For the best experience, open
https://m.newskannada.com
on your mobile browser.
Advertisement

ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಮಂಗಳೂರು. ಇದರ ಆಶ್ರಯದಲ್ಲಿ ದಿನಾಂಕ ೦೪.೦೫.೨೦೨೪ ರ೦ದು ಅಭ್ಯಾಸದಲ್ಲಿ ನಿಖರತೆ: ಕೌಶಲ್ಯ ಮೌಲ್ಯಮಾಪನವನ್ನು ಸುಧಾರಿಸುವುದರ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.
05:30 PM May 04, 2024 IST | Ashika S
ಯೇನೆಪೋಯ ವಿಶ್ವ ವಿದ್ಯಾನಿಲಯದಲ್ಲಿ ಕೌಶಲ್ಯ ಮೌಲ್ಯಮಾಪನ ಕಾರ್ಯಾಗಾರ

ಮಂಗಳೂರು: ನರ್ಸಿಂಗ್ ಎಜುಕೇಶನ್ ವಿಭಾಗ, ಯೇನೆಪೋಯ ನರ್ಸಿಂಗ್ ಕಾಲೇಜು, ಹಾಗೂ ಯೇನೆಪೋಯ ವಿಶ್ವ ವಿದ್ಯಾನಿಲಯ, ಇದರ ಆಶ್ರಯದಲ್ಲಿ ದಿನಾಂಕ ೦4.೦5.2024 ರ೦ದು 'ಅಭ್ಯಾಸದಲ್ಲಿ ನಿಖರತೆ: ಕೌಶಲ್ಯ ಮೌಲ್ಯಮಾಪನವನ್ನು ಸುಧಾರಿಸುವುದರ ಕುರಿತು ರಾಜ್ಯ ಮಟ್ಟದ ಕಾರ್ಯಾಗಾರ, ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆಂಡ್ ಮ್ಯಾನೇಜ್ಮೆಂಟ್, ಬಲ್ಮಠ ಇಲ್ಲಿ ನಡೆಯಿತು.

Advertisement

ಡಾ.ಆರ್. ಶ್ರೀವಾಣಿ, ರ‍್ಸಿಂಗ್ ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು, ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಇವರು ಕಾರ್ಯಾಕ್ರಮದ ಮುಖ್ಯ ಅತಿಥಿಯಾಗಿದ್ದರು.

ಡಾ.ಶ್ರೀ ಪತಿ ರಾವ್ ಸಹಉಪಕುಲಪತಿ ,ಯೆನೆಪೋಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾನಿಲಯ ಇದರ ಗೌರವಾನ್ವಿತ
ಅತಿಥಿಯಾಗಿದ್ದರು. ಹಾಗೂ ಡಾ.ಲೀನಾ ಕೆ.ಸಿ. ಪ್ರಾಂಶುಪಾಲರು, ಯೆನೆಪೋಯ ರ‍್ಸಿಂಗ್ ಕಾಲೇಜು, ಇವರು ಅಧ್ಯಕ್ಷತೆವಹಿಸಿದ್ದರು. ಡಾ. ಪ್ರಿಯ ರೇಷ್ಮಾ ಅರಾನ್ಹ, ಉಪಪ್ರಾಂಶುಪಾಲರು, ಸಂಘಟನಾ ಅಧ್ಯಕ್ಷೆ ಹಾಗೂ ಅಂಜುಉಲ್ಲಾಸ್, ಸಂಘಟನಾ ಕಾರ್ಯದರ್ಶಿ ಇವರು ಉಪಸ್ಥಿತರಿದ್ದರು .

Advertisement

ಕಾರ್ಯಾಗಾರದಲ್ಲಿ ವಿವಿಧ ಜಿಲ್ಲೆಗಳಿಂದ ಸುಮಾರು ೮೦ ಪ್ರತಿನಿಧಿಗಳು ಭಾಗವಹಿಸಿದ್ದರು.

Advertisement
Tags :
Advertisement