂಡದ ಮಾಜಿ ನಾಯಕಿ ಮೆಗ್ ಲ್ಯಾನಿಂಗ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಂದಾಳತ್ವವನ್ನು ವಹಿಸಿಕೊಂಡಿದ್ದರೆ, ಆಸೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ಅಲಿಸ್ಸಾ ಹೀಲಿ ನಾಯಕತ್ವದಲ್ಲಿ ಯುಪಿ ವಾರಿಯರ್ಸ್ ಕಣಕ್ಕಿಳಿಯಲಿದೆ. ಹಾಗಾಗಿ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯ ಭಯಂಕರ ರೂಪ ತಾಳುವುದರಲ್ಲಿ ಎರಡು ಮಾತಿಲ್ಲ.

Advertisement
Tags :
LatestNewsNewsKannadaಡೆಲ್ಲಿ ಕ್ಯಾಪಿಟಲ್ಸ್‌ಯುಪಿವುಮೆನ್ಸ್ ಪ್ರೀಮಿಯರ್ ಲೀಗ್
Advertisement
Next Article