ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಜ್ಯದ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಿ: ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ

ಕೆಎಸ್​ಆರ್​​ಟಿಸಿ ಮಹಿಳಾ ಕಂಡಕ್ಟರ್​ ಒಬ್ಬರು ಕಣ್ಣಿರಿಟ್ಟು ವಿಡಿಯೋ ಮಾಡಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
06:42 PM Mar 17, 2024 IST | Ashika S

ಬೆಂಗಳೂರು:  ಕೆಎಸ್​ಆರ್​​ಟಿಸಿ ಮಹಿಳಾ ಕಂಡಕ್ಟರ್​ ಒಬ್ಬರು ಕಣ್ಣಿರಿಟ್ಟು ವಿಡಿಯೋ ಮಾಡಿದ್ದು ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

ಈ ವಿಚಾರವಾಗಿ ನಿಮಗೆ ನಿಜಕ್ಕೂ ಮಹಿಳೆಯರ ಮೇಲೆ ಕಿಂಚಿತ್ತು ಕಾಳಜಿ ಇದ್ದರೆ ಮೊದಲು ರಾಜ್ಯದ ಮಹಿಳೆಯರಿಗೆ ರಕ್ಷಣೆ ನೀಡುವ ಕೆಲಸ ಮಾಡಿ ಎಂದು ಸರ್ಕಾರಕ್ಕೆ ಬಿಜೆಪಿ ವಾಗ್ದಾಳಿ ಮಾಡಿದೆ.

ಈ ಕುರಿತಾಗಿ ಟ್ವೀಟ್ ಮಾಡಿರುವ ಬಿಜೆಪಿ, ಮಹಿಳೆಯರನ್ನು ವಿವಸ್ತ್ರಗೊಳಿಸಿ ಹಲ್ಲೆ ಮಾಡುವುದು, ಮಹಿಳೆಯರ ಮೂಗನ್ನು ಕತ್ತರಿಸುವುದು, ಮಹಿಳಾ ಸರ್ಕಾರಿ ಅಧಿಕಾರಿಗಳ ಮೇಲೆ ಹಲ್ಲೆ ಮಾಡುವುದು, ಮಹಿಳೆಯರಿಗೆ ಅವಾಚ್ಯ ಶಬ್ದಗಳಲ್ಲಿ ನಿಂದಿಸುವುದು, ಇವೇ ಕಾಂಗ್ರೆಸ್​ ಸರ್ಕಾರದ ಅಸಲಿ ಮಹಿಳಾ ಸಬಲೀಕರಣ ನೀತಿಗಳು ಎಂದು ಕಿಡಿಕಾರಿದೆ.

Advertisement

ಬಿಎಂಟಿಸಿ ಮಹಿಳಾ ಕಂಡಕ್ಟರ್‌‌ಗೆ ಅವರ ಮೇಲಧಿಕಾರಿಗಳು ಇನ್ನಿಲ್ಲದಂತೆ ನೀಡಿದ ಕಿರುಕುಳದ ಬಗ್ಗೆ ದೂರು ನೀಡಿ ನಾಲ್ಕು ದಿನಗಳಾದರೂ ಯಾವುದೇ ಕ್ರಮವಿಲ್ಲ, ಕನಿಷ್ಟ ದೂರು ನೀಡಿದ ಮಹಿಳೆಗೆ ಸಾಂತ್ವನವೂ ಹೇಳಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ, ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರೇ, ಇದೇನಾ ನೀವು ಮಹಿಳೆಯರಿಗೆ ನೀಡಿದ “ಶಕ್ತಿ” ಎಂದು ಪ್ರಶ್ನೆ ಮಾಡಿದೆ.

 

Advertisement
Tags :
AT BENGALURULatestNewsNewsKannadaಸಾಮಾಜಿಕ ಜಾಲತಾಣ
Advertisement
Next Article